ತುಳು ಸಾಹಿತ್ಯ ಚರಿತ್ರೆ

ತುಳು ಸಾಹಿತ್ಯ ಚರಿತ್ರೆ

ಹೆಚ್ಚ ಜನೊ ಪಾತೆರುನ ಬಾಸೆತ ಸಾಹಿತ್ಯ ಪ್ರಕಾರೊಟು ರಡ್ಡ್ ವಿದೊ ಉಂಡು. ಒಂಜಿ ಜನಪದ ಸಾಹಿತ್ಯೊ ನನೊಂಜಿ ಶಿಷ್ಟ ಸಾಹಿತೊ. ಜನಪದ ಸಾಹಿತ್ಯೊ ದುಂಬು ಐನ ಪಿರವು ಶಿಷ್ಟ ಸಾಹಿತ್ಯೊ. ಜನಪದ ಸಾಹಿತ್ಯೊ ಅಂದಾಜಿ ಮಾಲ್ಪುನ ಕಾಲೊ, ಹೊರತು ಸರಿಯಾತ್ ಕಾಲ ನಿರ್ಣಯ ಮಾಲ್ಪಿಯೆರೆ ಸಾದ್ಯ ಇಜ್ಜಿ. ಆಂಡ ಶಿಷ್ಟ ಸಾಹಿತ್ಯೊ ಅಂಚತ್ತ್, ಕಾಲ ನಿರ್ಣಯೊ ಮಲ್ಪಿಯೆರೆ ಸಾಧ್ಯೊ ಉಂಡು. ಜನಪದ ಸಾಹಿತ್ಯೊಗು ಬಾಯಿಯೇ ಆಧಾರೊ, ಆಂಟ ಶಿಷ್ಟ ಸಾಹಿತ್ಯೊಗು ಬರುವು/ಲಿಪಿಯೇ ಆಧಾರೊ. ಈ ಪ್ರಬಂಧೊಟು ತುಳು ಜನಪದ ಸಾಹಿತ್ಯದ ಬದಲ್ ತುಳು ಶಿಷ್ಟ ಸಾಹಿತ್ಯದ ಬುಳೆಚ್ಚಿಲ್, ಐಟ್ ಬೆನ್ನಿ ಬೆಂದ್‍ನ ಮಾನ್ಯೆರ್ ಬೊಕ್ಕೊ ಅಕುಲೆನ ಕಜ್ಜೊಕಾರ್ಯೊನು ದಾಖಲೆ ಮಾಲ್ತೊಂದು ಉಲ್ಲೆ. ಮೂಲು ಕೊರ್‍ನ ಮಾಹಿತಿ ತುಳು ಶಿಷ್ಟ ಸಾಹಿತ್ಯ ಪ್ರಕಾರೊ, ತುಳು ಸಾಹಿತಿಲೆನ್ ಪುದಾರ್ ಅಕುಲು ಮಲ್ತಿನ ಕೆಲಸೊ ಮಾತ್ರೊನೇ ಅತ್ತಾಂದೆ ಕೃತಿ ವಿಮರ್ಶೆ ಅತ್ತ್.

ಕಾಲಘಟ್ಟದ ಆಧಾರೊಟು ತುಳು ಸಾಹಿತ್ಯ ಚರಿತ್ರೆನ್ ಮೂಜಿ ಭಾಗ ಮಲ್ತ್‍ತ್ ತೂಯೆರೆ ಸಾಧ್ಯೊ ಉಂಡು. ಆ ಮೂಜಿ ಭಾಗೊಡು ಕುಡ ಸಾಹಿತ್ಯ ಪ್ರಕಾರೊನು ಬೇತೆ ಮಲ್ಪಿಯೆರೆ ಸಾಧ್ಯೊ ಉಂಡು.

ಶಿಷ್ಟ ಸಾಹಿತ್ಯದ ಕಾಲದ ಹಿನ್ನಲೆಯಲ್ಲಿ ಮೂರು ವಿಭಾಗವಾಗಿ ಮಾಡಲಾಗಿದೆ.

1. ಪ್ರಾಚೀನ ತುಳು ಸಾಹಿತ್ಯ ಅಥವಾ ಪಳಂತುಳು

2. ಮಿಷನರಿ ಕಾಲದ ತುಳು ಸಾಹಿತ್ಯ

3. ಆಧುನಿಕ ತುಳು ಸಾಹಿತ್ಯ

1. ಆಧುನಿಕ ತುಳು ಮಹಾಕಾವ್ಯ

2. ತುಳು ಕವಿತೆ

3. ತುಳು ನಾಟಕ

4. ತುಳು ಕಾದಂಬರಿ

5. ತುಳು ಸಣ್ಣ ಕತೆ

6. ತುಳು ಭಾಷಾಂತರ

7. ತುಳು ಸಂಕೀರ್ಣ ಸಾಹಿತ್ಯ

8. ತುಳು ಜೀವನ ಚರಿತ್ರೆ.

9. ಸಂಶೋಧನೆ


1 ಪ್ರಾಚೀನ ತುಳು ಸಾಹಿತ್ಯ ಅಥವಾ ಪಳಂತುಳು

600 ವರ್ಷದ ಇತಿಹಾಸ

1 ತುಳು ಶ್ರೀ ಭಾಗವತೋ: ಆದಿ ಮಹಾಕಾವ್ಯ, 1370 ಕಾಲ, ವಿಷ್ಣು ತುಂಗ, 1987 ಪುಣಿಂಚತ್ತಾಯರ ಸಂಪಾದನೆ.

2 ತುಳು ಮಹಾಭಾರತೋ:24ಸಂಧಿ,1657 ಪದ್ಯ, 1383 ಕಾಲ, ಅರುಣಾಬ್ಜ, 2000ಪುಣಿಂಚತ್ತಾಯರ ಸಂಪಾದನೆ.

3 ತುಳು ಕಾವೇರಿ:ಸ್ಕಂದ ಪುರಾಣಂತರ್ಗತ, 15 ಅಧ್ಯಾಯದ ಕೃತಿ.ಮೂರÀನೇ ಒಂದು ಭಾಗ ಮಾತ್ರ ಲಭ್ಯ. 1391 ಕಾಲ,1987ರಲ್ಲಿ ಪುಣಿಂಚತ್ತಾಯರ ಸಂಪಾದನೆ.

4 ತುಳು ರಾಮಾಯಾಣ: ವಿಷ್ಣು ತುಂಗನ ಶ್ರೀ ಭಾಗವತೋದ ಭಾಗ ಅಂತ ಊಹಿಸಲಾಗಿದೆ. ವಿಘ್ನರಾಜ ಎಸ್.ಆರ್ ಸಂಪಾದನೆ, 1370 ಕಾಲ

5 ತುಳು ಕರ್ಣ ಪರ್ವ: ಈ ಕೃತಿ ಪೂರ್ಣ ಉಪಲಬ್ಧವಿಲ್ಲ, ಇದು ಅರಣಾಬ್ಜನ ಸಮಕಾಲಿನ ರಚಿಸಿದ ಕೃತಿಯಾಗಿರಬೇಕು.

6 ತುಳು ದೇವಿ ಮಹಾತ್ಮೆ(ಗದ್ಯ): ಮೊದಲ ಗದ್ಯ ಗ್ರಂಥ, ಅಪೂರ್ವ ತುಳು ಪದಗಳು ಇವೆ. ಕಾಲ 1200, ತೆಂಕಿಲ್ಲಾಯ ಎಂದು ಕವಿಯ ಹೆಸರು ಇದೆ. ಪುಣಿಂಚತ್ತಾಯರ ಸಂಪಾದನೆ.

2. ಮಿಷನರಿ ಕಾಲದ ತುಳು ಸಾಹಿತ್ಯ

ಟಿಪ್ಪು ಮರಣಾ ನಂತರ(1800) ಇಂಗ್ಲೀಷ್ ಶಿಕ್ಷಣ ಆರಂಭ, ಮಿಷನರಿಗಳು ‘ತುಳು ಕಂಟ್ರಿ’ ಎಂದು ಕರೆದರು.

1815ರಲ್ಲಿ ಬಾಸೆಲ್ ಮಿಷನ್ ಸ್ಥಾಪನೆ. ನಂತರದ ಎಲ್ಲಾ ಸಾಹಿತ್ಯ ಚಟುವಟಿಕೆಗೂ ಕಾರಣವಾಯಿತು.

1841ರಲ್ಲಿ ಮಿಷನರಿ ಜಿ.ಎಚ್. ವೈಗ್ಲೆ ಬೊಂಬಾಯಿಯಲ್ಲಿ ಕಲ್ಲಚ್ಚು ಮುದ್ರಣ ಆರಂಭ. ‘ಸತ್ಯವೇದ’ ಕೃತಿಯನ್ನು ತುಳು- ಕನ್ನಡಕ್ಕೆ ಮುದ್ರಣ, ನಂತರ ಪಠ್ಯಪುಸ್ತಕ, ಧರ್ಮ ಪ್ರಚಾರ ಸಾಹಿತ್ಯ, ದಾಸರಪದ, ಪತ್ರಿಕೆ ಇತ್ಯಾದಿ ಮುದ್ರಣ.

1824ರಲ್ಲಿ ಸಿ.ಎಲ್. ಗ್ರೈನರ್ ತುಳು ಭಾಷಾಂತರಗಾರನೆಂದು ಹೆಸರಾದ. ಮತ್ತಾಯನ ಸುವಾರ್ತೆಯನ್ನು ತುಳುವಿಗೆ.

1840ರಲ್ಲಿ ಜೆ.ಜೆ.ಅಮ್ಮನ್ ತುಳುವಿನಲ್ಲ 8 ಸಂಗೀತ ಕೃತಿಗಳ ರಚನೆ

1855ರಲ್ಲಿ ಜಿ.ಕೆಮರರ್ ತುಳು ಭಾಷೆ ಕಲಿತು ತುಳು ನಿಘಂಟಿನ 2000ಪದ. 12 ತುಳು ಸಂಗೀತ ಕೃತಿ.

1857 ಅಗಷ್ಟ್ ಮೇನರ್ ಹತ್ತು ಕೃತಿ ಬರೆದ, ಪಾಡ್ದನ, ಗಾದೆ, ಗೀತೆಗಳನ್ನು ಸಂಗ್ರಹ ಮಾಡಿದ. ಮಹತ್ವದ ಕೆಲಸ.

1874ರಲ್ಲಿ ಜೆ.ಜೆ ಬ್ರಿಗೆಲ್,

1935ರಲ್ಲಿ ಜಿ.ರಿಟ್ಟರ್ ತುಳುವಿಗಾಗಿ ಕೆಲಸ ಮಾಡಿದರು.

ಮಿಷನರಿ ಅವಧಿಯ ದೇಶಿಯ ತುಳು ಸಾಹಿತಿಗಳು

ಅನೇಕರು, ಪಠ್ಯಪುಸ್ತಕ, ಮುದ್ರಣ ಸಹಾಯಕರಾಗಿ, ಭಾಷಾ ಗುರುಗಳಾಗಿ ಕಾರ್ಯ ನಿರ್ವಹಣೆ, ಪಾಡ್ದನ, ಗಾದೆ, ಭೂತಾರಾಧನೆಯ ಕೃತಿಗಳು ಪ್ರಕಟ.

3. ಆಧುನಿಕ ತುಳು ಸಾಹಿತ್ಯ - ಸಾಹಿತ್ಯದ ಅರುಣೋದಯ

-ರಾಜಾಶ್ರಯವಿಲ್ಲದಿದ್ದ ಪ್ರಾಚೀನ ತುಳು, ನಂತರ ಮಿಷನರಿಗಳ ಕಾಲದಲ್ಲಿ ಮಾನ್ಯತೆ.

-ಭಾಷಾ ಪ್ರೇಮ, ಶಿಕ್ಷಣ, ಸಂಸ್ಕøತಿ ಮತ್ತು ಧರ್ಮ ನಿಷ್ಠೆ ಆರಂಭದ ಸಾಹಿತ್ಯದ ಉದ್ದೇಶ.

-1480 ರಿಂದ 1600ರ ವರೆಗೆ ಉಡುಪಿ ವಾದಿರಾಜರು ದಶಾವತಾರದ ಹಾಡುಗಳನ್ನು ರಚಿಸಿದರು.

-ರತ್ನಾಕರ ವರ್ಣಿ, ಮುದ್ದಣರ ಕೃತಿಯಲ್ಲಿ ತುಳು ಛಾಯೆ.

-ಸಂಕಯ್ಯ ಭಾಗವತರ ಪಂಚವಟಿ ವಾಲಿಸುಗ್ರಿವೆರೆ ಕಾಳಗೊ 1887 –ಮೊದಲ ದೇಶಿ ಕೃತಿ.

-ಎಸ್.ಯು ಪಣಿಯಾಡಿ ತುಳು ಸಾಹಿತ್ಯದ ಅರುಣೋದಯಕ್ಕೆ ಹಿನ್ನಲೆಯಾಗಿ ಕೆಲಸ ಮಾಡಿದ ಪ್ರಮುಖ ವ್ಯಕ್ತಿ. ತುಳುವಿಗೆ ವ್ಯಾಕರಣ ಪರಿಚಯಿಸಿದವರು.

-ನಂದಳಿಕೆ ಶೀನಪ್ಪ ಹೆಗ್ಗಡೆ, ನಾರಾಯಣ ಕಿಲ್ಲೆ, ಮಾಧವ ತಿಂಗಳಾಯ, ಸತ್ಯಮಿತ್ರ ಬಂಗೇರ, ವಿಠಲ ಹೆಗ್ಗಡೆ, ಇತರರು. ತುಳು ಸಾಹಿತ್ಯ ಆಲೆಯಲ್ಲಿ ಬರೆಯತೊಡಗಿದ ಪ್ರಮುಖರು.

-ಮಂಜೇಶ್ವರ ಗಣಪತಿ ರಾವ್ ಐಗಳ್ ‘ತುಳುನಾಡಿನ ಅರಸು ಮನೆತನಗಳ ಇತಿಹಾಸ’-ಚರಿತ್ರೆ ನಿರೂಪಿಸಿದ ಕೃತಿ

-ಬಿ.ಎ. ಸಾಲೆತ್ತೂರು-‘ತುಳುವ ಇತಿಹಾಸ’, ಬಡಕಬೈಲು ಪರಮೇಶ್ವರರ ‘ಭಜಗೋವಿಂದಂ’ ಸಂಸ್ಕøತ ಕೃತಿ ತುಳುವಿಗೆ.

-ಗೋವಿಂದ ಪೈ, ಪಂಜೆ ಮಂಗೇಶ ರಾಯರು, ಸೇಡಿಯಾಪು ಕೃಷ್ಣ ಭಟ್ಟರು ಆರಂಭದಲ್ಲಿ ತುಳುವಿಗೆ ಪ್ರೇರಕÀರು.

-1930 ರಿಂದ ತುಳು ಸಾಹಿತ್ಯ ಚಳವಳಿ ಆರಂಭಗೊಂಡಿತು.


1. ಆಧುನಿಕ ತುಳು ಮಹಾಕಾವ್ಯ


ಮಂದಾರ ಕೇಶವ ಭಟ್ಟ ಮಂದಾರ ರಾಮಾಯಣ ಒಂದು ಮಹತ್ವದ ಕೃತಿ. ಇದಕ್ಕೆ ವಾಲ್ಮೀಕಿ ರಾಮಾಯಣವೇ ಪ್ರೇರಣೆ. ಆದರೆ ಜೈನ ರಾಮಾಯಣ, ತೊರವೆ ರಾಮಾಯಣ, ರಾಮಚಂದ್ರ ಚರಿತ್ರೆ, ಶ್ರೀ ರಾಮಾಯಣ ದರ್ಶನ ಇವೆಲ್ಲದರ ಪ್ರಭಾವವೂ ಇದೆ. ತುಳುನಾಡಿನ ಭೌಗೋಳಿಕತೆ ಮತ್ತು ಸಾಂಸ್ಕøತಿಕ ಪರಿಸರವನ್ನು ಬಳಸಿಕೊಳ್ಳಲಾಗಿದೆ.(1977 ಎರಡು ಅಧ್ಯಾಯ, 1981 ಉಳಿದ ಅಧ್ಯಾಯ ಪ್ರಕಟ, ಇದಕ್ಕೂ 10 ವರ್ಷ ಹಿಂದೆ ರಚನೆ. 22 ಅಧ್ಯಾಯ 17,890 ಸಾಲು, ಸುಮಾರು 422 ಪುಟ)

2. ತುಳು ಕವಿತೆ

ಕನ್ನಡದ ಬರವಣಿಗೆಯಲ್ಲಿ ತೊಡಗಿಕೊಂಡ ಪ್ರಮುಖ ಕವಿಗಳ ಒಡನಾಟ, ಅವರ ಬರವಣಿಗೆಗಳ ಪ್ರಭಾವ.

ನರ್ಕಳ ಮಾರಪ್ಪ ಶೆಟ್ಟಿ, ಎಸ್.ಯು ಪಣಿಯಾಡಿ, ನಾರಾಯಣ ಕಿಲ್ಲೆ, ಮೋನಪ್ಪ ತಿಂಗಳಾಯ, ಕೆ. ಗಂಗಾಧರ ರಾಮಚಂದ್ರ, ಸೀತಾ ನದಿ ಗಣಪಯ್ಯ ಶೆಟ್ಟಿ, ಕೆ.ಹೊನ್ನಯ್ಯ ಶೆಟ್ಟಿ, ಕೊರಡ್ಕಲ್ ಶ್ರೀನಿವಾಸ್ ರಾವ್, ಸುಬ್ರಹ್ಮಣ್ಯ ಶಾಸ್ತ್ರಿ, ಜನಾರ್ಧನ ಆಚಾರ್ಯ ಇವೇ ಮೊದಲಾದವರು ಕನ್ನಡ ತುಳು ಎರಡನ್ನು ಬಳಸಿಕೊಂಡು ಕವಿತೆ ರಚಿಸಿದವರು.

ಮೊದಲ ಹಂತ:-

1929 ನರ್ಕಳ ಮಾರಪ್ಪ ಶೆಟ್ಟಿ ‘ಅಮಲ್ ದೆಪ್ಪಡೆ’ ಆಧುನಿಕ ಮೊದಲ(ಕಬಿತೆತ ಕೋಪೆ) ಕವನ ಸಂಕಲನ, 1930 ‘ಪೊರ್ಲಕಂಟ್’ ಅವರ ಮತ್ತೊಂದು ಕವನ ಸಂಕಲನ. ಸುಧಾರಣಾವಾದಿ ಮನೋಧರ್ಮ

1930 ಮೋನಪ್ಪ ತಿಂಗಳಾಯ ‘ತುಳು ಪದ್ಯಾವಳಿ’ (ಅನಿಷ್ಠ ಪದ್ದತಿ ಬಗ್ಗೆ)

ಎಂ.ಪಿ.ವಿ. ಶರ್ಮ, ದಾಮೋದರ ಪುಣಿಂಚಿತ್ತಾಯ, ಬಾಡೂರು ಜಗನ್ನಾಥ ರೈ, ಸೀತಾ ನದಿ ಗಣಪಯ್ಯ ಶೆಟ್ಟಿ ಕವನ ಸಂಕಲನ ಪ್ರಕಟ.

1932 ನಾರಾಯಣ ಕಿಲ್ಲೆ ‘ಕಾನಿಗೆ’- (32 ಪದ್ಯ -ತುಳು ಸಂಸ್ಕøತಿತ ಬಗ್ಗೆ)

1933 ಕೆ. ಗಂಗಾಧರ ರಾಮಚಂದ್ರ ತುಳು ಪದ್ಯ ಮಾಲಿಕೆ (ತಾಯಿ ನೆಲ, ಜಲ, ಭಾಷೆ)

ಕೆಮ್ತೂರು ದೊಡ್ಡಣ್ಣ ಶೆಟ್ಟಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಎರಡನೇ ಹಂತ:-

-ಬಿ. ದೋಜಪ್ಪ ಮಾಸ್ತರ್, ಗಣಪತಿ ದಿವಾಣ, ಬಡಕಬೈಲು ಪರಮೇಶ್ವರ ಈ ಕವಿಗಳು ತುಳು ಜೀವನ ಕ್ರಮ, ಬದಲಾಗುತ್ತಿರುವ ಪರಿಸರದ ಬಗ್ಗೆ ಬರೆದ ಕವಿಗಳು.

-1962 ಗಣಪತಿ ದಿವಾಣ ‘ಮೀಸೆ ಇತ್ತಿ ಅಣುಕುಳು’, 1964 ಮ.ವಿಠಲ ಪುತ್ತೂರು ‘ಕೇದಗೆ’, 1972 ಬಿ. ದೋಜಪ್ಪ ಮಾಸ್ತರ್ ‘ಮಾದಿರನ ಗಾದೆ’, 1974 ಬಡಕಬೈಲು ಪರಮೇಶ್ವರ ‘ತುಳು ನೀತಿ ಪದ್ಯೊಲು’, 70ರ ದಶಕದ ಪ್ರಮುಖ ಗಾದೆಗಳು. ಮಾದಿರನ ಗಾದೆ ಕಾವ್ಯ ಲೋಕದ ನೂತನ ಪ್ರಯೋಗ.

ಯಶವಂತ ಬೋಳೂರು –‘ಬುಲೆ ಕಾಣಿಕೆ’ 23 ಕವನ; ಕನರಾಡಿ ವಾದಿರಾಜ ಭಟ್ –‘ಜೋಕ್ಲು ಪದೊಕುಲು’, ‘ಜೀವನ ಪಾಡ್ದನ’, ರತ್ನಕುಮಾರ್ ಎಂ ಅವರ ‘ರತ್ನನ ಕರ್ಮ’ (30 ಕವನಗಳ ಸಂಕಲನ), ಪಾಲ್ತಾಡಿ ರಾಮಕೃಷ್ಣ ಆಚಾರ್ ‘ಪಚ್ಚೆ ಕುರಲ್’ (28 ಕವನಗಳ ಸಂಕಲನ), ಎಸ್.ಪಿ.ಮಂಚಿ- ‘ಪರ್ಪು’ (ಜನಪದೀಯತೆ ಮತ್ತು ಪ್ರಾದೇಶಿಕತೆಯ ಕವನ), ಸುನೀತ ಶೆಟ್ಟಿ –‘ಪಿಂಗಾರ’ ಮತ್ತು ‘ಸಂಕ್ರಾತಿ’.

ಮೂರನೇ ಹಂತ:-

90ರ ದಶಕದ ನಂತರ ಅನೇಕ ಕವನ ಸಂಕಲನಗಳು ಪ್ರಕಟಗೊಂಡಿವೆ. ತುಳುವಿನಲ್ಲಿ ಕವನ ಬರೆಯುವುದು ಒಂದು ಸಹಜ ಪ್ರಕ್ರಿಯೆಯಾಗಿ ಬೆಳೆದು ಬಂದಿದೆ. ಬಹಳ ಉದಯೋನ್ಮಖ ಕವಿಗಳು ಬೆಳೆದು ಬಂದಿದ್ದಾರೆ. ವಸಂತಕುಮಾರ್ ಪರ್ಲ, ಭಾಸ್ಕರ ರೈ ಕುಕ್ಕುವಳ್ಳಿ, ಕವಿತಾ ರೈ, ವಿಜಯ ಕುಮಾರ್ ಹೆಬ್ಬಾರ್‍ಬೈಲ್, ಹೀಗೆ ಗಂಭೀರ ತೊಡಗಿಸುವಿಕೆ. ಇವತ್ತು ಇದ್ದಾರೆ. ಆ ಎಲ್ಲಾ ಕವನಗಳ ಹೆಸರನ್ನು ದಾಖಲಿಸುವುದು ಕಷ್ಟ ಸಾಧ್ಯ. ಆದರೆ ಈ ಹಂತದಲ್ಲಿ ಹೊರಬರುವ ಕವನಗಳಲ್ಲಿ ಬಂಡಾಯ, ಆಧುನಿಕತೆ, ಶಿಕ್ಷಣದ ಪ್ರಭಾವ, ಸುಧಾರಣೆಯ ಫಲಶೃತಿಗಳನ್ನು ಕಾಣುತ್ತೇವೆ.

3. ತುಳು ನಾಟಕ( ರಂಗಭೂಮಿ ಮತ್ತು ಬರಹ)

-1933 ಮಾಧವ ತಿಂಗಳಾಯರ ‘ಜನಮರ್ಲ್’ ತುಳುವಿನ ಮೊದಲ ಪ್ರಕಟಿತ ನಾಟಕ. (ಆದರ್ಶದ ನೆಲೆಯ ವಸ್ತು)

-ಮೊಗವೀರ ಜ್ಞಾನೋದಯ ಸಮಾಜದ ನಾಟಕ ಸಂಘ

-1940 ಪಡುಬಿದ್ರಿ ಶಿವಣ್ಣ ಹೆಗ್ಗಡೆ ‘ವಿದ್ಯೆದ ತಾದಿ’

-ನವಯುಗ ವಿಶೇಷ ಸಂಚಿಕೆಯಲ್ಲಿ ತುಳುವಿನ ಕಿರುನಾಟಕಗಳು ಪ್ರಕಟಗೊಂಡಿದ್ದವು. ನಿರಂಜನರು ಬರೆಯುತ್ತಿದ್ದರು ಎಂದು ಹೇಳಲಾಗಿದೆ. ‘ಮಡಿತ ಛಡಿ’ ನಿರಂಜನರದೆಂದು ಹೇಳಲಾಗಿದೆ.

-1950-60ರಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ತುಳು ರಂಗಭೂಮಿಯ ಸ್ಥಿತ್ಯಂತರಕ್ಕೆ ಕಾರಣರಾದರು. ನಗರ ಮತ್ತು ಆಧುನಿಕತೆಯನ್ನು ಬೆರಗಿನಿಂದ ನೋಡುವ ನೆಲೆಯಲ್ಲಿ ಈ ನಾಟಕಗಳು ಮಹತ್ವವಾದುವು. ಹಿಂದಿ ಸಿನಿಮಾದ ಪ್ರಭಾವ

-ರಾಮ ಕಿರೋಡಿಯನ್ ಕನ್ನಡ ನಾಟಕಗಳನ್ನು ಬರೆದು ಪಳಗಿದವರು. ರೇಡಿಯೋ ನಾಟಕ ಗ್ರಹಿಕೆಯೂ ಇತ್ತು. ವೃತ್ತಿಯಲ್ಲಿ ಟೈಲರ್. ಎಲ್ಲವೂ ಲಭ್ಯವಿಲ್ಲ. ‘ಕಾಂಪರಗ ಕಟಿಪಿಟಿ’, ‘ಈಪಿರಾಯೆಡ್ಲಾ ಬರವು’, ‘ಸರ್ಪ ಸಂಕಲೆ’ ಇತ್ಯದಿ

-ಎಂ.ಎಸ್ ಇಬ್ರಾಹಿಂ ತುಳು ರಂಗಭೂಮಿಯಲ್ಲಿ ಮುಸ್ಲಿಂ ರಂಗಕರ್ಮಿಯಾಗಿ ಗುರುತಿಸಿದವರು. ‘ಪೊಣ್ಣ್ ಸಮಾಜದ ಕಣ್ಣ್’(1965), ‘ಒಂಜಿ ಪೊಣ್ಣು ಆಜಿ ಕಣ್ಣ್’(1971), ‘ಮೋಕೆದ ಪೊದು’, ‘ನಂಜ್‍ದ ನಾಯಿ’ ಇತ್ಯಾದಿ

-ಬಿ.ಎಸ್.ರಾಯ್ s’ಸಂಶಯದ ಸಂಕಲೆ’(1966)ಮುದ್ರಿತ ಮೊದಲ ಪತ್ತೇದಾರಿ ನಾಟಕ, ವಿಶುಕುಮಾರ್ ‘ಕೋಟಿಚೆನ್ನಯ’(1967)

-ಕೆ,ಎನ್ ಟೇಲರ್ ರಂಗ ವ್ಯವಹಾರದಲ್ಲಿ ಸಾಕಷ್ಟು ಯಶಸ್ಸು ಕಂಡವರು. ನಟ, ನಾಟಕಕಾರ, ಸಿನಿಮಾ ನಿರ್ಮಾಪಕ, ನಿರ್ದೇಶಕ, ಪ್ರಕಾಶಕ ಹೀಗೆ ಬಹುಮುಖ ಪ್ರತಿಭೆ. ‘ಕಲ್ಲ್‍ದ ದೇವೆರ್’ (1968) ‘ಏರ್ ಮಲ್ತಿನ ಅಸ್ತಿ’, ‘ಯಾನ್ ಸನ್ಯಾಸಿ ಆಸೆ’, ‘ವಿಶ್ವಾಮಿತ್ರ ಮೇನಕೆ’.

-ಎಂ ಪುರುಷೋತ್ತಮ (1969) ‘ತಮ್ಮಲೆ ಅರ್ವತ್ತೆ’, ‘ಕಾಸ್‍ದಾಯೆ ಕಂಡನಿ’, ‘ಬೊಲ್ಪುದಾಂತಿನ ತುಡರ್’ ಇತ್ಯಾದಿ.

ಪಿ.ಎಸ್. ರಾಯ್ 1960-90ರ ವರೆಗೆ 30 ನಾಟಕ ಸಂಖ್ಯೆಯ ದೃಷ್ಟಿಯಿಂದ ಇವರೇ ಹೆಚ್ಚು. 1968 ರಲ್ಲಿ ‘ಬಯ್ಯ ಮಲ್ಲಿಗೆ’ ಡಾ.ಸಂಜೀವ ದಂಡೆಕೇರಿ ಜನಪ್ರಿಯ ನಾಟಕ. ಮೊಯ್ದಿನಬ್ಬ, ಕೆ.ಬಿ.ಭಂಡಾರಿ, ಮಚ್ಚೇಂದ್ರನಾಥ ಪಾಂಡೇಶ್ವರ್ ಜನಪ್ರಿಯರು, ಕೌಸ್ಸಿಲರ್ ಕೊಗ್ಗಣ್ಣೆ, ನೆತ್ತೆರಾ ನೀರಾ?

-ಸಂಜೀವ ಎ 70-80 ಮೂರು-ನಾಲ್ಕು ನಾಟಕ. ಕೆ.ಕೆ. ಸಾಲಿಯಾನ್, ಎನ್ ಗೊಪಾಲಕೃಷ್ಣ ಹಲವು ನಾಟಕ.

ಆದರೆ ಅನೇಕ ನಾಟಕಗಳು ಪ್ರಕಟಗೊಳ್ಳುತ್ತಿರಲಿಲ್ಲ ಕಾರಣ ಕೃತಿ ಚೌರ್ಯದ ಭಯ.

-ಎಂ.ವೆಂಕಪ್ಪಯ್ಯ ಕಾರಾಂತ, ಟಿ.ಜಿ ಮುಡೂರು, ಭಾಸ್ಕರ ಬಂಗೇರ ಡಾ.ಬಾಲಕೃಷ್ಣ, ಉದಯಕುಮಾರ್, ಅನಂತರಾಮ ಬಂಗಾಡಿ, ಯು.ಗೋಪಾಲಕೃಷ್ಣ ಶೆಟ್ಟಿ, ಎಚ್. ಶಕುಂತಲಾ ಭಟ್, ಕೆ.ಜೆ ಕೊಕ್ರಾಡಿ, ರತ್ನಾಕರ ರಾವ್ ಕಾವೂರು, ಕೋಡ ಭೋಜರಾಜ ಶೆಟ್ಟಿ, ಸದಾನಂದ ಸುವರ್ಣ, ನಂದಳಿಕೆ ಭೋಜರಾಜ ಶೆಟ್ಟಿ. ವಿಜಯಕುಮಾರ್ ಶೆಟ್ಟಿ, ಸೋಮನಾಥ ಕರ್ಕೇರ, ರಜನಿ ಮುಂಬೈ ನಾಟಕಗಳಲ್ಲಿ ಹೊಸತನವನ್ನು ತಂದವರು.

-ಕುದ್ಕಾಡಿ ವಿಶ್ವನಾಥ ರೈ, ಅಮೃತ ಸೋಮೇಶ್ವರ,(ಜೋಕುಮಾರ ಸ್ವಾಮಿ, ಗೋಂದೊಳು, ಪುತ್ತೂರ್ದ ಪುತ್ತಳಿ, ಎಳುವೆರ್ ದೆಯ್ಯಾರ್, ಆಟೋ ಮುಗಿಂಡ್, ಸಿರಿ, ತುಳು ಪಾಡ್ದನ ಕಲ್ಕುಡೆ, ಪೆರಿಂಜ ಗುತ್ತು ದೇವುಪೂಂಜ), ಡಿ,ಕೆ ಚೌಟ (ಪಿಲಿಪತ್ತಿ ಗಡಸ್), ಮನು ಇಡ್ಯ(ತಿರ್ಸಂಕು, ಬಲಿ) ಆಧುನಿಕ ನಾಟಕಗಳ ಪ್ರಭಾವಕ್ಕೆ ಒಳಗಾಗಿ ನಾಟಕ ರಚಿಸಿದವರು.

4. ತುಳು ಕಾದಂಬರಿ

-ತುಳುವಿನಲ್ಲಿ ಗದ್ಯ ಕಥನ ಆರಂಭವಾದುದು 1935ರಲ್ಲಿ ಶಿನಪ್ಪ ಹೆಗ್ಗಡೆಯವರ ‘ಮಿತ್ಯನಾರಾಯಣ ಕತೆ’ಯ ಮೂಲಕ ಸಾಹಿತ್ಯ ಚಿಂತಕರಲ್ಲಿ ಇದು ಕತೆಯೋ ಕಾದಂಬರಿಯೋ ಎನ್ನುವ ಚರ್ಚೆಗೆ ಕಾರಣವಾಗಿತ್ತು. ಆದರೆ ಇದನ್ನು ಒಂದು ಕಾದಂಬರಿ ಎಂದು ಕರೆಯಲಾಗಿದೆ.

-ಎಸ್.ಯು ಪಣಿಯಾಡಿಯವರ ‘ಸತಿ ಕಮಲೆ’ 1936ರಲ್ಲಿ ಪ್ರಕಟಗೊಂಡಿತು. ಇದು ತುಳುವಿನ ಮೊದಲ ಕಾದಂಬರಿ. ಆ ನಂತರ ಹಲವು ವರ್ಷಗಳ ಕಾಲ ಕಾದಂಬರಿ ಪ್ರಕಟಗೊಳ್ಳಲಿಲ್ಲ.

-1983 ಕೆದಂಬಾಡಿ ಜತ್ತಪ್ಪ ರೈಯವರು ‘ಚೋಮನ ದುಡಿ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ,

-1984 ನಿರಂಜನರ ‘ಚಿರಸ್ಮರಣೆ’ ಕಾದಂಬರಿ ‘ಮದಿಪ್ಪಾಂದಿ ನೆನಪು’.

-1984 ಮಾಹಾಲಿಂಗ ಭಟ್ಟರು ‘ನಾರ್ಣಜ್ಜೆರ್ ಸುಧೆ ತಿರ್ಗಾಯೆರ್’ ಪ್ರಕಟಿಸಿದರು.

-1994 ಕೆ.ಟಿ. ಗಟ್ಟಿ ‘ಬೊಂಬಾಯಿದ ಇಲ್ಲ್’

_ಜಾನಕಿ ಬ್ರಹ್ಮಾವರ ಮೂರು ಕಾದಂಬರಿ ‘ಕುದುರೆದ ಕೇದಗೆ’ (1994), ‘ಕಪ್ಪಗಿಡಿ’ (1998), ಯುಗಮಗ್‍ರ್ನಗ (2002)

–1996 ಕುದ್ಕಾಡಿ ವಿಶ್ವನಾಥ ರೈಯವರ ‘ಲೆಕ್ಕೆಸಿರಿ’, 1997 ಕೃಷ್ಣ ಸಾಲಿಯಾನರ ‘ಚಂದ್ರಳ್ಳಿಡ್ ಬೊಳ್ಳಾಂಡ್’, ಅದೇ ವರ್ಷ ಮಾಧವ ಪೆರಾಜೆಯವರ ‘ನೆಲೆ’, 1999 ಜಿತು ನಿಡ್ಲೆಯವರ ‘ಮೂಜಂಜ ಆನಗ’, 2002 ಜಯಂತಿ ಬಂಗೇರರ ‘ಸೊರಗೆದ ಪೂ’,2003ರಲ್ಲಿ ಪ್ರಭಾಕರ ನೀರ್‍ಮಾರ್ಗರವರ ‘ದಳವಾಯಿ ದುಗ್ಗಣ್ಣೆ’ (ಐತಿಹಾಸಿಕ ಕಾದಂಬರಿ), ಯಜ್ಞಾವತಿ ಕೇಶವರವರ ‘ರಂಗೆನಾ ಮಲೆ ಮಂಗೆನಾ’, 2005ರಲ್ಲಿ ಡಿಕೆ. ಚೌಟರ ‘ಮಿತ್ತಬೈಲು ಯಮುನಕ್ಕೆ’. ಮುದ್ದು ಮೂಡು ಬೆಳ್ಳೆಯವರ ‘ಸತ್ಯದ ಸುರಿಯೊ ಸಾಯದ ಪಗರಿ’. ಕುದ್ರೆಪ್ಪಾಡಿ ಜಗನ್ನಾಥ ಆಳ್ವರ ‘ಗುತ್ತುದ ಗೌರವ’, ಬನ್ನಂಜೆ ಬಾಬು ಅಮೀನರ ಕಾದಂಬರಿಗಳು ಪ್ರಮುಖವಾದುವು.

-ತುಳುವಿನಲ್ಲಿ ಕಾದಂಬರಿ ಪ್ರಕಟವಾದುದು ಕಡಮೆ ಎಂದೇ ಹೇಳಬಹುದು. ಇಲ್ಲಿಯ ಆಚಾರ-ವಿಚಾರ, ನಡೆ-ನುಡಿ, ಸಂಸ್ಕøತಿ, ಸಾಮಾಜಿಕ ವ್ಯವಸ್ಥೆಯನ್ನು ಬಿಂಬಿಸುವ ಕಾದಂಬರಿಗಳ ವಸ್ತುವಾಗಿದೆ.

5. ತುಳು ಸಣ್ಣ ಕತೆ

ಕತಯ ವಿಭಾಗ ತುಳುವಿನಲ್ಲಿ ಒಂದಷ್ಟು ಬೆಳೆದಿದೆ.

-1842ರಲ್ಲಿ ‘ಮತ್ತಾಯನ ಸುವಾರ್ತೆ’ಯಲ್ಲಿ ಧರ್ಮಗ್ರಂಥದ ಕತೆಗಳೂ ಪ್ರಕಟಿಸಿದರು.

-1933 ಮಟ್ಟಾರು ವಿಠಲ ಹೆಗ್ಗಡೆಯವರ ‘ಮದಿಮಾಳತ್ತ್ ಮದಿಮಾಯೆ’ ಇದೇ ತುಳುವಿನ ಪ್ರಥಮ ಸಣ್ಣ ಕತೆ. (ವಿಶಿಷ್ಟ ಸರಳ ನಿರೂಪಣೆಯ ಸಣ್ಣ ಕತೆ ಇದು. ಹಳ್ಳಿಯೊಳಗಿನ ರಂಗುರಂಗಿನ ಜೀವನ ಚಿತ್ರಣ, ವಿಡಂಬನೆ, ಗಾಂದೀ ಸತ್ಯಾಗ್ರಹದ ಪ್ರಭಾª)À.

-ಮತ್ತೆ 35 ವರ್ಷ ನಾಟಕ ಹೊರತು ಪಡಿಸಿ ಬೇರೆ ಕತೆ ಕೃತಿ ಪ್ರಕಟಗೊಳ್ಳಲಿಲ್ಲ.

-1972 ರಮೇಶ್ ಕಾರ್ನಾಡ್ ‘ಪೊಸ ಜೀವನ’, (ಹರಿಜನೋದ್ಧಾರ, ವರದಕ್ಷಿಣೆ ಬಗೆಗಿನ ಕರುಣಾಜನಕ ಕತೆ, ಆದರ್ಶ ಸರಳ ಜೀವನ, ಇತ್ಯಾದಿಗಳು ಕತಾವಸ್ತು.)

-ನಂತರ ಬೆಳಕಿಗೆ ಬಂದ ಅನೇಕ ಪತ್ರಿಕೆಗಳು ಹಲವು ಕತೆಗಳನ್ನು ಪ್ರಕಟಿಸಿದವು.

-1986 ಬಾ ಸಾಮಗ ‘ಕಿನ್ನಯ ಕತೆಕುಲು’ (18 ಕತೆ), 1987 ಮುದ್ದು ಮೂಡುಬೆಳ್ಳೆ ‘ಉದಿಪು’(5 ಕತೆಗಳು), 1988 ಬಾ ಸಾಮಗ 2ನೇ ಕತಾಸಂಕಲನ ‘ಬೊಂಟೆ’ (17 ಕತೆಗಳು), 1989 ಮನೋಹರ ಪ್ರಸಾದ್ ‘ಬದ್‍ಕ್‍ದ ಬಂಡಿ’ (6 ಕತೆಗಳು), 1994 ಪ್ರಭಾಕರ ಶಿಶಿಲರ ‘ಬಾರಣೆ’ (5 ಕತೆಗಳು), 1994 ಮುದ್ದು ಮೂಡುಬೆಳ್ಳೆ 2ನೇ ಸಂಕಲನ ‘ಒಸಾಯೋ’ (10 ಕತೆಗಳು), 1995 ಕೆ.ಅಶೋಕ ಭಂಡಾರಿ ‘ಪಿನಿಹಾಸ್ಯದ ಪನಿಕತೆಕುಲು’, 1996 ವಸಂತಕುಮಾರ್ ಪೆರ್ಲ ಇವರ ಸಂಪಾದಿಕೆಯಲ್ಲಿ ‘ಆಕಾಶವಾಣಿ ಕತೆಕುಲು’, 1996 ಡಿ.ಕೆ ಚೌಟರ ‘ಕರಿಯೆಚ್ಚನ ಕತೆಕುಲು’, 1997 ಜಯಂತಿ ಬಂಗೇರ ‘ಬದಲಾನಗ’ (11 ಕತೆಗಳು,) 1998 ಗಣೇಶ್ ಅಮಿನ್ ಸಂಕಮಾರ್ ‘ಡೋಲು’, 2001 ಡಿ.ಕೆ ಚೌಟರ2ನೇ ಸಂಕಲನ ‘ಪತ್ತ್ ಪಚ್ಚೆಲು’, (10 ಕತೆಗಳು), 2001 ಶಂಕರ ಖಂಡೇರಿ ‘ತನಿಕೆ’, ಬಿ.ಎ ಪ್ರಭಾಕರ ರೈಯವರ ‘ಆತ್ಮ ಜ್ಯೋತಿ’ ಮತ್ತು ‘ಪರಿವರ್ತ£’É, (15 ಕತೆಗಳು),

-ಕೆದಂಬಾಡಿ, ಪಾ. ಸಂಜೀವ ಬೋಲಾರು, ನಾ.ಉಜಿರೆ, ಎಂ ಬಾಬು ಶೆಟ್ಟಿ, ಬಾಬೋಜಿ ರಾವ್ ಕಾರ್ಕಳ, ಚಂದ್ರಹಾಸ ಕಣಂದೂರು, ರಘ ಇಡ್ಕಿದು, ಚಂದ್ರಶೇಖರ ಪಾತೂರು, ಮನು ಇಡ್ಯ, ಅತ್ರಾಡಿ ಅಮೃತ ಶೆಟ್ಟಿ, ಎಂ.ಆರ್ ಬಂಗೇರ, ಎಸ್.ಪಿ ಮಂಚಿ, ಮುಂತಾದವರು ಕತೆ ಬರೆದಿದ್ದಾರೆ.

-ತುಳು ಅಕಾಡೆಮಿ ಪತ್ರಿಕೆ ಮದಿಪು, ತುಳು ಪತ್ರಕೆಗಳಾದ ತುಳುಸಿರಿ, ತುಳುಕೂಟ, ತುಳುನಾಡ್, ತುಳುವೆರೆ ಬಂಧು, ತುಳುವೆರ್, ತುಳುರಾಜ್ಯೊ, ತುಳುಕೂಟೊ, ಪೂವರಿ ಇತ್ಯಾದಿ ಪತ್ರಿಕೆಗಳು ಅನೇಕ ಕತೆಗಳನ್ನು ಪ್ರಕಟಿಸಿವೆ ಮತ್ತು ಪ್ರಕಟಿಸುತ್ತಿವೆ.

6. ತುಳು ಸಂಕೀರ್ಣ ಸಾಹಿತ್ಯ

ಪ್ರವಾಸ ಸಾಹಿತ್ಯ: 1800 ಪ್ರಾನ್ಸಿಸ್ ಬುಕನಾನ್ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ ಬಗ್ಗೆ ದಾಖಲಿಸಿದ್ದಾನೆ. ಕೆ.ಅನಂತರಾಮ್ ದಕ್ಷಿಣ ಕನ್ನಡ ‘ಸಿರಿ ನಾಡು’, ಎಚ್.ಎಲ್. ನಾಗೇಗೌಡರ ‘ಪ್ರವಾಸ ಕಂಡ ಇಂಡಿಯಾ’.

-1996 ಜಾನಕಿ ಬ್ರಹ್ಮಾವರ್ ‘ತಿರ್ಗಾಟದ ತಿರ್ಲ್’ ಮೊದಲ ಪ್ರವಾಸ ಕಥನ. ಎರಡನೇ ಕೃತಿ 1998 ಸುವಾಸಿನಿ ಹೆಗ್ಡೆ ‘ದೇಸಾಂತ್ರೋಡು’. ಮೂರನೇ ಕೃತಿಬಿ.ಎ.ಪ್ರಭಾಕರ ರೈ ‘ನೇಪಾಲ ಅಮೇರಿಕ ಪ್ರವಾಸ’, ಈಗ ಒಂದಷ್ಟು ಇನ್ನೂ ಬಂದಿವೆ.

ಗದ್ಯ ಸಾಹಿತ್ಯ: 1930 ಸತ್ರ ಮಿತ್ರ ಬಂಗೇರ ‘ಅಳಿಯ ಕಟ್ಟ್‍ದ ಕಟ್ಟ್’, ಬಾಲೆಲ್ ಮಿಷನ್ ‘ತುಳು ಸಂಸ್ಕøತಿ’ ಎಂಬ ಲೇಖನ, 1936-37 ರಲ್ಲಿ ಮೂರು ಲೇಖನ ‘ಕತ್ತಲೆಡ್ ತುಳುನಾಡ್’ ಬಾಸೆಲ್ ಮಿಷನ್.

-1942 ಮಂಜಯ್ಯ ಹೆಗ್ಗಡೆ 4 ಕೃತಿ-‘ದೇವೆರ್’, ‘ಪಾಪೊಪುಣ್ಯೋ’, ‘ಜೈನರ್’, ‘ತುಳು ಆರಾಧನೆ’.

-ಸ್ವಾತಂತ್ರ್ಯಾ ನಂತರ ರಾಮಕೃಷ್ಣ ಶೆಟ್ಟಿ ಮೊದಲಿಗರು, ಸಂಸ್ಕøತಿ ಕುರಿತ ಮೂರು ಕೃತಿ,

-1989 ಅ.ಬಾಲಕೃಷ್ಣ ಶೆಟ್ಟಿ ‘ಪಾತೆರ ಕತೆ’, 1997 ಮ.ವಿಠಲ ಶೆಟ್ಟಿ ‘ಪಣೆಪಣೆ ತುಡರ್’, 1998 ಗಣೇಶ ಅಮೀನ್‍ಸಂಕಮಾರ್ ‘ತುಳು ನಡಕೆ’, 1999 ಮುದ್ದು ಮೂಡುಬೆಳ್ಳೆ ‘ಪೂವರಿ’, 2002 ಸುನಿತಾ ಶೆಟ್ಟಿ ‘ಕರಜನ’, 2006 ಹರಿಶ್ಚಂದ್ರ ಪಿ ಸಾಲಿಯಾನ್ ‘ಮದು ಮದಿಪು’, ‘ನುಡಿಕಟ್ಟುಲು’.

ನೆನಪು ಸಂಚಿಕೆ :- 80 ರ ದಶಕದ ನಂತರ ಕು.ಶಿ. ಹರಿದಾಸ ಭಟ್ಟರ ನೇತೃತ್ವದಲ್ಲಿ ನಡೆದ ಮೊದಲ ತುಳು ಸಮ್ಮೇಳನ ‘ಪೊರ್ಲು’ 1983 ಮೊದಲ ನೆನಪು ಸಂಚಿಕೆ

-ಕೆ.ಚಿನ್ನಪ್ಪ ಗೌಡರ ಸಂಪಾದನೆಯಲ್ಲಿ ಅಖಿಲ ಭಾರತ ತುಳು ಸಮ್ಮೇಳನ ‘ಪನಿಯಾರ’ 1986

-ಕೆ ಲೀಲಾವತಿಯವರ ಸಂಪಾದನೆಯಲ್ಲಿ ವಿಶ್ವ ತುಳು ಸಮ್ಮೇಳನ ‘ಕದಿಕೆ’ 1994

-ಯು.ಪಿ ಉಪಾಧ್ಯಾಯ ಸಂಪಾದಕತ್ವದಲ್ಲಿ ಉಡುಪಿ ತುಳು ಕೂಟ ‘ಪತ್ತಾಯೋ’ 1995

-ಒಡಿಯೂರು ಸಮ್ಮೇಳನ ‘ಒಡಿಯೂರ್ದ ತುಡರ್’ 2001

-ತುಳು ಸಾಹಿತ್ಯ ಅಕಾಡೆಮಿ ‘ಮದಿಪು’ 1996 ರಿಂದ ಇದುವರೆಗೆ.

ಹಾಸ್ಯ ಸಾಹಿತ್ಯ:

-‘ತುಳುವೆರ್ ಕುಸಾಲ್ ಕುಸೆಲ್’ 1987 ವಾಮನ ನಂದಾವರ

-‘ತುಳುಟು ಪನಿ ಕತೆ’ 1988 ವಾಮನ ನಂದಾವರ

-‘ಬೆಸ್ನೀರ್ ಕೇಣ್ವೆ’ 1988 ಪಿ.ಈಶ್ವರ ಭಟ್ ಪುತ್ತಿಗೆ

-‘ಮಾಮಿ ಮರ್ಮಾಲ್’ 1995 ಕೆ. ಅಶೋಕ ಎಂ ಭಂಡಾರಿ

-‘ಪುಳಿ ಮುಂಜಿ’ 2000 ಕೋಡು ಭೋಜ ಶೆಟ್ಟಿ

-‘ತೆಲ್ಪು ತೆಲಿಕೆದ ಕತೆಕುಲು’ 2002 ಅ.ಬಾಲಕೃಷ್ಣ ಶೆಟ್ಟಿ

-‘ಈಶ್ವರ ಪುರಾಣ’ 2003 ಪಿ.ಈಶ್ವರ ಭಟ್ ಪುತ್ತಿಗೆ

-‘ಜೋಕುಲು ತೆಲಿಪುಲೆ ತುಕೊ’ 2003 ರತ್ನಾಕರ ಶೆಟ್ಟಿ



7. ತುಳು ಭಾಷಾಂತರ

ಕನ್ನಡದಲ್ಲಿ ಪ್ರಕಟಗೊಂಡ ಕೃತಿಗಳು ತುಳುವಿನಲ್ಲಿ ಅನುವಾದಗೊಂಡಿದೆ. ಕಾವ್ಯಗಳು, ಕಾದಂಬರಿಗಳು ನಾಟಕಗಳು, ಯಕ್ಷಗಾನ ಪ್ರಸಂಗಗಳು, ಸಣ್ಣಕತೆಗಳು, ಹಿಗೆ ಅನೇಕ ಕೃತಿಗಳು ತುಳುವಿಗೆ ಪ್ರಕಟಗೊಂಡಿವೆ. ಭಾಷಾಂತರಗೊಂಡಿದೆ. 20ನೇ ಶತಮಾನದಲ್ಲಿ ಈ ಭಾಷಾಂತರ ಕಾರ್ಯ ಹುಟ್ಟಿಕೊಂಡಿತು.

-ದೇವಿ ಮಹಾತ್ಮೆ ತುಳುವಿನಲ್ಲಿ ಅನುವಾದಗೊಂಡ ಮೊದಲ ಕೃತಿ. ಇದು ಸಂಸ್ಕøತದ ಸಪ್ತಶತಿ ಎಂಬ ಕೃತಿಯ ಅನುವಾದ. ಯಕ್ಷಗಾನ ಕೃತಿಗಳು ಹೆಚ್ಚು ಅನುವಾದಗೊಂಡಿವೆ.

-ಮಂದಾರ ರಾಮಾಯಣ ವಾಲ್ಮೀಕಿ ರಾಮಾಯಣವನ್ನಾಧರಿಸಿ ರಚಿತಗೊಂಡ ಕೃತಿ.

-ಅನೇಕ ಧಾರ್ಮಿಕ ಕೃತಿಗಳು ಕ್ರೈಸ್ತ ಮಿಶನರಿಗಳ ಮೂಲಕ ಅನುವಾದಗೊಂಡಿವೆ.

-‘ಗೀತೆ ಮಲ್ಲಿಗೆ’ ಮೂಲ್ಕಿ ನರಸಿಂಗ ರಾವ್‍ರವರ ಭಗವದ್ಗೀತೆಯ ಅನುವಾದ.

-ಪುಂದರದಾಸರ ಕೀರ್ತನೆಗಳು ತುಳುವಿಗೆ ಬಂದಿವೆ. ವಾದಿರಾಜರ ಲಕ್ಷ್ಮೀ ಶೋಭಾನೆಗಳನ್ನು ದೇವೇಂದ್ರ ಪೆಜತ್ತಾಯರು ಅನುವಾದ ಮಾಡಿದ್ದಾರೆ.

- ಯಕ್ಷಗಾನ ‘ವಾಲಿಸುಗ್ರಿವೆರೆ ಕಾಳಗೊ’, ‘ಪಂಚವಟಿ ವಾಲಿ ಸಂಹಾರ’ ಇವು ತುಳುವಿಗೆ ಬಂದಿದೆ.

-ತುಳುವಿನ ‘ಕಿಟ್ಣ ರಾಜಿ ಪ್ರಸಂಗೊ’ ಕನ್ನಡದ ಕೃಷ್ಣ ಸಂಧಾನವನ್ನು ಬಡಕಂಬೈಲು ಪರಮೇಶ್ವರಯ್ಯ

-ಮಧುಕುಮಾರ್ ನಿಸರ್ಗರವರು ‘ಕೋಟಿಚೆನ್ನಯ’ ಕನ್ನಡದಲ್ಲಿ ತುಳುವಿನ ಅರ್ಥ.

-ಕೆಮ್ತೂರು ದೊಡ್ಡಣ್ಣ ಶೆಟ್ಟಿ ‘ಅಂಗದ ಸಂಧಾನೋ’, ಅನಂತರಾಮ ಬಂಗಾಡಿ ‘ವೀರ ಭಕ್ತೆ ಅತಿಕಾಯೆ’. ಎಸ್.ಪಿ ಶೆಟ್ಟಿಯವರು ಕುಮಾರವ್ಯಾಸ ಭಾರತದ ಒಂದಷ್ಟು ಭಾಗ ‘ತಪ್ಪುಗು ತರದಂಡ’, ಕೆಲಿಂಜ ಸೀತಾರಾಮ ಆಳ್ವ ‘ತುಳು ಹರಿಶ್ಚಂದ್ರ ಕಾವ್ಯ’

-ತುಳು ಜೈಮಿನಿ ಭಾರತ ಡಿ.ವೇದಾವತಿ. ಕೆದಂಬಾಡಿ ಜತ್ತಪ್ಪ ರೈ ಸಿರಿ ರಾಮಾಶ್ವಮೇದ-ಮುದ್ದಣನ ಕೃತಿ.

ಆಧುನಿಕ ಕೃತಿ: ಕೆದಂಬಾಡಿ ‘ಚೋಮನ ದುಡಿ’, ‘ಯಮನ ಸೋಲು’, ‘ಕಾಬೂಲಿವಾಲ’ (ಕಾರಂತ, ಕುವೆಂಪು, ಠಾಕೂರು) ಭೋಜರಾಜ ಕಡಂಬ ‘ರತ್ನನ ಪದೊಕ್ಕುಲು’, ಅಮೃತರು ‘ಶೂದ್ರ ಏಕಲವ್ಯ’( ಕುವೆಂಪು ಮತ್ತು ಗೋವಿಂದ ಪೈ) ಮಜಿಬೈಲು ಭಾಸ್ಕರ ಭಂಡಾರ ನಿರಂಜನರ ‘ಚಿರಸ್ಮರಣೆ’, ಸರ್ವಜ್ಞ ವಚನ ತುಳುವಿನಲ್ಲಿ ಪ್ರಕಟ. ಕಾರ್ನಾಡರ ‘ಯಯಾತಿ’ ಪ್ರೇಮಾನಂದ ಕಿಶೋರ್ ಅನುವಾದಿಸಿದ್ದಾರೆ. ಇಂಗ್ಲೀಷ್ ಪ್ರೇಮಗೀತೆಗಳನ್ನು ಕೆ.ಟಿ. ಗಟ್ಟಿ ಅನವಾದಿಸಿದ್ದಾರೆ.



8. ತುಳು ಜೀವನ ಚರಿತ್ರೆ.

-1996 ರಿಂದ ತುಳು ಸಾಹಿತ್ಯ ಅಕಾಡೆಮಿ ‘ಮದಪ್ಪಿಯರಾವಂದಿ ತುಳುವೆರ್’ ಸಾಧಕರ ಜೀವನ ಚರಿತ್ರೆ

ಅಗಷ್ಟ್ ಮೆನರ್, ಬಾಯಾರು ಸಂಕಯ್ಯ ಭಾಗವತೆರ್, ವಡಕ್ಕಿರ ಪರಮೇಶ್ವರಯ್ಯ ಮೂವೆರ್ ತಿಂಗಳಾಯೆರ್, ಎನ್.ಎ ಶೀನಪ್ಪ ಹೆಗ್ಗಡೆ ಪೊಳಲಿ, ಧರ್ಮಸ್ಥಳ ಮಂಜಯ್ಯ ಹೆಗ್ಗೆಡೆರ್, ನಾರಾಯಣ ಕಿಲ್ಲೆ, ಎಸ್.ಯು ಪಣಿಯಾಡಿ, ದೂಮಪ್ಪ ಮಾಸ್ತರ್, ಮ.ವಿಠಲ ಶೆಟ್ಟಿ, ಸತ್ಯ ಮಿತ್ರ ಬಂಗೇರ, ವಿಶು ಕುಮಾರ್, ನರ್ಕಳ ಮಾರಪ್ಪ,ಶೆಟ್ಟಿ, ಮಂದಾರ ಕೇಶವ ಭಟ್, ಕೆಮ್ತೂರು ದೊಡ್ಡಣ್ಣ ಶೆಟ್ಟಿ, ಬಿ.ರಾಮ ಕಿರೋಡಿಯನ್, ನವಯುಗದ ಹೊನ್ನಯ್ಯ ಶೆಟ್ಟಿ ಕು.ಶಿ ಹರಿದಾಸ್ ಭಟ್ರು, ಅ.ಬಾಲಕೃಷ್ಣ ಪೊಳಲಿ, ಕೆ.ಕೆ ಹೆಬ್ಬಾರ್, ಡಾ.ಶಿವರಾಮ ಕಾರಂತೆರ್, ಕೆದಂಬಾಡಿ ಜತ್ತಪ್ಪ ರೈ. ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.

9. ಸಂಶೋಧನೆ

ಕಳೆದ ನೂರು ವರ್ಷಗಳಲ್ಲಿ ಶಿಷ್ಠ ಮತ್ತು ಜಾನಪದ ಸಂಶೋಧನೆಗಳು ಹೆಚ್ಚು ನಡೆದ ದಾಖಲೆ ತುಳುನಾಡಿನಲ್ಲಿದೆ. ಆರಂಭದಲ್ಲಿ ವಿದೇಶಿ ವಿದ್ವಾಂಸರು ನಂತರದ ದಿನಗಳಲ್ಲಿ ದೇಶಿಯ ವಿದ್ವಾಂಸರು ಈ ಕಾರೈವನ್ನು ಹೆಚ್ಚು ಮಾಡಿದ್ದಾರೆ. ಅದರೊಂದಿಗೆ ಈ ಮೂರು ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾನಿಲಯಗಳ ಅಧ್ಯಯನ ಕೇಂದ್ರಗಳು, ಉನ್ನತ ಶಿಕ್ಷಣ ಕೇಂದ್ರಗಳು ಸಂಶೋಧನಾ ಕಾರ್ಯಕ್ಕೆ ಪ್ರೇರಣೆಯಾಗಿವೆ. ತುಳು ಸಾಹಿತ್ಯ, ಸಂಸ್ಕøತಿ, ಧರ್ಮ, ಕಲೆ, ಜಾನಪದ, ಕೃಷಿ, ವಾಣಿಜ್ಯ, ವ್ಯಾಪಾರಕ್ಕೆ ಸಂಬಂಧಿಸಿದ ಸಂಶೋಧನೆಗಳು ಬಹಳಷ್ಟು ನಡೆದಿವೆ. ತುಳುನಾಡಿನಾದ್ಯಂತ ಅನೇಕ ಸಂಶೋಧಕರು ಕ್ಷೇತ್ರ ಕಾರ್ಯ ಮಾಡಿ ಹಲವು ಹೊಸ ವಿಷಯಗಳನ್ನು ಸಂಶೋಧಿಸಿ ದಾಖಲಿಸಿದ್ದಾರೆ.


ಡಾ.ಸುಂದರ ಕೇನಾಜೆ

Comments