ಸಾಕ್ಷ್ಯಚಿತ್ರ ಪರಿಚಯ

   ಜಾನಪದ ಕಾವ್ಯಗಳನ್ನು ಜಗತ್ತಿಗೆ ಪರಿಚಯಿಸುವ ಮಹತ್ವದ ಸಾಕ್ಷ್ಯಚಿತ್ರ ಯೋಜನೆ
      ಮೈಸೂರಿನ ಅರಿವು ಸಾಂಸ್ಕೃತಿಕ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಸಿಮನೋಹರ ಹಾಗೂ ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆಯವರ ಆಸಕ್ತಿಯ ಹಿನ್ನಲೆಯಲ್ಲಿ ಕನ್ನಡಿ ಕ್ರಿಯೇಷನ್ಸ್ನ ಸಹಯೋಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರ ಹಾಗೂ ಹಿರಿಯ ಜಾನಪದ ವಿದ್ವಾಂಸ ಡಾ.ಹನೂರು ಕೃಷ್ಣಮೂರ್ತಿಯವರ ಮಾರ್ಗದರ್ಶನದಂತೆ ಸಾಕ್ಷ್ಯಚಿತ್ರಗಳ ತಯಾರಿ. ಅಳಿದು ಹೋಗುತ್ತಿರುವ ಮೌಖಿಕ ಪರಂಪರೆಯಲ್ಲಿ ಮಹತ್ವವಾದುದನ್ನು ಸಂಗ್ರಹಿಸಿ ಅಂತರ್ಜಾಲದಲ್ಲಿ ಉಚಿತವಾಗಿ ದೊರಕುವಂತೆ ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ಮೊದಲಿಗೆ ಕರ್ನಾಟಕ ಜಾನಪದದ ಏಳು ಮಾಹಾಕಾವ್ಯಗಳ ಸಾಕ್ಷ್ಯಚಿತ್ರ ತಯಾರಿಸುವುದು ಮತ್ತು ಅದಕ್ಕೆ ಪೂರಕ ಮಾಹಿತಿಗಳನ್ನು ನೀಡುವುದು. ಈ ಏಳು ಮಹಾಕಾವ್ಯಗಳೆಂದರೆ ಮಂಟೆಸ್ವಾಮಿ, ಮಲೆಮಾದೇಶ್ವರ, ಕೊಟಿಚೆನ್ನಯ, ಮೈಲಾರಲಿಂಗ, ಜುಂಜಪ್ಪ, ಸಿರಿ ಮತ್ತು ಎಲ್ಲಮ್ಮ. ಈ ಯೋಜನೆಯನ್ನು 2017ರ ಫೆಬ್ರವರಿ ತಿಂಗಳಲ್ಲಿ ಆರಂಭಿಸಲಾಯಿತು. ಆರಂಭದಲ್ಲಿ ಈಯೋಜನೆಯ ತಂಡದಲ್ಲಿದ್ದ ಒಂದಷ್ಟು ಸದಸ್ಯರು ಸ್ವತಃವೆಚ್ಚವನ್ನು ಹಾಕಿ ಮೊದಲ ಮಂಟೆಸ್ವಾಮಿ ಪರಂಪರೆಯನೀಲಗಾರರ ಕುರಿತು ಸಾಕ್ಷ್ಯಚಿತ್ರವನ್ನು ತಯಾರಿಸಿತು. ಆ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ್ಯ ಡಾ.ಸಿದ್ಧರಾಮಯ್ಯ ವಿಶೇಷ ಆಸಕ್ತಿ ವಹಿಸಿ ಸಾಕ್ಷ್ಯಚಿತ್ರದ ನಿರ್ವಹಣೆಯ ಭಾಗಶಃ ವೆಚ್ಚವನ್ನು ಪ್ರಾಧಿಕಾರದ ವತಿಯಿಂದ ನಿಭಾಯಿಸಲು ಮುಂದೆ ಬಂದರು.
      ಮಂಟೆಸ್ವಾಮಿಯ ಪ್ರಚಾರಕರನ್ನು ನೀಲಗಾರರು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಹಳೆ ಮೈಸೂರು ಭಾಗದಲ್ಲಿರುವ ಇವರು ದೀಕ್ಷೆಯ ಮೂಲಕ ನೀಲಗಾರರಾಗುತ್ತಾರೆ. ಇವರು ಮಂಟೇಸ್ವಾಮಿ, ಸಿದ್ಧಪ್ಪಾಜಿ, ರಾಚಪ್ಪಾಜಿ, ದೊಡ್ಡಮ್ಮ ತಾಯಿ ಇವೇ ಮೊದಲಾದ ಪವಾಡ ಪುರುಷರ ಬಗ್ಗೆ ಹಾಡುಗಳನ್ನು ಕಟ್ಟುತ್ತಾ ಜನರಲ್ಲಿ ಭಕ್ತಿ ಮತ್ತು ಗೌರವವನ್ನು ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಇಂದು ಈ ಪರಂಪರೆಯಲ್ಲಿ ಹಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಡು ಒಂದಷ್ಟು ಜನರನ್ನು ಹುಡುಕಿ ಅವರಲ್ಲಿ ಈ ಪವಾಡ ಪುರುಷರ ಬಗೆಗಿನ ಸಾಲುಗಳನ್ನು ಹಾಡಿಸಿ ಆ ಪರಂಪರೆ ಹೇಗೆ ಸಾಗಿ ಬಂದಿದೆ ಎನ್ನುವುದನ್ನುಮಾತಿನಮಹಾಕಾವ್ಯನೀಲಗಾರರಸಾಲುಎನ್ನುವ ಸಾಕ್ಷ್ಯಚಿತ್ರದಲ್ಲಿ ದಾಖಲಿಸಲಾಗಿದೆ.
       ಮಲೆ ಮಾದೇಶ್ವರ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡು ಪ್ರಾಂತ್ಯದಲ್ಲಿ ಹೆಚ್ಚು ಪ್ರಭಾವಶಾಲಿಯಾದ ದೈವ. ಈತನ ಸಾಧನೆಗಳ ಬಗ್ಗೆ ಅನೇಕ ಹಾಡುಗಳಿವೆ. ನೀಲಗಾರರು ಮತ್ತು ಕಂಸಾಳೆ ಗಾಯಕರು ಇದನ್ನು ಹಾಡುತ್ತಾರೆ. ಇಂದು ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಹಾಡುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೇ ಮಲೆಮಾದೇಶ್ವರ ಪಂಪರೆಯಲ್ಲಿ ಬಹಳ ವ್ಯತ್ಯಾಸವೂ ಆಗಿದೆ. ಇವೆನ್ನೆಲ್ಲ ಒಳಗೊಳ್ಳುವಂತೆಜನ ಮನ ಕಥನ ಮಲೆಮಾದೇಶ್ವರಈ ಸಾಕ್ಷ್ಯಚಿತ್ರ ತಯಾರಾಗಿದೆ.
        ಕೋಟಿ ಚೆನ್ನಯ ತುಳುನಾಡಿನ ಅವಳಿ ವೀಪುರುಷರು. ಸತ್ಯ, ನ್ಯಾಯ ಮತ್ತು ಶೌರ್ಯತ್ವದ ಮೂಲಕ ದುಡಿಯುವ ವರ್ಗದ ಧ್ವನಿಯಾಗಿ ನಿಂತವರು. ಆಳುವ ವರ್ಗಕ್ಕೆ ಸಾವಾಲಾದವರು. ಈ ಇತಿಹಾಸ ಮತ್ತು ಐತಿಹ್ಯವನ್ನು ಸಾರುವ ದೀರ್ಘ ಕಥನ ಕಾವ್ಯ ಪಾಡ್ದನದ ರೂಪದಲ್ಲಿ ಇಂದಿಗೂ ತುಳುನಾಡಿನಲ್ಲಿದೆ. ಆದರೆ ಕೋಟಿಚೆನ್ನಯರ ಆರಾಧನಾ ಸ್ವರೂಪದಲ್ಲಿ ವ್ಯತ್ಯಾಸವಾಗುತ್ತಿದೆ. ನೈಜತೆಯನ್ನು ಬಿಂಬಿಸುವ ನೆಲೆಯಲ್ಲಿಕಾವ್ಯಾತೀತ ಕಾಲ ಪುರುಷರು-ಕೋಟಿಚಿನ್ನಯಎನ್ನುವ ಸಾಕ್ಷ್ಯಚಿತ್ರ ತಯಾರಾಗಿದೆ.
ಮೈಲಾರಲಿಂಗ ಬಹುದೊಡ್ಡ ವ್ಯಾಪ್ತಿ ಮತ್ತು ಸಂಖ್ಯೆಯ ಭಕ್ತರನ್ನು ಒಳಗೊಂಡ ಕರ್ನಾಟಕದ ದೈವ. ಕರ್ನಾಟಕ, ಆಂದ್ರ, ತಮಿಳುನಾಡು ಈ ವ್ಯಾಪ್ತಿಯಲ್ಲಿ ಪಸರಿಸಿರುವ ಈ ದೈವದ ಪ್ರಚಾರಕರು ಗೊರವರು. ಹಾಡು, ಕುಣಿತ, ಭಿಕ್ಷಾಟನೆ ಇತ್ಯಾದಿ ಮಾಧ್ಯಮದ ಮೂಲಕ ಹತ್ತನೇ ಶತಮಾನದಿಂದ ಈ ದೈವದ ಪ್ರಚಾರವನ್ನು ಈ ವರ್ಗ ಮಾಡುತ್ತಾ ಬಂದಿದೆ. ಆದರೆ ಇಂದು ಈ ಪರಂಪರೆಯೂ ಅಳಿದು ಹೋಗುತ್ತಿದೆ. ಇದನ್ನು ಧ್ವನಿಸುವ ನೆಲೆಯಲ್ಲಿಗೊರವರ ಮೈಲಾರಸಾಕ್ಷ್ಯಚಿತ್ರ ರೂಪುಗೊಂಡಿದೆ.
       ಇಷ್ಟು ಸಾಕ್ಷ್ಯಚಿತ್ರಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಲಾ ಒಂದು ಲಕ್ಷದಂತೆ ಅನುದಾನ ನೀಡಿದೆ. ಆದರೆ ಸುಮಾರು ಎರಡು ಲಕ್ಷದಂತೆ ಅಂದಾಜು ಖರ್ಚಾಗಿದೆ. ಇವುಗಳಲ್ಲಿ ಮೂರು ಸಾಕ್ಷ್ಯಚಿತ್ರದ ಚಿತ್ರಕಥೆ ಮತ್ತು ನಿರ್ದೇಶನವನ್ನು ಡಾ.ಸುಂದರಕೇನಾಜೆ ಮಾಡಿದ್ದಾರೆ. ಮಲೆ ಮಾದೇಶ್ವರವನ್ನು ಆರ್.ಸಂತೋಷ್ ನಾಯಕ್ ಮಾಡಿರುತ್ತಾರೆ. ಉಳಿದಂತೆ ಎಲ್ಲಾ ಸಾಕ್ಷ್ಯಚಿತ್ರಗಳ ನಿರ್ಮಾಣ ನಿರ್ವಹಣೆಯನ್ನು ಡಾ.ಎಂ.ಸಿಮನೋಹರ, ಛಾಯಾ ಗ್ರಹಣ ಗುರುಪ್ರಸಾದ್ ಸ್ವಾಮಿ, ರಂಜಿತ್ ಸೇತು, ಸಂಕಲನ ರಂಜಿತ್ ಸೇತು,  ಧ್ವನಿ ಬರ್ಟಿ ಒಲೆವೆರ, ಸಂಗೀತ ದೀಪು ನಾಯರ್, ಕಲೆ ಕಾಜು, ಇಂಗ್ಲೀಷ್ ಉಪಶೀರ್ಷಿಕೆಯನ್ನು ಆರ್.ಸಂತೋಷ್ ನಾಯಕ್ ನಿರ್ಮಾಣ ಹಂತದಲ್ಲಿ ಬಾಬುಪ್ರಸಾದ್, ಮುಳ್ಳೂರು ರಾಜು, ಎಂ.ಸಿಗಿರಿಧರ ಪಂಡಿತ್ ಇವರು ಕಾರ್ಯನಿರ್ವಹಿಸಿರುತ್ತಾರೆ. ಮೊದಲ ಸಾಕ್ಷ್ಯಚಿತ್ರವನ್ನು ಕಳೆದ ಏಪ್ರೀಲ್ ನಲ್ಲಿ ಯೂಟ್ಯೂಬ್ ಅಂತರ್ಜಾಲಕ್ಕೆ ರವಾನಿಸಲಾಗಿದೆ, ಇದನ್ನು ಒಂದು ವರ್ಷಗಳಲ್ಲಿ ಸುಮಾರು ಇಪ್ಪತ್ತೇಂಟು ಸಾವಿರ ಜನ ವೀಕ್ಷಿಸಿದ್ದು ಉಳಿದ ಸಾಕ್ಷ್ಯಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಇದರೊಂದಿಗೆ ಸುಮಾರು ಆರೇಳು ಗಂಟೆಗಳ ಪೂರಕ ಮಾಹಿತಿಗಳನ್ನು ಚಿತ್ರೀಕರಿಸಿದ್ದು ಅವುಗಳಲ್ಲಿ ಕೆಲವನ್ನು ಜಾಲಕ್ಕೆ ಜೊತೆಗೂಡಿಸಲಾಗುತ್ತಿದೆ. ಜನಪದ ಮಹಾಕಾವ್ಯಅದರೊಳಗಿನ ವಸ್ತು ಹಾಗೂ ಆ ಪರಂಪರೆಯನ್ನು ನಾಗರಿಕ ಸಮಾಜಕ್ಕೆ ಪರಿಚಯಿಸುತ್ತಾ ಬಂದ ಸಮುದಾಯಗಳ ಬಗ್ಗೆ ಸುಲಭವಾಗಿ ಮತ್ತು ಅಧಿಕೃತವಾಗಿ ತಿಳಿದುಕೊಳ್ಳುವ ದೃಷ್ಟಿಯಿಂದ ಈ ಸಾಕ್ಷ್ಯಚಿತ್ರಗಳು ಮಹತ್ವವಾದವುಗಳು. ರಾಜ್ಯದ ಅನೇಕ ಜಾನಪದ ವಿದ್ವಾಂಸರು, ಸಂಸ್ಕಂತಿ ಚಿಂತಕರು ಈ ತಂಡದ ಕಾರ್ಯವನ್ನು ಶ್ಲಾಘಿಸಿದ್ದು ಈ ಕಾರ್ಯ ಪೂರ್ಣಗೊಳಿಸಲು ಪ್ರೋತ್ಸಾಹಿಸಿದ್ದಾರೆ.
        ಉಳಿದ ಮೂರು ಮಹಾಕಾವ್ಯಗಳ ಸಾಕ್ಷ್ಯಚಿತ್ರಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ತಂಡ ಇಟ್ಟುಕೊಂಡಿದೆ. ಆದರೆ ಅನುದಾನದ ಸಮಸ್ಯೆ ಕಾಡುತ್ತಿದೆ. “ತಂಡದ ಬಹುತೇಕರು ಯಾವುದೇ ಸಂಭಾವನೆ ಪಡೆಯದೇ ಕೆಲವು ಬಾರಿ ಅನುದಾನವೂ ಸಾಲದೆ ತಮ್ಮದೇ ಹಣದಿಂದ ನಾಲ್ಕು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದೇವೆ. ಯೋಜನೆಯ ಪ್ರಕಾರ ಪೂರಕ ಮಾಹಿತಿಯನ್ನೂ ಅಂತರ್ಜಾಲಕ್ಕೆ ಅಳವಡಿಸಬೇಕಾಗಿದೆ. ಆದರೆ ಹೆಚ್ಚಿನ ವೆಚ್ಚವಾಗುವ ಕಾರಣ ಒಂದನ್ನು ಮಾತ್ರ ಹಾಕಲು ಸಾಧ್ಯವಾಗಿದೆ. ಇದೀಗ ಪ್ರಾಧಿಕಾರದ ಅನುದಾನವೂ ಸಿಗುತ್ತಿಲ್ಲ, ಹಾಗಾಗಿ ಈ ಮಹತ್ವದ ಯೋಜನೆಯನ್ನು ಮುಂದುವರಿಸಲು ಕಷ್ಟವಾಗುತ್ತಿದೆಎಂದು ಹೇಳುತ್ತಾರೆ ನಿರ್ಮಾಣ ನಿರ್ವಾಹಕ ಡಾ.ಎಂ.ಸಿಮನೋಹರ. “ಅಳಿದು ಹೋಗುತ್ತಿರುವ ಮೌಲ್ಯಗಳ ಸಂಗ್ರಹಕಾರ್ಯ ಅತ್ಯಂತ ಜರೂರಾಗಿ ನಡೆಸುವ ಜಾವಾಬ್ದಾರಿ ಎಲ್ಲರ ಮೇಲೂ ಇದೆ. ಆದ್ದರಿಂದ ಸಮರ್ಪಕ ಅನುದಾನ ಸಿಕ್ಕಿದ್ದೇ ಆದರೆ ಕರ್ನಾಟಕದ ಮಹತ್ವದ ಜಾನಪದವನ್ನು ಜಗತ್ತಿಗೆ ಪರಿಚಯಿಸುವ ನಮ್ಮ ಆಸಕ್ತಿಗೆ ಬೆಂಬಲ ಸಿಕ್ಕಂತಾಗುತ್ತದೆಎಂದು ಹೇಳುತ್ತಾರೆ ನಿರ್ದೇಶಕ ಡಾ.ಸುಂದರಕೇನಾಜೆ.
        ವಾಸ್ತವಿಕವಾಗಿ ವಿಶ್ವವಿದ್ಯಾನಿಲಯಗಳು, ಅಕಾಡೆಮಿ, ಪ್ರಾಧಿಕಾರಗಳು ಅಥವಾ ಸರಕಾರವೇ ವಿಶೇಷ ಆಸಕ್ತಿಯಿಂದ ಮಾಡಬೇಕಾದ ಈಕಾರ್ಯವನ್ನು ಸಾಮಾನ್ಯ ಸಂಸ್ಥೆಯೊಂದರ ತಂಡ ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ವ-ಆಸಕ್ತಿಯಿಂದ ಮಾಡುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ದೊರಕಿದೆ. ಆದರೆ ಸಮಗ್ರವಾಗಿ ನಿರ್ವಹಿಸಲು ಉನ್ನತ ಮಟ್ಟದ ಆರ್ಥಿಕ ನೆರವು ಅನಿವಾರ್ಯವಾಗಿಬೇಕಾಗಿದೆ.

Comments