ಪೈಲಾರು ಸಂಚಿಕೆ

ಹೀಗೆ ಸಂಸ್ಕøತಿಗೊಂದು ಅರ್ಥ

‘ಸಾಂಸ್ಕøತಿಕ’ ಎನ್ನುವುದಕ್ಕೆ ಇರುವ ಅರ್ಥವೇ ಬುದ್ದಿ ವಿಕಾಸ ಅಥವ ನಾಗರಿಕ ಎಂದು. ಆದರೆ ನಮ್ಮಲ್ಲಿ ಬಹುತೇಕವಾಗಿ ಅದಕ್ಕೆ ಮನರಂಜನೆ ಎಂಬ ಅರ್ಥವನ್ನು ಮಾತ್ರ ಸೀಮಿತಗೊಳಿಸಲಾಗಿದೆÉ. ಬುದ್ದಿ ವಿಕಾಸಗೊಳಿಸುವಂತಹ ಅಥವ ವ್ಯಕ್ತಿಯನ್ನು ನಾಗರಿಕನನ್ನಾಗಿಸುವ ಕಾರ್ಯಕ್ರಮವನ್ನು ಆಯೋಜಿಸಿದಾಗ ಮಾತ್ರ ಅದರ ಅರ್ಥವ್ಯಾಪ್ತಿಗೆ ತಲುಪಲು ಸಾಧ್ಯ. ಅನೇಕರಿಗೆ ಬೇಕಾಬಿಟ್ಟಿ ನಗಿಸುವ ಅಥವಾ ಕ್ಷಣಿಕ ಸಂತೋಷವನ್ನು ನೀಡುವ ಕಾರ್ಯಕ್ರಮಗಳೆಂದರೆ ಇಷ್ಟ. ಅಂತಹಾ ಕಾರ್ಯಕ್ರಮಗಳಿಗೆ ಭಾಗವಹಿಸುವವರ ಸಂಖ್ಯೆಯೂ ಹೆಚ್ಚು. ಬುದ್ದಿವಿಕಾಸಗೊಳ್ಳುವಂತಹಾ ಕಾರ್ಯಕ್ರಮಗಳು ಅರ್ಥವಾಗುವುದಿಲ್ಲ ಅಥವ ಅದು ಒಳ್ಳೆಯದಿಲ್ಲ ಎಂಬಿತ್ಯಾದಿ ಕಾರಣ ನೀಡಿ ದೂರವಾಗುವವರನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಗ್ರಾಮೀಣ ಪ್ರದೇಶದ ಜನ ಮನರಂಜನಾ ಪರಿಕಲ್ಪನೆಯಿಂದ ತಕ್ಷಣಕ್ಕೆ ಹೊರಬಂದು ಬುದ್ದಿ ವಿಕಾಸದ ಕಾರ್ಯಕ್ರಮಗಳಿಗೆ ಸ್ಪಂದಿಸಲಾರರು ಎನ್ನುವ ಸತ್ಯವನ್ನು ಅರಿತು ಮನರಂಜನೆಯ ಜೊತೆಗೆ ಗ್ರಾಮೀಣ ಜನರ ವಿಕಾಸಕ್ಕಾಗಿ ನಿರಂತರ ಕಾರ್ಯಕ್ರಮ ಸಂಘಟಿಸುವ ಕೆಲವು ಸಂಘಟನೆಗಳು ನಮ್ಮ ತಾಲೂಕಿನಲ್ಲಿವೆ. ಅಂತಹಾ ಸಂಘಟನೆಗಳು ಯಾವುದೇ ಸಂದರ್ಭದಲ್ಲಾದರೂ ಗುಣಮಟ್ಟ ಮತ್ತು ಬೌದ್ಧಿಕ ಚುರುಕುತನ ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನೇ ಸಂಘಟಿಸುತ್ತವೆ. ಅವುಗಳಲ್ಲಿ ಪೈಲಾರು ಫ್ರೆಂಡ್ಸ್ ಕ್ಲಬ್‍ಗೆ ತನ್ನದೇ ಆದ ಸ್ಥಾನವಿದೆ. ಇದರ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಾರಣ ನಾನು ಈ ಸಂಘಟನೆಯ ಇಚ್ಚಾಶಕ್ತಿಯನ್ನು ಹತ್ತಿರದಿಂದ ಕಂಡಿದ್ದೇನೆ. ಇವರು ಸಂಘಟಿಸಿದ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ ನಾನು ಮೇಲೆ ಹೇಳಿದ ಗುಣಗಳಿವೆ.

ಇತ್ತೀಚಿನ ದಿನಗಳಲ್ಲಿ ತುಳು ನಾಟಕ, ಆರ್ಕೆಸ್ಟ್ರಾ, ಮತ್ತೆ ಕೆಲವು ರೆಕಾರ್ಡ್ ಡಾನ್ಸ್‍ಗಳಿಗೆ ಜನ ಮುಗಿಬಿದ್ದು ಹೋಗುತ್ತಿರುತ್ತಾರೆ. ನಮ್ಮ ಅನೇಕ ಸಂಘಟನೆಗಳೂ ಜನ ಸೇರುತ್ತಾರೆ ಎನ್ನುವ ಏಕೈಕ ಕಾರಣಕ್ಕಾಗಿ ಇಂತಹದ್ದೇ ಕಾರ್ಯಕ್ರಮಗಳನ್ನು ಸಂಘಟಿಸುತ್ತಲೂ ಇರುತ್ತವೆ. ಆದರೆ ಇದರಿಂದ ಜನರಲ್ಲಿ ಸಾಂಸ್ಕøತಿಕ ಪ್ರಜ್ಞೆ ಜಾಗೃತವಾಗುವುದಿಲ್ಲ ಮತ್ತು ಮಾನಸಿಕ ವಿಕಾಸ ಆಗುವುದಿಲ್ಲ ಎನ್ನುವ ಅರಿವು ಈ ಸಂಘಟಕರಿಗೂ ಇರುವುದಿಲ್ಲ. ಈ ಕಾರಣದಿಂದಾಗಿ ನಮ್ಮ ಸುತ್ತಮುತ್ತ ಪ್ರದರ್ಶನಗೊಳ್ಳುತ್ತಿರುವ ಅದೆಷ್ಟೋ ಕಾರ್ಯಕ್ರಮಗಳು ಅನೇಕ ಬಾರಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತವೆÉ. ಕ್ರಮೇಣ ಪ್ರಜ್ಞಾವಂತರು ಇಂತಹಾ ಕಾರ್ಯಕ್ರಮಗಳಿಂದ ದೂರವಾಗುತ್ತಾರೆ. ಇದು ಇಂದು ಗ್ರಾಮೀಣ ಪ್ರದೇಶಗಳಿಗೂ ಹೆಚ್ಚು ದಾಳಿ ಇಡುತ್ತಿದೆ. ಅದಕ್ಕೆ ಪೈಲಾರು ಫ್ರೆಂಡ್ಸ್ ಕ್ಲಬ್‍ನಂತಹಾ ಸಂಘಟನೆಗಳು ಸಮರ್ಪಕವಾದ ಉತ್ತರವನ್ನೇ ನೀಡುತ್ತಿವೆ. ಇಲ್ಲಿ ಸಂಘಟಕರಲ್ಲಿರುವ ಪ್ರಜ್ಞಾವಂತಿಕೆ ಅವರು ಸಂಘಟಿಸುವ ಕಾರ್ಯಕ್ರಮಗಳಲ್ಲಿ ವ್ಯಕ್ತವಾಗುತ್ತಿದೆ. ತಾಳಮದ್ದಳೆ,ಬಡಗು ಯಕ್ಷಗಾನ,ಶಾಸ್ತ್ರೀಯ ನೃತ್ಯ ರೂಪ,ಸಂಗೀತ ಮತ್ತು ನಾಡಿನ ಬೇರೆಬೇರೆ ಕಲಾಪ್ರಕಾರಗಳ ಪರಿಚಯ ಮೇಲೆ ಹೇಳಿದ ಸಾಂಸ್ಕøತಿಕ ಎನ್ನುವ ಅರ್ಥಕ್ಕೆ ಪರ್ಯಾಯ. ಇದು ಒಂದಷ್ಟು ಪ್ರಜ್ಞಾವಂತ ಪ್ರೇಕ್ಷಕರನ್ನು ಹುಟ್ಟು ಹಾಕುವಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

(ಪೈಲಾರು ಸ್ಮರಣ ಸಂಚಿಕೆ ಪ್ರಕಟಿತ ಜೂನ್ 2014) ಡಾ.ಸುಂದರ ಕೇನಾಜೆ


Comments