ಮಲೆ ಮಾಹದೇಶ್ವರ ಚಿತ್ರಕತೆ
ಈ ಎಪ್ಪತ್ತೇಳು ಮಲೆಗಳು ಮಧ್ಯೆ ಕುಳಿತ ಮಾಯಿಕಾರ ಮಾದೇವನ ಪಾದಕ್ಕೆ ಒಂದ್ಸಲ ಉಘೇ ಅನ್ರಪ್ಪೋ.......(ಏಳು ಮಲೆಯ ಚಿತ್ರ ಮತ್ತು ಉಧ್ಘೋಷ) ಈ ಉಧ್ಘೋಷ ಮತ್ತಾರ ಬಗ್ಗೆಯೂ ಅಲ್ಲ. ಇತ್ತೀಚಿನ ದಶಕಗಳಲ್ಲಿ ದಕ್ಷಿಣ ಭಾರತದಲ್ಲೇ ಮನೆಮಾತಾಗುತ್ತಿರುವ ಆರಾಧ್ಯ ದೈವ ಮಲೆ ಮಾದೇಶ್ವರನ ಬಗೆಗಿನದು(ಮಾದೇಶ್ವರನ ಬಿಂಬ ಮತ್ತು ಇತರ ಚಿತ್ರ) ಮಾನವನಿಂದ ದೇವನಾದ ಮಾದೇಶ್ವರನ ಪ್ರಸಿದ್ಧಿ ಮತ್ತು ಪರಂಪರೆ ಪುರಾತನವಾದುದು(ಪುರಾತನ ಪರಂಪರೆಯ ಚಿತ್ರ, ಪರಂಪರೆ ಬಗ್ಗೆ ವಿದ್ವಾಂಸರ ಮಾತು). ಕರ್ನಾಟಕ-ತಮಿಳುನಾಡಿನÀ ಒಂದಷ್ಟು ಜಿಲ್ಲೆಗಳ ಜನರಿಗೆ ಈ ಮಾದೇಶ್ವರ ಕೇವಲ ದೇವರು ಮಾತ್ರವಾಗಿರದೇ ತಮ್ಮ ಸರ್ವಸ್ವವೂ ಹೌದು(ನಕ್ಷೆ). ಈ ಪರಂಪರೆಗೆ ಬಹಳ ದೊಡ್ಡ ಇತಿಹಾಸವಿದೆ. ಈ ಇತಿಹಾಸವನ್ನು ಕಾವ್ಯಾತ್ಮಕ ಕಥನವಾಗಿ ಬಣ್ಣಿಸುವ ಸ್ವರೂಪವೇ ಕಂಸಾಳೆ ಪದ ಮತ್ತು ನೀಲಗಾರ ಸಂಪ್ರದಾಯ(ಕಂಸಾಳೆ ಮತ್ತು ನೀಲಗಾರರ). ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದ ವರ್ಗದವರನ್ನು ಗುಡ್ಡರು ಎಂದು ಕರೆಯುತ್ತಾರೆ(ಗುಡ್ಡ ದೀಕ್ಷೆ ಮತ್ತು ಸಂಪ್ರದಾಯದ ಭಾಗ, ವಿದ್ವಾಂಸರ ಮಾತು). ಅದರಲ್ಲೂ ದೇವರ ಗುಡ್ಡರು ಮಾದೇಶ್ವರನ ಅನುಯಾಯಿಗಳು. ತಲತಲಾಂತರದಿಂದ ಹರಿದು ಬಂದ ಮಾದೇಶ್ವರನ ಕತೆಯನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಾ ಕೆಲವು ಬಾರಿ ಕುಣಿಯುತ್ತಾ ಈ ನಾಡಿನಲ್ಲಿ ಅದನ್ನು ಜೀವಂತವಾಗಿರಿಸಿದವರು (ಕಂಸಾಳೆ ಕುಣಿತ).
ಕಂಚಿನಿಂದ ತಯಾರಿಸಿದ ತಾಳವೇ ಕಂಸಾಳೆ(ತಾಳದ ಚಿತ್ರ). ಇದು ದೇವರ ಗುಡ್ಡರ ಪ್ರಧಾನ ವಾದ್ಯ. ಈ ಕಂಸಾಳೆಯನ್ನು ಹಿಡಿದು ಮಾದೇಶ್ವರನ ಬಗೆಗಿನ ಸಾಲುಗಳನ್ನು ಹಾಡುತ್ತಾ ಕುಣಿಯುವುದು ಇವರ ಸಂಪ್ರದಾಯ. ಹೀಗೆ ಕುಣಿಯುವಾಗ ಸಾಮಾನ್ಯವಾಗಿ ಎಂಟರಿಂದ ಹನ್ನೆರಡು ಜನರಿರುತ್ತಾರೆ. ನಿತ್ಯದ ಅಂಗಿ, ಪಂಚೆ, ಹೆಗಲಿಗೆ ಜೋಳಿಗೆ, ಕೊರಳಿಗೆ ರುದ್ರಾಕ್ಷಿ ಹಣೆಗೆ ವಿಭೂತಿ ಈ ನಿತ್ಯದ ವೇಷ ನೃತ್ಯ ಕಲಾವಿದರದ್ದಾಗಿರುತ್ತದೆ(ಕುಣಿತದ ದೃಶ್ಯ). ಹಾಡಿನ ಲಯಕ್ಕನುಸಾರವಾಗಿ ತಾಳವನ್ನು ನುಡಿಸುತ್ತಾ ಅದಕ್ಕೊಪ್ಪುವಂತೆ ಕುಣಿಯುತ್ತಾ ಕಸರತ್ತುಗಳನ್ನು ಮಾಡುತ್ತಾ ಜನಮನವನ್ನು ಸೆಳೆಯುತ್ತಾರೆ. ಕಂಸಾಳೆ ಕುಣಿತದಲ್ಲಿ ಕುಳಿತು ಹಾಡುವ ಕಂಸಾಳೆ ಮತ್ತು ಬೀಸು ಕಂಸಾಳೆ ಎಂದು ಎರಡು ವಿಧ (ಎರಡು ವಿಧವನ್ನು ತೋರಿಸುವುದು). ಬೀಸು ಕಂಸಾಳೆಯಲ್ಲಿ ಕಂಸಾಳೆ ಹಿಡಿದು ಆವೇಶದಿಂದ ತಟ್ಟುತ್ತಾ, ಹಾಡುತ್ತಾ, ತಿರುಗುತ್ತಾ ನರ್ತಿಸುವುದೇ ತಟ್ ಬಟ್ಲು ಕಂಸಾಳೆ. ಇದು ಶ್ರಮ ಮತ್ತು ಚಮತ್ಕಾರ ಎರಡೂ ಸೇರಿ ಅಭಿವ್ಯಕ್ತಿಗೊಳ್ಳುವ ಕಲೆ(ತಟ್ಟು ಬಟ್ಲು ಕಂಸಾಳೆಯ ಚಮತ್ಕಾರ ತೋರಿಸುವುದು). ಕಲಾವಿದನೊಬ್ಬನೇ ಹಾಡುತ್ತಾ ನರ್ತನ ಮಾಡುವುದೇ ತಾರ್ ಬಟ್ಲು ಕಂಸಾಳೆ. ಮೈಕೈ ಬಾಗಿ, ಬಳುಕಿ, ಮೈಮರೆತು ಕುಣಿಯುವುದು ಇಲ್ಲಿಯ ವಿಶೇಷ(ತಾರ್ ಬಟ್ಲು ಕಂಸಾಳೆ ಪ್ರದರ್ಶನ). ಕುಳಿತು ಹಾಡುವ ಕಂಸಾಳೆ ಮೇಳ ಇಡೀ ರಾತ್ರಿ ಮಾದೇಶ್ವರನ ಕತೆಯನ್ನು ಹಾಡುವ ಇನ್ನೊಂದು ವಿಧಾನವಾಗಿರುತ್ತದೆ. ಇದು ನೀಲಗಾರ ಪರಂಪರೆಯ ರೂಪವೂ ಹೌದು ( ವಿದ್ವಾಂಸರ ಮಾತು )
ಮಾದೇಶ್ವರ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಬೃಹತ್ ಬೆಟ್ಟಗಳ ಸಾಲಿನ ನಡುಮಲೆಯಲ್ಲಿ ನೆಲೆ ನಿಂತವನು.(ನೆಲೆ ನಿಂತ ಕಥಾ ರೂಪದ ಹೇಳಿಕೆ) ಇಲ್ಲಿಗೆ ತಲುಪಲು ಎರಡು ದಾರಿಗಳಿವೆ. ಒಂದು ಬಸವನ ಹಾದಿ ಮತ್ತೊಂದು ಸರ್ಪನ ಹಾದಿ(ಹಾದಿಯ ಚಿತ್ರ). ಈತನ ನೆಲೆಯ ಹಿಂದೆ ಕೆಲವು ಹಿನ್ನಲೆಗಳೂ ಇವೆ (ನೀಲಗಾರ ಹಾಡು). ಈ ವೃತ್ತಾಂತವನ್ನು ಏಳು ಸಾಲುಗಳಾದ ಹುಟ್ಟಿ ಬೆಳೆದ ಸಾಲು, ಶ್ರವಣನ ಸಾಲು, ಜುಂಬೇಗೌಡನ ಸಾಲು, ಸಂಕಮ್ಮನ ಸಾಲು, ಇಕ್ಕೇರಿ ದೇವಮ್ಮನ ಸಾಲು, ಬೇವಿನ ಕಾಳಿ ಸಾಲು, ಸರಗೂರಮ್ಮನ ಸಾಲು ಎಂದು ಏಳು ರಾತ್ರಿ ಗದ್ಯ ಪದ್ಯದೊಂದಿಗೆ ಪ್ರಸ್ತುತ ಪಡಿಸುತ್ತಾರೆ ಜನಪದರು(ಎಲ್ಲಾ ಕಾವ್ಯಗಳ ತುಣುಕು, ಈ ಕಾವ್ಯಗಳ ಬಗ್ಗೆ ವಿದ್ವಾಂಸರ ಮಾತು).
ಅನಾದಿ ಕಾಲದಿಂದಲೂ ಗುಡ್ಡರು ಈ ಮಾದೇಶ್ವರನ ಮಹಿಮೆಯನ್ನು ಊರೂರು ಸಾರುತ್ತಾ ಬಂದವರು. ದೀಕ್ಷೆ ಪಡೆದ ಈ ಗುಡ್ಡರಲ್ಲಿ ಎರಡು ವಿಧದವರಿದ್ದಾರೆ. ಅವರನ್ನು ಸಿರಿಯ ದೇವರ ಗುಡ್ಡರು ಮತ್ತು ಅಲೆಮಾರಿ ಗುಡ್ಡರೆಂದು ವಿಭಾಗಿಸಲಾಗಿದೆ(ಈ ಗುಡ್ಡರ ಪರಿವಾರದ ವಿವರ, ಜಾತಿ ಸಹಿತÀ). ಮೊದ¯ನೆಯವರು ಸೋಮವಾರ, ಶುಕ್ರವಾರ, ಅಮವಾಸ್ಯೆಯ ದಿನಂದು ಕ್ವಾರಣ್ಯ ಮಾಡುತ್ತಾ ಹಬ್ಬಹರಿದಿನದಂದು ಮಾದೇಶ್ವರನ ದರ್ಶನಕ್ಕಾಗಿ ಬೆಟ್ಟಕ್ಕೆ ಹೋಗುತ್ತಾರೆ. ಅದೇ ಅಲೆಮಾರಿ ಗುಡ್ಡರು ಮಾದೇಶ್ವರನ ಕಥೆಯನ್ನು ಹಾಡುತ್ತಾ ಊರೂರು ಅಲೆಯುತ್ತಾ ಕ್ವಾರಣ್ಯ ಮಾಡುತ್ತಾರೆ.(ಈ ಗುಡ್ಡರ ಬಗ್ಗೆ ವಿದ್ವಾಂಸರ ಮಾತು) ಇವರೂ ಕೂಡ ವಿಶೇಷ ಸಂದರ್ಭದಲ್ಲಿ ಮಾದೇಶ್ವರನ ಗುಡ್ಡಕ್ಕೆ ಹೋಗುತ್ತಾರೆ. ದಸರಾ ಹಬ್ಬದ ಹತ್ತನೇ ದಿನ ನಡೆಯುವುದೇ ಗಣತಿ ತಿಂಗಳು. ಆ ದಿನ ಮಾದೇಶ್ವರ ಎದುರು ಬೆಟ್ಟದಲ್ಲಿ ಕುಳಿತು ಎಷ್ಟು ಭಕ್ತರು ಬರುತ್ತಾರೆಂದು ಲೆಕ್ಕ ಮಾಡುತ್ತಾನೆ, ಆದ್ದರಿಂದ ಮನೆಗೊಂದು ಆಳು ಆ ದಿನ ಜಾತ್ರೆಗೆ ಹೋಗಬೇಕೆಂಬ ನಂಬಿಗೆ ಇಂದಿಗೂ ಇದೆ( ಜಾತ್ರೆ).
ಮಾದೇಶ್ವರ, ಮಾದಪ್ಪ, ಮಾದಯ್ಯ ಇತ್ಯಾದಿ ಹೆಸರಿನಿಂದ ಕರೆಯುವ ಮಲೆಮಾದೇಶ್ವರ ಉತ್ತರದೇಶದ ಉತ್ತರಾಜಮ್ಮನ ಬೆನ್ನ ಮಚ್ಚೆ ಸೀಳಿ ಹುಟ್ಟಿದವ ಎನ್ನುವುದು ಪ್ರತೀತಿ. (ಕಥಾ ರೂಪದ ಹೇಳಿಕೆ) ಅಲ್ಲಿಂದ ಬಂದು ನೆಲಸಿದ ಈ ಪ್ರದೇಶಗಳು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಜನಪದರು ಇಂದಿಗೂ ಪವಿತ್ರ ನಂಬಿಕೆಗಳಿಂದ ಕಾಣುತ್ತಿರುವುದು ಈ ಕಾವ್ಯದ ವಾಸ್ತವವನ್ನು ಸಾಕ್ಷೀಕರಿಸುತ್ತದೆ. ಆ ಪ್ರದೇಶಗಳೆಂದರೆ, ಎಪ್ಪತ್ತೇಳು ಮಲೆ, ನಾಗಮಲೆ ಬೆಟ್ಟದ ಮೇಲಿರುವ ಮಾದೇಶ್ವರ ದೇವಾಲಯ, ಅಂತರಗಂಗೆ, ಜಡೆಕಲ್ಲು, ದುಂಡಮ್ಮನ ಸಮಾಧಿ, ಬಿಲ್ಲಯ್ಯನ ಹೊಂಡ, ಎದುರು ಬೋಳಿ ಅಥವಾ ಈಶ್ವರ ಬೆಟ್ಟ, ಸಾಲೂರು ಮಠ, ಶ್ರವಣನ ಬೋಳಿ, ತಪಸರೆ, ಸಂಕುಮಲೆ, ಕಂಬದ ಬೋಳಿ, ಗೊಟ್ಟಿಕಾಯಿ, ಕೊಂಡದ ಗುಳಿಕಾನ, ಬೇವಿನ ಹಟ್ಟಿ, ಆನೆತಲೆದಿಂಬು, ಹಾಲು ಹಳ್ಳ, ರಂಗನಾಥ ಸ್ವಾಮಿಯ ಒಡ್ಡು, ಬಳೇಕಲ್ಲು ಬಸಪ್ಪ, ಆದಿಮಲೆ ಮಾದಪ್ಪನ ಬೆಟ್ಟ, ಸಂತೇಕಾನಿ ಬೋಳಿ ಹೀಗೆ ಅನೇಕ ಪ್ರದೇಶಗಳು ಈ ದೀರ್ಘ ಕಾವ್ಯದಲ್ಲಿ ಹೇಳಲ್ಪಟ್ಟಿವೆ. ಈ ಪ್ರದೇಶಗಳ ಬಗೆಗಿನ ಪ್ರತೀತಿಗಳು ಮಾದೇಶ್ವರನ ಚರಿತ್ರೆಗೆ ನೇರ ಸಂಬಂಧವನ್ನು ಕಲ್ಪಿಸಿವೆ.(ಈ ಎಲ್ಲ ಪ್ರದೇಶಗಳ ಚಿತ್ರ, ಸ್ಥಳ ವಿಶೇಷದ ಬಗ್ಗೆ ಸ್ಥಳಿಯರ ಮಾತು ಮತ್ತು ವಿದ್ವಾಂಸರ ಮಾತು)
ಮಾದಪ್ಪ ಒಂದು ಸಂಸ್ಕøತಿಯ ಪ್ರತಿನಿಧಿ. ಆತನ ಆರಾಧನೆಯ ಹಿಂದಿರುವುದು ಕೇವಲ ನಂಬಿಕೆ ಮಾತ್ರವಲ್ಲ. ಬದಲಾಗಿ ಒಂದು ಜೀವನ ಮೌಲ್ಯ. ಇದುವರೆಗೆ ನಿರ್ಲಕ್ಷಿಸಲ್ಪಟ್ಟ ಜನಗಳ ಶ್ರೀಮಂತ ಸಂಸ್ಕøತಿ ಮತ್ತು ಆ ಸಂಸ್ಕøತಿಯ ಪರಂಪರೆ ಒಂದು ನಾಡಿನ ವಿವೇಕ ಮತ್ತು ಜ್ಞಾನವನ್ನು ಕಾಪಾಡಿಕೊಂಡು ಬಂದಿದೆ ಎನ್ನುವ ಪ್ರಾಜ್ಞರ ಮಾತಿಗೆ ಮಾದೇಶ್ವರ ಮತ್ತು ಆತನ ಆರಾಧನೆ ಸಾಕ್ಷಿಯಾಗಿದೆ. ಈ ನಂಬಿಕೆ ಆರಾಧನೆಗಳ ಹಿಂದಿರುವುದು ಪ್ರಾಂಜಲ ಮನಸ್ಥಿತಿ ಮತ್ತು ಧರ್ಮ, ಕಲೆ, ಸಾಹಿತ್ಯ ಇತ್ಯಾದಿ ಮೌಲ್ಯಗಳ ಮೇಲಿನ ಪ್ರೀತಿ ಇವೆರಡು ಸತ್ಯವನ್ನು ನಾವಿಂದು ಅರಿತುಕೊಳ್ಳಲೇಬೇಕಾಗಿದೆ.
ಡಾ.ಸುಂದರಕೇನಾಜೆ
Comments
Post a Comment