ಬಾಂಧವ್ಯದ ನವೀಕರಣ
ಪ್ರಯಾಣ ಮುಂದುವರಿಯುತ್ತದೆ. ಮತ್ತೆ #ಹೊಸ #ಹೊಸ ಸಹ ಯಾತ್ರಿಗಳ ಸಾಂಗತ್ಯ ಹೊಸೆದುಕೊಳ್ಳುತ್ತದೆ. ಹಾಗೆ ಬದುಕು ಕೂಡಾ ಮುಂದುವರಿಯುತ್ತದೆ.
ಪ್ರತಿ ನಿಲ್ದಾಣಗಳಲ್ಲಿ ಜತೆಯಾದವರ #ಸಂಪರ್ಕ ಮತ್ತು #ಸಾಂಗತ್ಯ ನಿಡುಗಾಲ ಇರಿಸಿಕೊಳ್ಳುವುದು ಆಧುನಿಕ ಬದುಕಿನ ಜಂಜಾಟದಲ್ಲಿ ಕಷ್ಟದಾಯಕವಾದರೂ ಅಂತಹ ಮನಸ್ಥಿತಿ ಇರಬೇಕಾದುದು ಅನಿವಾರ್ಯವೇ ಸರಿ.
ಅಲ್ಲವೇ?
ವಿಷಯಕ್ಕೆ ಬರುತ್ತೇನೆ. ನಾನು ಮತ್ತು ನನ್ನ ನಿಡುಗಾಲದ ಗೆಳೆಯ #ಡಾ. #ಸುಂದರ್ #ಕೇನಾಜೆ ಜತೆಯಾಗಿ ಸುಳ್ಯದ ಪತ್ರಿಕೋದ್ಯಮ ಪಡಸಾಲೆ ಪ್ರವೇಶಿಸಿದವರು. ಹತ್ತತ್ತಿರ ಕಾಲು ಶತಮಾನದ ಹಿಂದೆ.
#ಸುದ್ದಿ #ಬಿಡುಗಡೆ ಪತ್ರಿಕೆಯ ಗೌರವ ವರದಿಗಾರರಾಗಿ ಜತೆಯಾಗಿಯೇ ಪತ್ರಿಕಾ ಗೀಳು ಹಚ್ಚಿಕೊಂಡೆವು. ಸುಂದರ್ ಬಳಿಕ ಉನ್ನತ ಶಿಕ್ಷಣ ಪಡೆದು #ಶಿಕ್ಷಕ ವೃತ್ತಿಗೆ ಸೇರಿದರೂ ಪತ್ರಿಕೋದ್ಯಮ, ಸಾಹಿತ್ಯ, ಜಾನಪದ, ಸಂಶೋಧನೆ, ಸಂಘಟನೆ ಹೀಗೆ ಬಹು ಆಯಾಮದಲ್ಲಿ ನಾವೆಲ್ಲಾ ಬೆರಗು ಮೂಡಿಸುವ ರೀತಿಯಲ್ಲಿ ಬೆಳೆದುನಿಂತಿದ್ದಾರೆ. ಕಡಿಮೆ ವರ್ಷದಲ್ಲಿ ಹೆಚ್ಚು ಸಾಧನೆ ಮಾಡಿದ್ದಾರೆ. ಜೀವದ ಗೆಳೆಯನೊಬ್ಬನ ಸಾಧನೆಯ #ಸಂತೋಷ ನನ್ನದೂ ಹೌದು.
ನಾನು #ಪತ್ರಿಕೋದ್ಯಮವನ್ನೇ ವೃತ್ತಿಯಾಗಿಸಿದೆ. ಸ್ವಲ್ಪ ಪ್ರವೃತ್ತಿಗಳೂ ಜತೆಗಿವೆ. ಕ್ರಮಿಸಿದ ಸಹಯಾತ್ರಿಗಳೊಂದಿಗೆ ಉತ್ತಮ ಸಂಬಂಧವನ್ನೇ ಇರಿಸಿ ಮುನ್ನಡೆಯುತ್ತಿದ್ದೇನೆ.
ಇಂಥ ಕೇನಾಜೆಯವರು ಹೀಗೆ ಸಹಯಾತ್ರಿಗಳಾದ ಎಲ್ಲರನ್ನೂ ಒಂದೆಡೆ ಸೇರಿಸುವ #ಅನುಕರಣೀಯ ಕಾರ್ಯ ಮಾಡಿದ್ದಾರೆ. ಈ ಪೈಕಿ ಅನೇಕರು ಪತ್ರಿಕಾ ಕ್ಷೇತ್ರದಲ್ಲೇ ಮುಂದುವರಿದವರಾಗಿದ್ದರೆ ಮತ್ತನೇಕರು ಕೃಷಿ, ಉದ್ಯಮ, ಶಿಕ್ಷಣ, ರಾಜಕಾರಣ ಹೀಗೆ ಅನ್ಯಾನ್ಯ ಜವಾಬ್ದಾರಿ ಹೊತ್ತುಕೊಂಡವರು.
ಸುಳ್ಯದ ಶಾಂತಿನಗರದಲ್ಲಿರುವ #ಕೇನಾಜೆಯವರ ಮನೆಯಲ್ಲಿ ಅವರು ನಮಗೆಲ್ಲಾ #ಸುಂದರ ಆತಿಥ್ಯ ನೀಡಿದರು. ಒಂದಷ್ಟು ಮಾತುಕತೆ, ಕೆಲವರನ್ನು ಅನೇಕ ವರ್ಷಗಳ ಬಳಿಕ ಕಂಡ ಸಂತೋಷ, ಅನುಭವ ಹಂಚಿಕೆ, ನಗು, ಸೆಲ್ಫಿ.. ಹೀಗೆ ವಿಸ್ತಾರವಾಯಿತು ಖುಷಿ.
ಗ್ರಾಮೀಣ ಪತ್ರಿಕೋದ್ಯಮದ ಇತಿಹಾಸ ಪುರುಷ, ಇಂದು ಡಿಜಿಟಲ್ ಪತ್ರಿಕೋದ್ಯಮಕ್ಕೆ ತೆರೆದುಕೊಂಡ ಸಾಧಕ, ನೂರಾರು ಮಂದಿಗೆ ಅನ್ನ ನೀಡುತ್ತಿರುವ ಸುದ್ದಿ ಸಂಸ್ಥೆಯ #ಡಾ.#ಯು.#ಪಿ.#ಶಿವಾನಂದರು ಬದುಕಿನ ಸಪ್ತತಿ ಸಂಭ್ರಮಕ್ಕೆ ಕಾಲಿರಿಸಿರುವ ಹಿನ್ನೆಲೆಯಲ್ಲಿ ಕೇನಾಜೆಯವರು ಅವರನ್ನು ಗೌರವಿಸಿದರು. ಡಾಕ್ಟ್ರು ಮಾರ್ಗರ್ಶಕ ಮಾತುಗಳನ್ನಾಡಿದರು.
ನನ್ನ ಪತ್ರಿಕೋದ್ಯಮ ಗುರುಗಳೂ, ಮಾರ್ಗದರ್ಶಕರೂ ಆದ #ಹರೀಶ್ #ಬಂಟ್ವಾಳ್, ಆರಂಭದ ದಿನಗಳಲ್ಲಿ ಪ್ರೇರಣೆ ಪ್ರೋತ್ಸಾಹ ನೀಡುತ್ತಾ ಈಗಲೂ ಹಿತೈಷಿಗಳಾಗಿರುವ ಜಯಪ್ರಕಾಶ್ ಕುಕ್ಕೆಟ್ಟಿ, ಜೆ.ಕೆ.ರೈ, ಕೃಷ್ಣ ಬೆಟ್ಟ, ಚಂದ್ರಶೇಖರ ನಂಜೆ, ಶ್ರೀಧರ್ ಕಜೆಗದ್ದೆ, ಲೈನ್ಕಜೆ ರಾಮಚಂದ್ರ, ರಮೇಶ್ ನೀರಬಿದಿರೆ, ಶಿವಪ್ರಸಾದ್ ಕೇರ್ಪಳ, ಗಂಗಾಧರ ಮಟ್ಟಿ, ಸಂಶುದ್ದೀನ್ ಸಂಪ್ಯ, ಬಾಲಕೃಷ್ಣ ಶಿಬಾರ್ಲ, ದಿನೇಶ್ ಕುಕ್ಕುಜಡ್ಕ, ಎಸ್.ವಿ.ಪ್ರಸಾದ್, ಹರೀಶ್ ರೈ ಉಬರಡ್ಕ, ಸುರೇಶ್ ಕಣೆಮರಡ್ಕ, ಗಿರೀಶ್ ಅಡ್ಪಂಗಾಯ, ಗಂಗಾಧರ ಕಲ್ಲಪ್ಪಳ್ಳಿ, ಕಿರಣ್ ಪ್ರಸಾದ್ ಕುಂಡಡ್ಕ, ಪದ್ಮನಾಭ ಮುಂಡೋಕಜೆ, ಲೋಕೇಶ್ ಗುಡ್ಡೆಮನೆ, ವಿನಯ್ ಜಾಲ್ಸೂರು, ಸದಾಶಿವ ಕುಕ್ಕುಡೇಲು, ತೇಜೇಶ್ವರ್ ಕುಂದಲ್ಪಾಡಿ, ಶಿವಪ್ರಸಾದ್ ಆಲೆಟ್ಟಿ, ಶರೀಫ್ ಜಟ್ಟಿಪ್ಪಳ್ಳ, ದಯಾನಂದ ಕೊರತ್ತೋಡಿ, ಅಚ್ಚುತ ಅಟ್ಲೂರು, ಶಂಕರ್ ಪೆರಾಜೆ, ಹಸೈನಾರ್ ಜಯನಗರ, ವೆಂಕಪ್ಪ ನೆಕ್ರಾಜೆ, ಲೋಕೇಶ್ ಗುಡ್ಡೆಮನೆ, ರವಿ ಕುಮಾರ್, ರವಿಪ್ರಕಾಶ್ ಸಿ.ಪಿ., ಉಮೇಶ್ ಕೋಲ್ಚಾರ್, ಪದ್ಮನಾಭ ಅರಂಬೂರು, ಗಣೇಶ್ ಕುಕ್ಕುದಡಿ, ಲೋಕೇಶ್ ಊರುಬೈಲು, ಕೃಷ್ಣಪ್ಪ ಬಂಬಿಲ ... ಹೀಗೆ ನಾವೆಲ್ಲಾ ಸೇರಿ ಬಾಂಧವ್ಯ ನವೀಕರಿಸಿದೆವು. ಬೆಂಗಳೂರು, ಮಂಗಳೂರುಗಳಲ್ಲಿರುವ ಕೆಲವರಿಗೆ ಬರಲಾಗಿರಲಿಲ್ಲ.
ಅಸಾಧಾರಣ ಕ್ಷಣಗಳನ್ನು ಕಟ್ಟಿಕೊಟ್ಟ ಕೇನಾಜೆ #ಪ್ರೀತಿಗೆ ಮತ್ತು ಸಂಕಲ್ಪ ಶಕ್ತಿಗೆ ವಂದಿಸುವೆ. ಗೋಪಾಲ ಮಣಿಯಾಣಿ ಕೇನಾಜೆ ,ರಾಜೇಶ್ವರಿ ಮೇಡಂ, ಕೃತಸ್ವರ ದೀಪ್ತ, ಸೃಜನಾದಿತ್ಯ ಶೀಲ ಜತೆಗಿದ್ದು ಆತಿಥ್ಯ ನೀಡಿದರು.
ಇಂತಹ #ಭಾವ ಬಾಂದವ್ಯ ನಿಡುಗಾಲ ಹಸಿಯಾಗಿ ಹಸಿರಾಗಿ ಜಾರಿಯಲ್ಲಿರಲಿ ಅಂತ ಆಶಿಸುವೆ.
24.02.2020 ದುರ್ಗಾಕುಮಾರ್ ನಾಯರ್ ಕೆರೆ
Comments
Post a Comment