ಪರಿಚಯ
ಹೆಸರು: ಡಾ.ಸುಂದರ ಕೇನಾಜೆ
ಮೊಬೈಲ್: 94489 51859
ಮಿಂಚಂಚೆ ವಿಳಾಸ: dr.kenaje@gmail.com
ವಿಳಾಸ: ಸುಳ್ಯ ದ.ಕ.
ವೃತ್ತಿ: ಶಿಕ್ಷಣ ಸಂಯೋಜಕ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ
ಪ್ರವೃತ್ತಿ: ಓದು, ಬರವಣಿಗೆ, ಸಂಶೋಧನೆ, ಉಪನ್ಯಾಸ, ವಿಚಾರಮಂಡನೆ, ತರಬೇತಿ, ಯಕ್ಷಗಾನ, ಸಂಘಟನೆ, ಕೃಷಿ, ನಾಟಕ, ಸಿನಿಮಾ, ಸಂಗೀತ ವೀಕ್ಷಣೆ ಮತ್ತು ಸ್ವ-ವಿಶ್ಲೇಷಣೆ.
ಶೈಕ್ಷಣಿಕ ವಿವರ: ಎಂ.ಎ(ಕನ್ನಡ- ಸರಕಾರಿ ಕಾಲೇಜು ಕಾಸರಗೋಡು), ಎಂ.ಎ(ಇತಿಹಾಸ- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು), ಬಿ.ಇಡಿ ( ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು) ಪಿಎಚ್.ಡಿ (ಜಾನಪದ ಕಣ್ಣೂರು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಸಂಶೋಧನಾ ಮತ್ತು ಕನ್ನಡ ಅಧ್ಯಯನ ಕೇಂದ್ರ ಸರಕಾರಿ ಕಾಲೇಜು ಕಾಸರಗೋಡು) ವಿಷಯ:- “ತುಳುನಾಡಿನ ಬತ್ತದ ಬೇಸಾಯ ಒಂದು ಜಾನಪದ ಅಧ್ಯಯನ”, 2006ರಲ್ಲಿ ಡಾಕ್ಟರೇಟ್ ಪದವಿ ಪಡೆಯಲಾಯಿತು. ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಸುಬ್ರಹ್ಮಣ್ಯಭಟ್‍ರವರ ಮಾರ್ಗದರ್ಶನದಲ್ಲಿ ನಡೆಸಿದ ಈಅಧ್ಯಯನದಲ್ಲಿ ತುಳುನಾಡಿನ ಪ್ರಮುಖ ಆಹಾರ ಬೆಳೆಯಾದ ಅಕ್ಕಿಯ ಉತ್ಪಾದನೆಯ ಹಿಂದಿನ ಜಾನಪದ ಪರಿಕಲ್ಪನೆಗಳನ್ನು ದಾಖಲಿಸಲಾಗಿದೆ. ಇದು ತುಳುನಾಡಿನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಕೊಡಗಿನ ಉತ್ತರಭಾಗದಲ್ಲಿ ಕ್ಷೇತ್ರಕಾರ್ಯ ನಡೆಸಿ ಸಿದ್ಧಪಡಿಸಿದ ಪ್ರಬಂಧವಾಗಿದೆ. ಇದು 2010ರಲ್ಲಿ ‘ಬತ್ತದಲೋಕ’ಎನ್ನುವ ಕೃತಿಯಾಗಿ ಪ್ರಕಟಗೊಂಡಿದೆ.
ಕೃತಿಗಳ ಹೆಸರು: ನೇಮ(ಕಥಾಸಂಕಲನ 2000). ಕಾಲಚಿತ್ರ(ವಿಮರ್ಶಾಕೃತಿ 2009), ನೆಲದ ನೆಲೆ(2010), ಬತ್ತದ ಲೋಕ (2010), ಕೊರಪೊಳು ಪಂಡಿನ ಕತೆಕುಲು(ಜಾನಪದ ಕಥಾ ಸಂಕಲನ 2011). ತರವಾಡು(2012) ಹೊನ್ನಾಗುವ ಅನ್ನ, ಬತ್ತ ಜಾನಪದ, ಅನ್ನದ ಬಟ್ಟಲು, (2014), ತುಳು ಜಾನಪದ ಸಾಹಿತ್ಯ ಶಿಕ್ಷಣ(ಸಂಶೋಧನಾಕೃತಿ 2016), ಭಾವದೊಳಗಿನ ಬಿಂಬ (ವಿಜಯವಾಣಿ ಅಂಕಣ ಬರಹ-2017), ಜೋಶಿ ಆಳ ಮನದಾಳ(ವ್ಯಕ್ತಿಪರಿಚಯ 2018), ಅಲ್ಲದೇ ಆರು ಸಂಪಾದಿತ ಕೃತಿ, ಒಂಬತ್ತು ಸ್ಮರಣ ಸಂಚಿಕೆಯ ಸಂಪಾದನೆ,
ಸಾಕ್ಷ್ಯಚಿತ್ರಗಳ ಚಿತ್ರಕತೆ ಮತ್ತು ನಿರ್ದೇಶನ: ಚಿತ್ತ ಚಿತ್ರಣ (ಯಕ್ಷಗಾನ ತಾಳಮದ್ದಳೆ), ಮಾತಿನ ಮಹಾಕಾವ್ಯ ನೀಲಗಾರರ ಸಾಲು (ಮಂಟೇಸ್ವಾಮಿಕಾವ್ಯ), ಕಾವ್ಯಾತೀತ ಕಾಲಪುರುಷರು (ಕೋಟಿಚೆನ್ನಯಕಾವ್ಯ), ಗೊರವರ ಮೈಲಾರ (ಮೈಲಾರಲಿಂಗ ಕಾವ್ಯ), ಪ್ರೊ.ಕೋಡಿ ಬದುಕು-ಬರಹ (ಪ್ರೊ.ಕೋಡಿ ಕುಶಾಲಪ್ಪ ಗೌಡರ ಬಗ್ಗೆ), ಗಾನ ಗಂಧರ್ವ ಪದ್ಯಾಣ (ಪದ್ಯಾಣ ಗಣಪತಿ ಭಟ್ಟರ ಬಗ್ಗೆ)
ಪಠ್ಯಪುಸ್ತಕ ರಚನೆ: ನಲಿಕಲಿ(ಮೂರನೇ ತರಗತಿ), ಸಿರಿಕನ್ನಡ(ಎಂಟನೇ ತರಗತಿ), ತುಳುಎಸಲ್(ಆರನೇ ತರಗತಿ), ಚಿಣ್ಣರ ಜಿಲ್ಲಾದರ್ಶನ(ಪ್ರವಾಸ ಕೈಪಿಡಿ), ತುಳು ಡಿಪ್ಲೊಮ ಕೋರ್ಸ್(ಪಠ್ಯಕ್ರಮ ಮಂಗಳೂರು ವಿವಿ), ಯಕ್ಷಗಾನ ಪಠ್ಯ(ಜೂನಿಯರ್ ಮತ್ತು ಸೀನಿಯರ್ ವಿಭಾಗ).
ಸಾಹಿತ್ಯ ಸಂಘಟನೆ: ಸುಳ್ಯ ತಾಲೂಕು ಯುವ ಬರಹಗಾರರ ಮತ್ತು ಕಲಾವಿದರ ಬಳಗ ಸುಳ್ಯ ಇದರ ಸಂಚಾಲಕ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್‍ನ ಗೌರವ ಕಾರ್ಯದರ್ಶಿ, ಕನ್ನಡ ಜಾಗೃತಿ ಸಮಾವೇಶಗಳ ಸಂಘಟನಾ ಕಾರ್ಯದರ್ಶಿ
ಸಾಮಾಜಿಕ ಸಂಘಟನೆ: ಯುವಕ ಮಂಡಲ, ಜೇಸಿಐ ಸುಳ್ಯ ಹಾಗೂ ಕಲಾ ಸಂಘಗಳ ಪದಾಧಿಕಾರಿ, ಜಾನಪದ ಕೂಡುಕಟ್ಟು ಇದರ ಪ್ರಧಾನ ಕಾರ್ಯದರ್ಶಿ, ಸುಳ್ಯ ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಸ್ಥಾಪಕಾಧ್ಯಕ್ಷ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಥಮ ಅವಧಿಯ ಸದಸ್ಯ, ಶಿಕ್ಷಕರ ಯಕ್ಷಗಾನ ಒಕ್ಕೂಟದ ಕೋಶಾಧಿಕಾರಿ, ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಸಂಚಾಲಕ ಹಾಗೂ ಹಲವು ಸಾಧಕರ ಅಭಿನಂದನಾ ಕಾರ್ಯಕ್ರಮದ ಸಂಘಟನೆ. ಸ್ಕೋಪ್ ಅಧ್ಯಯನ ಕೇಂದ್ರದ ಮೂಲಕ ಮನೋವಿಜ್ಞಾನ ತರಬೇತಿ ಸಂಘಟನೆ, ತಾಲೂಕು ಹಾಗೂ ಇತರ ಕಡೆಗಳಲ್ಲಿ ಕಲೆ, ಸಾಹಿತ್ಯ, ಶಿಕ್ಷಣ, ಮನೋವಿಜ್ಞಾನ ಮತ್ತು ಸಂಸ್ಕಂತಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳ ಸಂಘಟನೆ, ತಾಲೂಕು ಹಂತದಿಂದ ರಾಜ್ಯ ಹಂತದ ವರೆಗೆ ಹಲವಾರು ಗೋಷ್ಠಿ, ಕಮ್ಮಟ, ತರಬೇತಿಯ ಸಂಪನ್ಮೂಲ ವ್ಯಕ್ತಿ. ಆಕಾಶವಾಣಿ ಹಾಗೂ ಇತರ ಹಲವು ಕಾರ್ಯಕ್ರಮಗಳಲ್ಲಿ ಭಾಷಣ, ಉಪನ್ಯಾಸ. ಪತ್ರಕರ್ತನಾಗಿ, ಅಂಕಣಕಾರನಾಗಿ ದುಡಿದ ಅನುಭವ
ಪ್ರಶಸ್ತಿ, ಸನ್ಮಾನ: ಕೆಲವು ಕತೆಗಳಿಗೆ ಬಹುಮಾನ, ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ (2004), ಜೇಸಿಐ ವತಿಯಿಂದ ವಲಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ(2005), ತಾಲೂಕು ರಾಜ್ಯೋತ್ಸವ ಪುರಸ್ಕಾರ.(2006), ಕಾಲ ಚಿತ್ರ ವಿಮರ್ಶಾ ಕೃತಿ ಪ್ರಜಾವಾಣಿಯ ವರ್ಷದ ಓದು (2009) ಕೃತಿಯಾಗಿ ಆಯ್ಕೆ ಹಾಗೂ ಸುದ್ದಿ ಹಬ್ಬಪುರಸ್ಕಾರ (2010).
Comments
Post a Comment