ನೆನಪೇ ಸಂಗೀತ
ಕೆಲವು ವರ್ಷಗಳ ಹಿಂದೆ ಕೆಂಡಸಂಪಿಗೆ ಬ್ಲಾಗ್ ನಲ್ಲಿ ಪ್ರಕಟಗೊಂಡ ವಿದ್ಯಾಭೂಷಣರ ಜೀವನ ಕಥನ ಪುಸ್ತಕರೂಪ ಪಡೆದಿದೆ. ಸನ್ಯಾಸತ್ವದಿಂದ ಬಿಡುಗಡೆ ಪಡೆದು ಸಂಗೀತವನ್ನು ಗಟ್ಟಿಗೊಳಿಸಿದ ವಿದ್ಯಾಭೂಷಣರು ತನ್ನ ಬದುಕಿನ ಹಾದಿಯ ಅನುಭವಗಳನ್ನು ಇಲ್ಲಿ ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ಆದ್ದರಿಂದಲೋ ಏನೋ ಈ ಕೃತಿ ಸರಾಗ ಓದಿಸಿಕೊಳ್ಳುತ್ತದೆ. ಅಲ್ಲದೇ ಸನ್ಯಾಸ ತೊರೆದ ಘಟನೆಗಳ ಬಗ್ಗೆ ಜನಸಾಮಾನ್ಯರಿಗಿರುವ ಕುತೂಹಲವನ್ನು ತಣಿಸಿಬಿಡುತ್ತದೆ. ಎಲ್ಲೂ ಭಾವನಾತ್ಮಕ ನಿಲುವುಗಳ ವಿವರಣೆಗಳಿಗೆ ಎಡೆಕೊಡದೇ ಸಮಚಿತ್ತದಿಂದ ಮಾಡಿರುವ ನಿರೂಪಣೆ ಕೃತಿಯನ್ನು ಗಟ್ಟಿಗೊಳಿಸಿದೆ.
ಓದಿದ ನಂತರ, ಎಲ್ಲಾ ಸಿದ್ಧಾಂತ, ತತ್ವ, ನಂಬಿಕೆಗಳಿಗಿಂತ ಅವನವನಿಗೆ ಅವನವನ ಪ್ರಾಮಾಣಿಕ ಬದುಕೇ ದೊಡ್ಡದು ಎನ್ನುವ ಉತ್ತರಕ್ಕೆ ಬರಲೂ ಸಾಧ್ಯವಾಗುತ್ತದೆ. ಆಧ್ಯಾತ್ಮ ಗುರುವಾಗಿ, ಸಾಂಸ್ಕ್ರತಿಕ ಸಂಘಟಕನಾಗಿ,ಸಂಗೀತ ಕಲಾವಿದನಾಗಿ ಯಶಸ್ಸು ಕಾಣುವ ಹುಡುಕಾಟವನ್ನು ಕೃತಿ ಸ್ಪಷ್ಟವಾಗಿ ತೆರೆದಿಡುತ್ತದೆ. ತೋಳ್ಪಾಡಿಯವರ ಗಂಭೀರ ಮುನ್ನುಡಿ ವಿದ್ಯಾಭೂಷಣರ ಬದುಕಿನ ತೀರ್ಮಾನಗಳಿಗೆ ನೀಡಿದ ಸೈದ್ಧಾಂತಿಕ ಮುದ್ರೆಯೂ ಆಗಿದೆ. ಆದ್ದರಿಂದ ಬಿಡಿಯಾಗಿ ಓದಿದವರೂ ಮತ್ತೆ ಇಡಿಯಾಗಿ ಧಾರಾಳ ಓದಬಹುದು.
03.03.2019 ಡಾ.ಸುಂದರ ಕೇನಾಜೆ
Comments
Post a Comment