ಪ್ರೋ.ಕೋಡಿ ಕುಶಾಲಪ್ಪ ಗೌಡ
ಪ್ರೋ.ಕೋಡಿ ಕುಶಾಲಪ್ಪ ಗೌಡ ಈ ನಾಡು ಕಂಡ ಘನ ವಿದ್ವಾಂಸರು, 84ರ ಹರೆಯದ ಪ್ರೊ ಕೋಡಿ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾವಿಜ್ಞಾನಿ, ದ್ರಾವಿಡ ಭಾಷಾ ಅಧ್ಯಯನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದವರು. ತಮಿಳುನಾಡಿನ ಅಣ್ಣಾಮಲೈ ವಿ.ವಿ ಮತ್ತು ಮದ್ರಾಸ್ ವಿ.ವಿಯಲ್ಲಿ ಸುಮಾರು 36 ವರ್ಷಗಳ ಕಾಲ ಅಧ್ಯಾಪನ ನಡೆಸಿದ ಅನುಭವಿ. ಭಾಷಾಶಾಸ್ತ್ರದಲ್ಲಿ ಅನೇಕ ಸಂಶೋಧನೆ ನಡೆಸಿದಲ್ಲದೇ ಸೃಜನಶೀಲ ಸಾಹಿತಿಯಾಗಿ 20 ಕ್ಕೂ ಮಿಕ್ಕ ಮೌಲಿಕ ಕೃತಿ,ನೂರಾರು ಲೇಖನಗಳನ್ನು ರಚಿಸಿದವರು. ಕನ್ನಡ-ಇಂಗ್ಲೀಷ್-ಸಂಸ್ಕøತದ ಪಾಂಡಿತ್ಯದ ಜೊತೆಗೆ ತಮಿಳು,ತೆಲುಗು,ಮಲೆಯಾಳಂ ಭಾಷೆಯಲ್ಲೂ ವ್ಯವಹರಿಸಬಲ್ಲವರು. ಅರೆಗನ್ನಡ ಮತ್ತು ಇತರ ಉಪಭಾಷೆಗಳಲ್ಲೂ ವಿಶೇಷ ಅಧ್ಯಯನ ನಡೆಸಿ ಅದಕ್ಕೆ ಮಾನ್ಯತೆ ನೀಡಿದವರು. ಸುಳ್ಯದಲ್ಲಿ 1994ರಲ್ಲಿ 7 ನೇ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯದವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎರಡು ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಅಕಾಡೆವಿಯ ಗೌರವ ಪ್ರಶಸ್ತಿ ಹಾಗೂ ಅನೇಕ ಗೌರವ ಸನ್ಮಾನ,ಪುರಸ್ಕಾರಗಳು ಅರಸಿ ಬಂದು ಪಡೆದವರು. ಶಿಷ್ಯಂದಿರ ಪ್ರೀತಿಯ ಗುರು, ಮಾತ್ರವಲ್ಲದೇ ಸರಳ ಸಜ್ಜನಿಕೆಯ ಹಾಗೂ ವಿದ್ವತ್ ಮತ್ತು ವಿನಯ ಅವಿರ್ಭವಿಸಿದ ವ್ಯಕ್ತಿತ್ವದ ಸಾಹಿತಿ.
1931ರ ಮೇ30 ರಂದು ಕೊಡಗಿನ ಪೆರಾಜೆಯ ಕೋಡಿಯಲ್ಲಿ ಜನಿಸಿದ ಕುಶಾಲಪ್ಪ ಗೌಡರ ತಂದೆ ಕೃಷ್ಣಪ್ಪ ಗೌಡ ತಾಯಿ ಗೌರಮ್ಮ. ಪೆರಾಜೆ, ಸುಳ್ಯ, ಪತ್ತೂರು, ಮಡಿಕೇರಿ, ಮದ್ರಾಸ್‍ನಲ್ಲಿ ತನ್ನ ವ್ಯಾಸಂಗ ಮುಗಿಸಿದರು. ಅಣ್ಣಾಮಲೈ ವಿ.ವಿಯಲ್ಲಿ ಡಿಪ್ಲೋಮಾ ಇನ್ ಲಿಂಗ್ವಿಸ್ಟಿಕ್ಸ್, ಎಂ.ಲಿಟ್, ಪಿಎಚ್.ಡಿ ಪದವಿ ಪಡೆದುಕೊಂಡರು. 1955ರಿಂದ ಅಣ್ನಾಮಲೈ ವಿ.ವಿ ಮತ್ತು ಮದ್ರಾಸ್ ವಿ.ವಿಯಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿ ಸುಮಾರು 36ವರ್ಷಗಳ ವರೆಗೆ ಸೇವೆ ಸಲ್ಲಿಸಿದರು. ಈ ಮಧ್ಯೆ1955ರಲ್ಲಿ ಕಮಲಾರವರನ್ನು ವಿವಾಹವಾದ ಇವರು 3 ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ. 1969 ರಿಂದ 70ರ ವರೆಗೆ ಇಂಗ್ಲೇಡಿನ ಮ್ಯಾಂಚಸ್ಟರ್ ವಿವಿಯಲ್ಲಿ 10 ತಿಂಗಳ ವಿಶೇಷ ಉಪನ್ಯಾಸ ನೀಡಿದ್ದಾರೆ.
ವಡ್ಡಾರಾಧನೆ ಭಾಷಿಕ ಅಧ್ಯಯನ ಎಂ.ಲಿಡ್ ಪದವಿ ,ಕ್ರಿ.ಶ.1000 ದಿಂದ 1400ರ ವರೆಗಿನ ದಕ್ಷಿಣ ಕನ್ನಡ,ಉತ್ತರ ಕನ್ನಡ,ಕೊಡಗು ಜಿಲ್ಲೆಗಳ ಕನ್ನಡ ಶಾಸನಗಳ ಭಾಷಿಕ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಅಲ್ಲದೇ ಇಂಗ್ಲೀಷ್‍ನಿಂದ ಕನ್ನಡಕ್ಕೆ 1.ಗೌಡ ಕನ್ನಡ 2.ಎ ಗ್ರಾಮರ್ ಆಫ್ ಕನ್ನಡ 3.ದ್ರವಿಡಿಯನ್ ಕೇಸ್ ಸಿಸ್ಟಮ್ 4.ದ ಕೋರ್ಸ್ ಇನ್ ಮೊಡರ್ನ್ ಕನ್ನಡ. ಕನ್ನಡದಲ್ಲಿ 5.ಕಂಬನ್ (ಇಂಗ್ಲೀಷ್‍ನಿಂದ) 6.ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು 7.ಕನ್ನಡ ಭಾಷಾವಲೋಕನ 8.ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಅಧ್ಯಯನ 9.ಮಧುರಾವಿಜಯಂ (ಸಂಸ್ಕøತದಿಂದ) 10.ಊರೊಸಗೆ(ಬಾಲ್ಯ) 11.ಕಡಲತಡಿಯ ಕನವರಿಕೆ(ಲಘುಪ್ರಬಂಧ) 12.ತಿರುಳು ಕನ್ನಡ ಮತ್ತು ಸಮಾಜ 13.ಕಮಲ ನಿಮೀಲನ 14.ಕನ್ನಡ ವ್ಯಾಕರಣ 15.ಬೆಟ್ಟದ ಮೆಲೊಂದು ಮನೆಯ ಮಾಡಿ 16.ಕಂಬ ರಾಮಾಯಣ 17.ಬಯ್ಯೋಗ್ರಫಿ 18.ನೂರಾರು ಮೌಲಿಕ ಲೇಖನಗಳನ್ನು ಬರೆದಿದ್ದಾರೆ. 2005 ರಲ್ಲಿ ಇವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಡೆದು ನುಡಿ ಒಸಗೆ ಎಂಬ ಅಭಿನಂದನಾ ಸಂಪುಟ ಅರ್ಪಿಸಲಾಯಿತು. ತನ್ನ 84ರ ಹರೆಯದಲ್ಲೂ ಬತ್ತದ ಉತ್ಸಾಹದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಕೋಡಿ ಬರೆಯುವ ದಾಹವನ್ನು ಇರಿಸಿಕೊಂಡಿದ್ದಾರೆ.
ಪ್ರೋ.ಕೋಡಿ ಕುಶಾಲಪ್ಪ ಗೌಡ
30-05-1931 ಪೆರಾಜೆಯ ಕೋಡಿ
ಘನ ವಿದ್ವಾಂಸ
ಅಂತರರಾಷ್ಟ್ರೀಯ ಭಾಷಾವಿಜ್ಞಾನಿ
ದ್ರಾವಿಡ ಭಾಷಾ ಅಧ್ಯಯನ
35 ವರ್ಷ ವಿ.ವಿ ಅಧ್ಯಾಪನ
ಸೃಜನಶೀಲ ಸಾಹಿತಿ
ಕನ್ನಡ-ಇಂಗ್ಲೀಷ್-ಸಂಸ್ಕøತ ಪಾಂಡಿತ್ಯ
ಉಪಭಾಷಾ ಅಧ್ಯಯನ
7 ನೇ ದ.ಕ.ಜಿ. ಕನ್ನಡ ಸಾಹಿತ್ಯ ಸಮ್ಮೇಳನ
20 ಕ್ಕೂ ಮಿಕ್ಕ ಮೌಲಿಕ ಕೃತಿ,ನೂರಾರು ಲೇಖನ
ರಾಜ್ಯೋತ್ಸವ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪ್ರೀತಿಯ ಗುರು
ಸರಳ ಸಜ್ಜನಿಕೆ ವಿದ್ವತ್ ಮತ್ತು ವಿನಯ
ಪ್ರಮುಖ ಕೃತಿಗಳು
ಇಂಗ್ಲೀಷ್‍ನಿಂದ ಕನ್ನಡಕ್ಕೆ
1.ಗೌಡ ಕನ್ನಡ
2.ಎ ಗ್ರಾಮರ್ ಆಫ್ ಕನ್ನಡ
3.ದ್ರವಿಡಿಯನ್ ಕೇಸ್ ಸಿಸ್ಟಮ್
4.ಅ ಕೋರ್ಸ್ ಇನ್ ಮೊಡರ್ನ್ ಕನ್ನಡ
ಕನ್ನಡದಲ್ಲಿ
5.ಕಂಬನ್ (ಇಂಗ್ಲೀಷ್‍ನಿಂದ)
6.ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು
7.ಕನ್ನಡ ಭಾಷಾವಲೋಕನ
8.ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಅಧ್ಯಯನ
9.ಮಧುರಾವಿಜಯಂ (ಸಂಸ್ಕøತದಿಂದ)
10.ಊರೊಸಗೆ(ಬಾಲ್ಯ)
11.ಕಡಲತಡಿಯ ಕನವರಿಕೆ(ಲಘುಪ್ರಬಂಧ)
12.ತಿರುಳು ಕನ್ನಡ ಮತ್ತು ಸಮಾಜ
13.ಕಮಲ ನಿಮೀಲನ
14.ಕನ್ನಡ ವ್ಯಾಕರಣ
15.ಬೆಟ್ಟದ ಮೆಲೊಂದು ಮನೆಯ ಮಾಡಿ
16.ಕಂಬ ರಾಮಾಯಣ
17.ಬಯ್ಯೋಗ್ರಫಿ
ಪ್ರಮುಖರ ಮಾತು
ಪ್ರಶಾಂತ ಗಂಭೀರ ವಿದ್ವದ್ ರಸಿಕ- ರಾಷ್ಟ್ರಕವಿ ಪ್ರೊ.ಜಿ.ಎಸ್ ಶಿವರುದ್ರಪ್ಪ
ಕನ್ನಡಪರ ಕಾಳಜಿ ಡಾ. ಕೋಡಿ- ಡಾ.ವಿರೇಂದ್ರ ಹೆಗ್ಗಡೆ
ನಾಡಿನ ಕೀರ್ತಿ ಪ್ರೊ.ಕೋಡಿ ಕುಶಾಲಪ್ಪ ಗೌಡ –ಡಾ.ಕುರುಂಜಿ
ವಿನಯಬೂಷಿತ ವಿದ್ವಾಂಸ-ಪ್ರೊ.ಅಮೃತ ಸೋಮೇಶ್ವರ
ತುಂಬಿದ ಕೊಡ ಪ್ರೊ.ಕೋಡಿ-ವಿದ್ವಾನ್ ಟಿ.ಜಿ.ಮುಡೂರು
ವಿದ್ವತ್ತು ಸೌಜನ್ಯದ ಸಂಗಮ-ಡಾ.ಸಿ.ಪಿ.ಕೆ
ಹೃದ್ಯ ಭಾಷಾ ಶೈಲಿಯ ಸಂಶೋಧಕ-ಡಾ.ಸಂಗಮೇಶ ಸವದತ್ತಿಮಠ
ವಿನಯದ ಸಾಕಾರ ಮೂರ್ತಿ-ಡಾ.ಎಸ್.ವಿದ್ಯಾಶಂಕರ್
ಪ್ರತಿಭೆ ಪಾಂಡಿತ್ಯಗಳ ಕೋಡಿ-ಸುಬ್ರಾಯ ಚೊಕ್ಕಾಡಿ
ಇವರು ಕನ್ನಡದ ನಾಲಿಗೆ-ಕೆ.ಆರ್.ವಿದ್ಯಾಧರ್
ಪ್ರಮುಖ ಶಿಷ್ಯರು:-ಪ್ರೊ.ವಿಲಿಂ ಮಾಡ್ತ, ಡಾ.ಹರಿಕೃಷ್ಣ ಭರಣ್ಯ, ಪ್ರೊ. ಬಿಳಿಮಲೆ, ಡಾ.ಸುಬ್ಬಣ್ಣ ರೈ, ಪ್ರತಿಭಾ ನಂದಕುಮಾರ್, ಪ್ರೊ,ಚಿನ್ನಪ್ಪ ಗೌಡ, ಡಾ.ಸುಬ್ರಹ್ಮಣ್ಯ ಭಟ್, ಜೈನುಲ್ಲಾ ಬಳ್ಳಾರಿ
(ಪ್ರಸಾರ: ಸುದ್ದಿಚಾನೆಲ್ ಸುಳ್ಯ, ದಿನಾಂಕ: 26-08-2014) ಡಾ.ಸುಂದರ ಕೇನಾಜೆ
Comments
Post a Comment