ಜನಪದರ ಕೆಡ್ಡಸ ಹಬ್ಬ

ಜನಪದರ ಬೊದ್ಕ್‍ಲಿ ಕೆಡ್ಡಸ ಹಬ್ಬ

ತುಳುನಾಡ್‍ಲಿ ಆಚರಣೆ ಮಾಡ್ವ ಹಲವು ಹಬ್ಬಲಿ ಕೆಡ್ಡಸನೂ ಒಂದ್. ಮಕರ ಮಾಸದ ಇಪ್ಪತ್ತೇಳ್‍ನೇ ದಿನ ಕೆಡ್ಡಸ ಸುರ್ವಾದೆ. ಅಂದರೆ ಪೆಬ್ರವರಿ ತಿಂಗಳ ಎರಡನೇ ವಾರದ ಮೂರ್ ದಿನ, ತುಳು ಮಾಸಲಿ ಪೊನ್ನಿ ತಿಂಗ. ‘ಬೂಮಿ ಎಂಬ ಹೆಣ್ಣ್’ ವರ್ಸಕ್ಕೊಮ್ಮೆ ಮುಟ್ಟಾದುದರ ನಂಬಿಕೆ ರೂಪ ಈ ಕೆಡ್ಡಸ. ಹೆಣ್ಣ್ ಮುಟ್ಟಾಗಿ ಹೇಂಗೆ ಮೂರ್ ದಿನ ಸೂತಕ ಆಚರಿಸುವೊನೋ ಹಾಂಗೆನೆ ಬೂಮಿಗೂ ಮೂರ್ ದಿನದ ಸೂತಕ ಆಚರ್ಸಿದೇಂತ ಹೇಳ್ವೆ. ಅದೇ ಈ ಕೆಡ್ಡಸ. ಆ ಸಂದರ್ಬಲಿ ಬೂಮಿನ ಅಗೇಕೆ ಬೊತ್ತ್, ಗೈಮೆ ಮಾಡಿ ಹಿಂಸೆ ಕೊಡಿಕೆ ಬೊತ್ತ್‍ಂತ ಹೇಳ್ವ ನಂಬಿಕೆನೂ ಉಟ್ಟು. ಈ ನಂಬಿಕೆನ ಮೀರಿ ಯಾರೇ ಕೆಲ್ಸ ಮಾಡಿರೂ ಬೂಮಿಯಿಂದ ನೆತ್ತರ್ ಒಸರ್ದೆ ಅಂತ ಹಿರಿಯವು ಹೇಳ್ವೆ. ಇಲ್ಲೆ ಬೂಮಿ ಬಂಜೆಯಾದೆ ಅಂತಲೂ ಹೇಳ್ವೆ.

ಕೆಡ್ಡಸದ ಸಾಂಸ್ಕøತಿಕ ವಿವರಣೆ:

ಕೆಡ್ಡಸದ ಸುರುನ ದಿನ ಬೊಳ್ಪಿಗೆ ಮನೆನ ಸುಚಿಗೊಳಿಸ್ವೆ. ನವದಾನ್ಯಗಳ ಬೆರ್ಸಿ ಬಾಳೆಲೆಲಿ ಹಾಕಿ ತುಳ್ಸಿ ಕಟ್ಟೆ ಎರ್ದ್‍ಲಿ ಇಸ್ವೆ. ಇದನ ತುಳುಲಿ ‘ಕುಡುಅರಿ’ ಇಸುದೂಂತ ಹೇಳ್ವೆ, ಅಕ್ಕಿ ಹುಡಿ ಮಾಡಿ, ಬೆಲ್ಲ ಹಾಕಿ ‘ನೆನ್ನೆಕ್ಕಿ’ ಬಡ್ಸ್‍ದೂ ಉಟ್ಟು. ಆ ದಿನ ಮದ್ಯಾಹ್ನದ ಊಟಕ್ಕೆ ನುಗ್ಗೆ ಬದನೆ ಗೈಪು ಮಾಡಕ್, ಇಲ್ಲರೆ ಮಾಸದ ಊಟನೂ ಆಕೂಂತ ಉಟ್ಟು.

ಕೆಡ್ಡಸ ಆಚರಣೆಲಿ ಬೇಟೆ ಒಂದ್ ಗಮ್ಮತ್‍ನ ದಿನ. ಇದ್ ಸಾಮಾನ್ಯವಾಗಿ ಎರಡನೇ ದಿನ ನಡ್ದದೆ. ಆ ದಿನ ಮೃಗಕ್ಕೆ ಜ್ವರ ಬಂದದೆ, ಕಾಲ್ ಕುಂಟಾದೆ, ಅವು ಸುಲಬಲಿ ಸಿಕ್ಕಿದೇಂತ ಜನ ನಂಬ್ವೆ. ಆದರ್‍ಂದ ಊರ ಗಂಡಸರ್‍ಗ ಎರಡನೇ ದಿನ ಬೇಟೆಗೆ ಹೋಗ್ವೆ. ಕೆಡ್ಡಸ ಸುರು ಆಗ್ವು ಒಂದ್ ದಿನ ಮುಂದೆ, ಊರ ಬೂತ ಕಟ್ಟುವವು ಕೆಡ್ಡಸದ ಹೇಳಿಕೆ ಕೊಡೋಕುಂತೇಳಿ ಉಟ್ಟು. ಅದ್ರಲಿ ಬೇಟೆಯ ವಿಸಯನೂ ಬಂದದೆ. ತುಳುಲಿ ಇರ್ವ ಈ ಹೇಳಿಕೆ ಹೀಂಗೆ ಉಟ್ಟು, “ ಸೋಮಾರೊ ಕೆಡ್ಡಸೊ ಮುಟ್ಟುನೇ, ಅಂಗಾರೆ ನಡುಕೆಡ್ಡಸೋ, ಬುದಾರೊ ಬಿರಿಪುನೆ, ಪಜಿಕಡ್ಪೆರೆ ಬಲ್ಲಿ, ಉಲಿಂಗೆಲ್ ಪೊಲಿಪ್ಪೆರೆ ಬಲ್ಲಿ, ಅರಸು ಬೋಂಟೆಗೆ ಸೇರ್ವೆರ್, ಉಲ್ಲಾಯನಕ್ಲು ಪೋವೊಡಿಗೆ. ವಾಲಸಿರಿ ಮಜಲ್‍ಟ್‍ಕೂಡ್ದ್, ವಾಲಸಿರಿ ದೇರ್ದ್, ಬಲೆಚ್ಚಾರ್ಗ್ ಜಪ್ಪುನಾಗ, ಉಲ್ಲಾಳ್ತಿನಕುಲು ಕಡೆಪಿಕಲ್ಲ್ ಕಂಜಿನ್ ನೀರ್ಟ್ ಪಾಡೊಡು. ಓಡುಡು ಕಡೆಯೊಡು, ಕಲ್ಲ್‍ಟ್ ಪತ್ತಾವೊಡು, ಮಲ್ಲಮಲ್ಲ ಮುರ್ಗೊಲು ಜತ್ತೊಂದು ಬರ್ಪೊ. ಬಣ್ಣಲ ಬರಿಕ, ಒರ್ಕಲ ಪಂಜಿ, ನಾಲಕಾರ್ ಕಡಮ, ಪುಲ್ಲಿಲು, ಉರೆ ಜತ್ತೊಂತು ಬರ್ಪೊ. ಕಟ್ಟ ಇಚ್ಚಾಂದಿ ಬೆಡಿ, ಕದಿ ಕಟ್ಟಾಂದಿನ ಪಗರಿ, ಕೈಲಕಡೆ ಪತ್ತ್‍ದ್ ಉಜ್ಜೆರ್‍ಗೊಂಜಿ ಏರ್ಪು ಏರ್ಪಾದ್, ಇಲ್ಲ ಮೊಡೆಕ್ಕಿಲ್‍ಡ್ ಉಂತೊಡು, ಮುರ್ಗೊಲೆÀಗ್ ತಾಂಟಾವೊಡು, ಮಲ್ಲಮಲ್ಲ ಮುರ್ಗೊಲೆನ್ ಚೈಪಾವೊಡು, ಎಂಕ್ ಐನ, ಕೆಬಿ, ಕಾರ್, ಕೈ ಐತೊಟ್ಟುಗು ಉಪ್ಪು, ಪುಳಿ, ಮುಣ್ಚಿ ಕೊರೊಡು” ಹೀಂಗೆ ತುಳುಲಿ ಕೆಡ್ಡಸ ಹೇಳಿಕೆ ಹೇಳಿ, ನಿಜವಾಗಿ ಉಪ್ಪು, ಪುಳಿ, ಮೆಣ್ಸ್ ಹಿಡ್ಕಂಡ್ ಹೋದವೆ. ಬೇಟಿಲಿ ಊರ್ನ ಗಂಡಸರ್‍ಗ ಹತ್ಯಾರ ಹಿಡ್ದ್ ಸಾಮೂಹಿಕ ಬೇಟೆ ಮಾಡ್ವೆ. ಕೆಲವರ ಕೈಲಿ ಬೆಡಿನೂ ಮತ್ತೆ ಕೆಲವರ ಜೊತೆಗೆ ಬೇಟೆ ನಾಯಿನೂ ಇದ್ದದೆ. ಬೇಟೆ ಸಂದರ್ಬಲಿ ಮಲೆದೈವಗಳ ಬೇಡಿಕೊಂಬದ್, ಅದ್ಕೆ ಹರಕೆ ಹೇಳ್ದು ಇವೆಲ್ಲಾ ಕಂಡ್ ಬಂದದೆ. ಹಿಂಗೆ ನಡುಕೆಡ್ಡಸ, ಕೆಡ್ಡಸದ ಆಚರಣೆಲಿ ಕುಸಿನ ದಿನ.

ಮೂರನೇ ದಿನ ಕೆಡ್ಡಸ ಆಚರಣೆಯ ಅಕೇರಿಯ ದಿನ. ಅಂದ್ ಮನೆಯ ಹಿರಿಯ ಹೆಂಗಸ್ ಬೂಮಿಗೆ ಎಣ್ಣೆ ಹೊಯ್ದವೆ. ಮುಟ್ಟಾದ ಹೆಣ್ಣ್ ಮೀಯಕೆ ಹೋಕಾನ ತೆಕೊಂಡು ಹೋವ ಸೀಗೆ, ಬಾಗೆ, ಹೆಸ್ರು ಹುಡಿ, ಸರೋಳಿ ರಸ, ಅರಸಿನ, ಕುಂಕುಮ, ಮಸಿ, ಕೋಡು, ಪಟ್ಟೆಸೀರೆ ಹಿಂಗ್ ಕೆಲವೊಂದು ವಸ್ತುಗಳ ಇಸ್ವೆ. ಅದರ ಪಕ್ಕಲಿ ಕನ್ನಡಿ ಮತ್ತೆ ಬಾಚಣಿಕೆ ಇಸುವ ಪದ್ದತಿನೂ ಉಟ್ಟು. ಒಟ್ಟಾರೆ ಬೂಮಿ ತಾಯಿ ರುತು ಮೀಯೂದರ ಕಲ್ಪನೆಲಿ ಈ ಆಚರಣೆ ನಡ್ದದೇಂತ ಹಿರಿಯವು ಹೇಳ್ವೆ.

ಕೆಡ್ಡಸದ ಕೆಲವು ದಿನ ಮೊದಲೇ ತಂಪು ಗಾಳಿ ಬೀಸಿದೆ. ಅದರ ‘ಕೆಡ್ಡಸದ ಗಾಳಿ’ಂತ ಕರ್ದವೆ. ಇದ್ ಮರಗಿಡ ಬಳ್ಳಿಗೆ ‘ಹೊಟ್ಟ’ ಬರಿಸುವ ಗಾಳಿಂತಲೂ ನಂಬ್ವೆ

ಕೆಡ್ದಸ ಆಚರಣೆಯ ತಾತ್ವಿಕ ಹಿನ್ನಲೆ:

ಬೂಮಿನ ಹೆಣ್ಣ್‍ಗೆ ಹೋಲಿಸಿ ಆರಾಧನೆ ಮಾಡ್ವು ಸಂಪ್ರದಾಯ ಜಗತ್ತ್‍ನ ಎಲ್ಲಾ ಸಂಸ್ಕøತಿಲಿ ಕಂಡ್ ಬಂದದೆ. ಪುರಾಣ ಮತ್ತೆ ಜಾನಪದ ಎರ್ಡುನೂ ಬೂಮಿನ ಹೆಣ್ಣ್‍ಂತ ನಂಬಿಕೊಂಡ್ ಬಂದುಟು. ತುಳುನಾಡ್‍ಲಿ ಬೇಸಾಯದ ಕೆಲ್ಸ ಸುರ್ವಾಕೆ ಮುಂದೆ, ಅಂದರೆ ಏಣಿಲ್ ಬೇಸಾಯಕ್ಕೆ ಎರಡ್ ತಿಂಗ ಮುಂದೆ ಆಚರಣೆ ಮಾಡ್ವ ಈ ಕೆಡ್ಡಸಕೆ, ಹೆಣ್ಣ್ ರುತುಮತಿಯಾಗಿ ಮೂರ್ ದಿನ ‘ಸೂತಕ’ ಆಚರ್ವ, ಮತ್ತೆ ಮಿಂದ್ ಮನೆ ಸೇರ್ವ, ನಂತರ ಗರ್ಬಿಣಿ ಆಗಿ ಕೂಸ್‍ನ ಹೆರ್ವ ಅರ್ತನೇ ಒಳದ್. ಅಂದರೆ, ‘ಬೂಮಿ ಎಂಬ ಹೆಣ್ಣ್’ ಸೂತಕ ಕಳ್ದ್ ಪಲ ನೀಡಿಕೆ ತಯಾರಾಗ್ವು ಹಿನ್ನಲೆ ಈ ಆಚರಣೆಲಿ ಕಂಡದೆ. ತುಳುನ ಹಲವು ವಿದ್ವಾಂಸರ್‍ಗ ಕೆಡ್ಡಸ ಆಚರಣೆಯ ಹಿನ್ನಲೆನ ಬೇರೆಬೇರೆ ರೀತಿಲಿ ವಿಚಾರಣೆ ಮಾಡ್ಯೊಳೊ. ಕೆಡ್ಡಸ ಆಚರಣೆನ ಸರಿಯಾದ ರೀತಿಲಿ ನೋಡಿಕೆ, ಬೇಸಾಯ ಪರಂಪರೆನ ಅರ್ತ ಮಾಡೋಕಾದೆ. ಅಂದರೆ ಬೇಸಾಯ ಇದ್ದರೆ ಮಾತ್ರ ಕೆಡ್ಡಸ ಆಚರಣೆಗೆ ಮಹತ್ವ ಒಳಾದ್. ಬೇಸಾಯ ಮಾಡ್ವವು ಮಾತ್ರ ಬೂಮಿಗೆ ಗೌರವ ಕೊಡ್ವ ಸಂಪ್ರದಾಯನ ಬೆಳ್ಸಿಕೊಂಡ್ ಬಂದ್‍ದ್.

ಒಂದ್ ಕಾಲಲಿ ತುಳುನಾಡ್‍ಲಿ ಹೆಣ್ಣ್‍ನೇ ಪ್ರದಾನ(ಮಾತೃಪ್ರಧಾನ) ಎನ್ವ ವ್ಯವಸ್ತೆ ಜಾರಿಯಲ್ಲಿತ್. ಕುಟುಂಬಲಿ ಹೆಣ್ಣ್‍ನ ಗೌರವದಿಂದ ನೋಡ್ತಿದೊ. ಇಂತಾ ಸಮಾಜಲಿ ಗ್‍ಂಡ್, ಹೆಣ್ಣ್‍ನ ಸಂತಾನಕ್ರಿಯೆಗೆ ಪ್ರಚೋದನೆ ಮಾಡ್ವ ಮನೋಬಾವನೂ ಇತ್ತ್, ಅದರ್‍ಂದ ಪ್ರಕೃತಿ ಸಹಜ ನಿಯಮನ ಮುಂದೆ ಇರಿಸಿ, ಮಾನವ ಸಹಜ ಬಯಕೆನ ತೀರ್ವಂತ ಸಂಗತಿಯೊಂದ್ ಕೆಡ್ಡಸದ ಆಚರಣೆಲಿ ಕಂಡದೆ. ಈ ಪ್ರಾಕೃತಿಕ ನಿಯಮಕೆ ಸರಿ ಸಮಾನಾಗಿ ಕೆಡ್ಡಸ ಆಚರಣೆನ ನಡ್‍ಸ್ವ ಕಾಲ ಪೆಬ್ರವರಿ ತಿಂಗ. ಇದ್ ಅತ್ತ ಚಳಿ ಬುಟ್, ಸೆಕೆ ಹಾಂಗೆ ಸುರ್ವುಗ್ವ ಕಾಲ. ಏಣಿಲ್ ಕೊಯಿಲ್ ಮುಗ್ದ್ ನಾಲ್ಕ್ ತಿಂಗ, ಮತ್ತೆ ಸುಗ್ಗಿ ಬಿತ್ತನೆ ಮುಗಿಸಿ ಹಾಂಗೇ ಆರಾಮಲಿ ಇರ್ವ ಕಾಲ. ಮುಂದಿನ ಏಣಿಲಿಗೆ ಒಂದೆರಡ್ ತಿಂಗ ಮಾತ್ರ ಬಾಕಿ ಇರ್ವ ಕಾರಣಾಂದ ಬೂಮಿನ ಹದ ಮಾಡಿ ಬೆಳೆ ತೆಗೆವ ಯೋಚನೆ ಜನಪದರದ್. ಅಗ ಬೂಮಿ ರುತು ಮಿಂದ್ ಪಲ ನೀಡಿಕೆ ತಯಾರಾಗಿ ನಿಲ್ಲೋಕೋಂತ ಹೇಳ್ವ ಹಿನ್ನಲೆ ಈ ಕೆಡ್ಡಸದ್ದ್. ಹಾಂಗೇ ಮನೆಯ ಒಳಗೆ ಇರ್ವ ಹೆಣ್ಣ್ ಕೂಡ ಸಂತಾನ ಬೆಳ್ಸಿಕೆÉ ತಯಾರಾಕು ಎನ್ವ ಸೂಚನೆನೂ ಇಲ್ಲಿ ಕಂಡಂದೆ. ಅಂದರೆ ಬೂಮಿಯ ಪಲವಂತಿಕೆಗೆ ತಯಾರ್ ಮಾಡಿದಂಗೆ ಹೆಣ್ಣ್‍ನ ಸಂತಾನೋತ್ಪಾದನೆಗೆ ಎಚ್ಚರ್ಸುವ ಕ್ರಿಯೆ ಇಲ್ಲಿ ನಡ್ದದೆ. ಮಾತೃಪ್ರದಾನ ವ್ಯವಸ್ಥೆಲಿ ಇಂತ ಅನಿವಾರ್ಯ ಉಟ್ಟೂಂತ ಹೇಳ್ರೆ ತಪ್ಪಾಕಿಲೆ.

ಇದರ ಸರ್ಯಾಗಿ ನಾವುಗೆ ನೋಡಿಕೆ ಸಾದ್ಯಾದು ಕೆಡ್ಡಸದ ಬೇಟೆಲಿ. ಜಗತ್ತ್‍ನ ಎಲ್ಲಾ ಸಾಹಿತ್ಯ ಮತ್ತೆ ಮನೋವಿವರಣೆಲಿ ಬೇಟೆನ ಕಾಮದ ಸಂಕೇತಾಂತ ಹೇಳ್ವೆ. ಆದರೆ ಅನೇಕ ವಿದ್ವಾಂಸರ್‍ಗ ಕೆಡ್ಡಸದ ಬೇಟೆನ, ‘ಬೇಸಾಯ ಉಳ್ಸಿಕೆ ಮಾಡುವ ತಂತ್ರಾಂತ’ನೂ ಹೇಳ್ವೊಳೊ. ಅಂದರೆ, ಬೂಮಿ ಪಲ ನೀಡ್ವ ಹಂತಲಿ ಅದಕ್ಕೆ ತೊಂದರೆ ಕೊಡ್ವ ಎಲ್ಲ ಬಲಗಳ ನಿಗ್ರಹ ಮಾಡಿಕೆ ಬೇಟೆ ಮಾಡ್ವೆಂತ ಹೇಳ್ವ ವಾದನೂ ಉಟ್ಟು. ಈ ಅರ್ತಲಿ ಡಾ. ಅಶೋಕ ಆಳ್ವ, “ಭೂಮಿದೇವಿಯ ಮುಟ್ಟಿನ ಅನಂತರದಲ್ಲಿ ಭೂಮಿಯಲ್ಲಿ ಬೆಳೆಯುವ ಬೆಳೆಗಳಿಗೆ ಕಾಡು ಪ್ರಾಣಿಗಳಿಂದ ಒದಗಬಹುದಾದ ತೊಂದರೆಗಳನ್ನು ನಿಗ್ರಹಿಸುದಕ್ಕಾಗಿಯೇ ಕೆಡ್ಡಸದಂದು ಬೇಟೆಯನ್ನು ನೆರವೇರಿಸುತ್ತಾರೆ. ತಮ್ಮ ಕೃಷಿಗೆ ಕಾಡು ಪ್ರಾಣಿಗಳಿಂದ ಒದಗಬಹುದಾದ ತೊಂದರೆಗೆ ಪ್ರತಿಯಾಗಿ ಜನಪದರು ಅವುಗಳ ಮೇಲೆ ಬೇಟೆಗಳ ಮೂಲಕ ಪ್ರಭುತ್ವವನ್ನು ಸ್ಥಾಪಿಸುತ್ತಾರೆ.” ಅಂತ ವಿವರಿಸ್ಯೊಳೊ. ಒಂದತರ್Àಲಿ ಈ ಮಾತ್ ಸರಿ, ಆದರೆ ಸಂಸ್ಕøತಿನ ಬದಲಾಯಿಸುವ ನೆಲೆಲಿ ಜನಪದರ ಈ ಬೇಟೆಗೆ ಇನ್ನೂ ಬೇರೆಬೇರೆ ಅರ್ತನ ಹುಡಿಕಿಕೆ ಸಾಧ್ಯ ಉಟ್ಟು. ಇಲ್ಲಿ ಗಂಡಸ್‍ರ್‍ಗ ನಡ್ಸ್‍ವ ಬೇಟೆಯ ಔಚಿತ್ಯನ, ಮತ್ತೆ ಅದರ ಸಂದರ್ಬನ ವಿಚಾರಣೆ ಮಾಡ್ರೆ, ಅದರ ಇನ್ನೊಂದ್ ಅರ್ತನೂ ಕಂಡದೆ. ಮಾತೃಪ್ರದಾನ ವ್ಯವಸ್ತೆಯೊಂದರ ತೆಗ್ದ್ ಹಾಕಿಕೆ ಗ್‍ಂಡ್‍ಪ್ರದಾನ(ಪುರುಷ ಪ್ರದಾನ) ವ್ಯವಸ್ಥೆ ಹೇಂಗೆ ಕೆಲ್ಸ ಮಾಡ್ಯುಟುಂತ ತಿಳ್ಕಣಿಕೆ ಈ ಕೆಡ್ಡಸದ ಬೇಟೆ ಲಾಯಿಕಿನ ಉದಾಹರಣೆ.

ಕೆಡ್ಡಸದ ಬೇಟೆ ನಡೆಯ್ಯೊದ್ ‘ಬೂಮಿ’, ಅಂದರೆ ‘ಹೆಣ್ಣ್’ ದುರ್ಬಲವಾಗಿರ್ವ ಸಂದರ್ಬಲಿ. ಇಲ್ಲಿ ಹೆಣ್ಣ್‍ನ ದೌರ್ಬಲ್ಯನ ಗ್‍ಂಡ್ ತನ್ನ ಯೋಗ್ಯತೆನ(ಸಾಮಥ್ರ್ಯ) ತೋರ್ಸಿಕೆ ಬಳ್ಸಿಕೊಳ್ವ ಹಾಂಗೆ ಕಂಡದೆ. ಅಂದರೆ, ಕೆಡ್ಡಸದ ದಿನ ಈ ಬೂಮಿನ ದುರ್ಬಲ ಮಾಡ್ವ ಪುರುಷಪ್ರದಾನ ವ್ಯವಸ್ತೆ, ತನ್ನ ಬಲ ತೋರ್ಸಿಕೆ ಬೇಟೆಯ ತಂತ್ರನ ಬಳಕೆ ಮಾಡ್ದೆಂತ ಹೇಳಕ್. ಇದ್ ತುಳುನಾಡ್‍ನ ಮಾತೃಪ್ರದಾನ ವ್ಯವಸ್ಥೆನ ಅಲ್ಲಾಡ್ಸುವ ಕೆಲ್ಸ ಅಂತ ಹೇಳಿರೆ ತಪ್ಪಾಕಿಲೆ.

‘ಬೇಟೆ’ ಕಾಮದ ಬದಲಿ ಕ್ರಿಯೆ ಎನ್ವ ವರ್ಣನೆ ಬೇಕಾದಸ್ಟುಟ್ಟು. ಹೆಣ್ಣ್‍ನ ದೌರ್ಬಲ್ಯದ ಸಂದರ್ಬಲಿ ಗ್‍ಂಡ್ ಯೋಗ್ಯತೆನ ತೋರ್ಸಿಕೆ ಮಾಡ್ವ ಸಂಗತಿಗಳ ಉದಾಹರಣೆನೂ ಉಟ್ಟು. ಕೆಡ್ಡಸದ ಕಾಲಲಿ, ಮುಂದೆ ನಡೆವ ಸಂತಾನಕ್ರಿಯೆಗೆ ಒಂದ್ ರೀತ್ಯ ತಯಾರಿ ನಡ್ವು ಗ್‍ಂಡ್, ತನ್ನ ಯೋಗ್ಯತೆನ ಸಾಬೀತ್‍ಪಡಿಸಿಕೆ ಹೀಂಗೆ ಬೇಟೆಗೆ ಹೋಗ್ವ ಸಾದ್ಯತೆ ಉಟ್ಟು. ಸಾಮಾನ್ಯವಾಗಿ ಒಂದ್ ಹೆಣ್ಣ್ ಗ್‍ಂಡ್‍ನ ಸ್ವೀಕಾರ ಮಾಡಿಕೆ ಬಲನ ಪಣವಾಗಿ ಇರ್ವು ಚರಿತ್ರೆ ಬೇಕಾದಸ್ಟ್ ನಾವುಗೆ ಸಿಕ್ಕಿದೆ. ನಮ್ಮ ಕಾವ್ಯ, ಪುರಾಣಲಿ ಇದಕೆ ಅನೇಕ ಉದಾಹರಣೆನೂ ಉಟ್ಟು. ಹಂಗಾಗಿ ಸಾಹಸ ಮೆರ್ದ್ ಬಂದ ಗ್‍ಂಡಿಗೆ ಬೇಗ ಒಲಿವ ಗುಣ ಮಾತೃಪ್ರದಾನ ವ್ಯವಸ್ಥೆಲಿ ಹೆಚ್ಚ್ ಇತ್ತ್‍ಂತ ಕಂಡದೆ. ಇದಕೆ ನಮ್ಮ ಸ್ವಯಂವರಗ ಕೂಡ ಒಂದು ಉದಾರಣೆ. ಮೊದಲೇ ದುರ್ಬಲವಾಗಿರ್ವ ಹೆಣ್ಣ್, ಯೋಗ್ಯತೆನ ಸಾಬೀತ್ ಮಾಡ್ದ ಗಂಡ್‍ನ ಸುಲಬಲಿ ಒಲಿಸಿಕೊಳ್ಳಿಕೆ ಬೇಟೆನೂ ಒಂದು ದಾರಿ. ಈ ರೀತಿಲಿ ಬೂಮಿ ತಾಯಿಯ ಮುಟ್ಟು, ಮತ್ತೆ ತನ್ನ ಹೆಣ್ಣ್‍ನ ಮುಟ್ಟು -ಇದೆರಡಕೂ ಬೇಟೆಗೂ ಸಂಬಂಧತಾವ ದೃಸ್ಟಿಲಿ ಈ ಕೆಡ್ಡಸದ ಬೇಟೆ ನಡ್ದದೇಂತ ಹೇಳಕ್. ಇದಕೆ ಪೂರಕವಾಗಿ ಕೆಡ್ಡಸದ ಗಾಳಿಯ ನಂಬಿಕೆ ಜನಪದರಲಿ ಕಾಂಬೊಕೆ ಸಾಧ್ಯ ಉಟ್ಟು. ಕೆಡ್ಡಸದ ಗಾಳಿ ಬರೀ ಗಿಡಮರಗಳಿಗೆ ಗರ್ಬ ಬರ್ಸುವ ಗಾಳಿ ಮಾತ್ರ ಅಲ್ಲ, ಅದ್ ಮಾನವ ಹೆಣ್ಣ್‍ಗೆನೂ ‘ನೀರ್’ ನಿಲ್ಲವಾಂಗೆ ಮಾಡ್ವ ಗಾಳಿಂತ ಈ ಬೇಟೆನ ಗಮನ್ಸಿ ಹೇಳಕ್. ಹಿಂಗೆ ಬೂಮಿಯ ಹೆಸ್ರ್‍ಲಿ ತನ್ನ ಮನೆಯ ಹೆಣ್ಣ್‍ನ ಗೆಲ್ವ ಒಂದ್ ಸಂಗತಿ ಮಾತೃಪ್ರದಾನ ವ್ಯವಸ್ತೆಯ ಕೆಡ್ಡಸದ ಆಚರಣೆಲಿ ಕಂಡದೆ.

ಇದರ ಇನ್ನೂ ರುಜುವಾತ್ ಮಾಡ್ದು ಈ ಕಾಮಕ್ಕೆ ಪ್ರಚೋದನೆ ನೀಡ್ವಂತ ನುಗ್ಗೆ ಬದನೆ ಗೈಪು. ಅಂದ್‍ನ ದಿನ ಅದರ ಕಡ್ಡಾಯ ಮಾಡಿ ತಿನೊಕೋಂತೇಳಿ ಉಟ್ಟು. ಗ್‍ಂಡ್ ತನ್ನ ಸಂತಾನ ಬೆಳ್ಸಿಕೆ ಬಲ ಪಡೆವ ದೃಸ್ಟಿಲಿ ಈ ವಸ್ತ್‍ಗಳ ಬಳ್ಸಿಕೂ ಸಾಕ್. ಒಟ್‍ಲಿ ಕೆಡ್ಡಸ ಎರಡ್ ಮುಖ್ಯ ವಿಸಯದ ಆದಾರಲಿ ಆಚರಣೆ ಆಗ್ವು ಹಬ್ಬ. ಅದ್ರಲಿ ಒಂದ್ ಹೆಣ್ಣ್ ಪ್ರದಾನ ಸಂಸ್ಕøತಿನ ಇಸಿಕಂಡ್ ಅದನೇ ಹೋಲ್ವು ಅನುಕರಣೆನ ಬೂಮಿಗೆ ಹೋಲಿಸಿ, ಹೆಣ್ಣ್‍ಗೆ ಮಾನ್ಯತೆನ ಹೆಚ್ಚಿಸ್ವ ಕೆಲ್ಸ. ಇದೇ ಆದಿಮಸಂಸ್ಕøತಿ ಮಾಡ್ದ ಕೆಲ್ಸ. ಎರಡನೆಯದ್ದ್ ಗ್‍ಂಡ್ ಪ್ರದಾನ ಸಂಸೃತಿನ ಮುಂದೆತಾಕೆ, ಅದೇ ಕೆಡ್ಡಸ ಆಚರಣೆಲಿ ಬೇಟೆಯ ಅಂಸನ ಸೇರ್ಸಿ, ಹೆಣ್ಣ್‍ನ ಗೆಲ್ಲುವ ತಂತ್ರ. ಇದ್ ಪ್ರತಿಸಂಸ್ಕøತಿ ಮಾಡ್ದ ಕೆಲ್ಸ. ಈ ಎರಡ್‍ನೂ ಕೂಡ ತುಳು ಸಾಮುದಾಯಿಕ ಜೀವನಲಿ ಗ್‍ಂಡ್ ಮತ್ತ್ ಹೆಣ್ಣ್‍ನ ಸಂಬಂಧನ ತೀರ್ಮಾನ ಮಾಡ್ವ ನೆಲೆಲಿ ಆಚರಣೆ ಆದೇಂತ ಹೇಳಕ್. ಇಲ್ಲಿ ಬರ್ವ ಖೆಡ್ಡ ಎಂಬ ಪದಕ್ಕೆ ‘ಹೊಂಡ’ ಮತ್ತ್ ‘ಬೇಟೆ’ಂತಾ ಹೇಳ್ವ ಅರ್ತ ಉಟ್ಟು. ಅನೇಕ ವಿದ್ವಾಂಸರ್‍ಗ ಕೆಡ್ಡಸನ ‘ಬೇಟೆ’ ಅಂತ ಹೇಳ್ವ ಅರ್ತಲಿ ಬಂದುಟೂಂತ ಹೇಳ್ದೋ. ಆದರೆ ‘ಬೇಟೆ’ ಕೆಡ್ಡಸ ಆಚರಣೆಯ ಒಂದು ಭಾಗನೇ ಹೊರತ್ ಅದೇ ಕೆಡ್ಡಸ ಅಲ್ಲ. ಈ ಹಿನ್ನಲೆಲಿ ಡಾ. ಕೆ ಕಮಲಾಕ್ಷ ಇವು ಕೆಡ್ಡಸನ ‘ಕೆಡು ದಿವಸ’ ಅಂತ ವಿವರಣೆ ಮಾಡಿರ್ದು ಸರಿಯಾಗುಟು ಅಂತ ನನ್ನ ಅನಿಸಿಕೆ. ಆದರ್‍ಂದ ತುಳುನಾಡ್‍ಲಿ ಎಲ್ಲ ಬಾಸೆ ಜನಾಂಗದ ಹೆಣ್ಣ್ ಗ್ಂಡ್ ಇಬ್ಬರುನೂ ಸಮಾನಗಿ ಆಚರಣೆ ಮಾಡ್ವ ಒಂದ್ ಹಬ್ಬ ಕೆಡ್ಡಸ. ಇಲ್ಲಿ ಹೆಣ್ಣ್ ತನ್ನ ಪ್ರಾಕೃತಿಕ ನಿಯಮಕ್ಕನುಸಾರ ಈ ಹಬ್ಬನ ಆಚರಣೆ ಮಾಡ್ರೆ, ಗ್‍ಂಡ್ ತನ್ನ ನಿಯಮದಂತೆ ಬೇಟೆ ಮೂಲಕ ಆಚರಣೆ ಮಾಡ್ವೆ. ಇಬ್ಬರು ಇದಕೆ ಬೂಮಿನ ಒಂದ್ ಸಂಕೇತವಾಗಿ ಬಳ್ಸಿಕ್ಕಂಡವೆ. ಆದ್ರೆ ಇಬ್ಬರೂ ತಮ್ಮತಮ್ಮ ಉಳ್ಸಿಕೆ ನೋಡುವ ಹಾಂಗೆನೇ ಕಂಡದೆ.

ಡಾ.ಸುಂದರ ಕೇನಾಜೆ

(ದಿನಾಂಕ: 16.02.2020 ರಂದು ಕರ್ನಾಟಕ ಅರೆಭಾಷೆ ಮತ್ತು ಸಂಸ್ಕøತಿ ಅಕಾಡೆಮಿಯ ಆಶ್ರಯದಲ್ಲಿ ನಡೆದ ಕೆಡ್ಡಸ ಗೌಜಿ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧ)

Comments