ನೀನಾಸಂ ಸಂಸ್ಕøತಿ ಶಿಬಿರ
ಐದು ದಿನಗಳ
ನೀನಾಸಂ ಸಂಸ್ಕøತಿ ಶಿಬಿರ
ಅತ್ಯಂತ ಮಹತ್ವದ ಶಿಬಿರ ಎನ್ನುವ
ಅನುಭವ ಕೊಟ್ಟಿತು. ಬುದ್ಧಿ ಮತ್ತು ಭಾವ
ಎರಡನ್ನೂ ಸಮತೂಕದಲ್ಲಿ ಪ್ರಚೋದಿಸುವಂತೆ ನಡೆದದ್ದೇ ಈ ಮಹತ್ವಕ್ಕೆ ಕಾರಣ. ಕಲೆಯ
ಸಾಂಸ್ಕøತಿಕ ಮತ್ತು ಅದರ
ವೈಚಾರಿಕ ನೆಲೆಗಳನ್ನು ಪ್ರಸ್ತುತಪಡಿಸುವಲ್ಲಿ ಈ ಶಿಬಿರ ಯಶಸ್ವಿಯಾಗಿದೆ,
ಇದು ಶಿಬಿರ ಮುಗಿದ ಒಂದೆರಡು
ದಿನಗಳ ನಂತರ ಹೆಚ್ಚು ಸ್ಪಷ್ಟವಾಗುತ್ತದೆ.
ಅಂದರೆ ನೀನಾಸಂ ಸಂಸ್ಕøತಿ
ಆವರಣದಿಂದ ಹೊರಬಂದಾಗ ಉಂಟಾಗುವ ಒಂದು ನಿರ್ವಾತ
ಸ್ಥಿತಿ ಶಿಬಿರದ ಮಹತ್ವವನ್ನು ಖಚಿತಪಡಿಸುತ್ತದೆ.
ಪ್ರಾಯಶಃ ನಾನು ಮೊದಲ ಬಾರಿ
ಭಾಗವಹಿಸುದರಿಂದ ಹೀಗಾಗಿರುವ ಸಾಧ್ಯತೆಯೂ ಇದೆ. ಕಲೆ
ಮತ್ತು ಕಲಾನುಭವಕ್ಕೆ ಸಂಬಂಧಿಸಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು
ಮಂಡಿಸಿದ ವಿಚಾರ ಹಾಗೂ ಪ್ರಾತ್ಯಕ್ಷಿಕೆ
(ಒಂದೆರಡು ಹೊರತುಪಡಿಸಿ) ಹೊಸ ದೃಷ್ಟಿಕೋನವೊಂದನ್ನು ಬೆಳೆಸುವಲ್ಲಿ
ಸಹಕಾರಿಯಾಗಿದೆ. ಆಶಯ ಘನವಾಗಿದ್ದಾಗ ಪ್ರತಿಫಲವೂ
ಉನ್ನತವಾಗಿರುತ್ತದೆ ಎನ್ನುವುದಕ್ಕೆ ಈ ಶಿಬಿರ ಉದಾಹರಣೆ.
ಸಂಘಟನೆಯಲ್ಲಿನ ಸಲೀಸು(ಅನುಭವದ ಹಿನ್ನಲೆಯಾಗಿರಬಹುದು),
ಪ್ರತಿಪಾದನೆಯ ಶಿಸ್ತು, ವಸ್ತುನಿಷ್ಟ ಉದ್ದೇಶ
ಇವುಗಳಿಗೆ ನೀನಾಸಂ ಸಂಸ್ಕøತಿ
ಶಿಬಿರ ಮಾದರಿ ಎನ್ನುವ ಪ್ರಾಮಾಣಿಕ
ಅನಿಸಿಕೆ ನನ್ನದು. ಪ್ರಬುದ್ಧ ತಂಡವೊಂದು
ಅನುಭವ ಮತ್ತು ಮಾಹಿತಿಯಿಂದ ಜ್ಞಾನವನ್ನು
ಹೇಗೆ ಕಟ್ಟಿಕೊಡಬಹುದು ಎನ್ನುದಕ್ಕೆ ಈ ಶಿಬಿರ ನಿದರ್ಶನ.
ಹಾಗೆಂದು
ಒಂದೆರಡು ಬದಲಾವಣೆ ಮಾಡಬಾರದೆಂದಲ್ಲ. ಶಿಬಿರ
ನಿರ್ದೇಶಕರ ಪ್ರಾತ್ರ ಇನ್ನೂ ಒಂದಷ್ಟು
ಸ್ಪಷ್ಟಗೊಂಡರೆ ಉತ್ತಮ. ಅಂದರೆ ಮಾತನಾಡಲೇಬೇಕಾದಲ್ಲಿ
ಮಾತನಾಡುವ( ಪ್ರಸೆಂಟೇಶನ್ ಟ್ರ್ಯಾಕ್ ತಪ್ಪಿದಾಗ), ಬೇಡವಾದಲ್ಲಿ ಬಿಟ್ಟುಬಿಡುವ(ನಾಟಕ ಚರ್ಚೆ) ಕಾರ್ಯ
ನಡೆಯಬೇಕಿತ್ತು. (ಅದರೊಂದಿಗೆ ಅವರ ಸೀಮಿತ ಮತ್ತು
ಖಚಿತ ಮಾತೂ ಖುಷಿಕೊಟ್ಟಿತು) ವಿಷಯ
ಪ್ರತಿಪಾದಕರು (ಬಹುತೇಕರು) ಪ್ರತಿಪಾದನೆ ಮಾಡಿದ ಕೊನೆಗೆ ಶಿಬಿರದ
ದ್ಯೇಯವಾಕ್ಯಕ್ಕೆ ಸಂಬಂಧ ಕಲ್ಪಿಸುವ ಸೂಚನೆಯೊಂದನ್ನು
ನೀಡಬೇಕಾಗಿತ್ತು. ನಾಟಕದ ಬಗೆಗಿನ ಚರ್ಚೆಯ
ಉದ್ದೇಶ ಅರ್ಥವಾಗಲಿಲ್ಲ (ಆದರೂ ಚರ್ಚೆಯಲ್ಲಿ ಭಾಗವಹಿಸಿದ್ದೇನೆ!)
ಊಟ-ವಸತಿ ಸಮರ್ಪಕ. (ನಾವಿದ್ದ
ಕೋಣೆಯಲ್ಲಿ ಒಂದಷ್ಟು ವಿದ್ಯಾರ್ಥಿಗಳೇ ತುಂಬಿದ್ದರಿಂದ
ನಾವು ಇಲ್ಲಿಯೂ ಮಾಸ್ತರರಾಗಬೇಕಾಯಿತು) ಮಲೆನಾಡಿನ
ಮಳೆಯನ್ನು ಗಣಿಸದೇ ಮುನ್ನಡೆಸುವ ಎಲ್ಲಾ
ವ್ಯವಸ್ಥೆ ನೀನಾಸಂನದ್ದು ಎನ್ನುವುದೂ ಸಂತೋಷದ ವಿಷಯ. ಕೆ.ವಿ ಅಕ್ಷರ ಮತ್ತು
ಬಳಗಕ್ಕೆ ಕೃತ್ಪೂರ್ವಕ ಕೃತಜ್ಞತೆಗಳು.
ಡಾ.ಸುಂದರ ಕೇನಾಜೆ
Comments
Post a Comment