ಪಾರ್ತಿಸುಬ್ಬ ಪ್ರಶಸ್ತಿ ಸರಕಾರ ನೀಡುವ ಪ್ರಶಸ್ತಿಯಾಗಲಿ
ಯಕ್ಷಗಾನ
ಕೇತ್ರದಲ್ಲಿ ಉನ್ನತ ಸಾಧನೆ ಮಾಡಿದವರಿಗಾಗಿ
ಸದ್ಯ ಇರುವ ಶ್ರೇಷ್ಠ ಪ್ರಶಸ್ತಿ
ಪಾರ್ತಿಸುಬ್ಬ. ಇದು ಕರ್ನಾಟಕ ಯಕ್ಷಗಾನ
ಬಯಲಾಟ ಅಕಾಡೆಮಿ ನೀಡುತ್ತಿರುವ ವಾರ್ಷಿಕ
ಪ್ರಶಸ್ತಿ. ಇದರ ಮೊತ್ತ ಒಂದು
ಲಕ್ಷ ರೂಪಾಯಿ. ಪಾರ್ತಿಸುಬ್ಬನ ಹೆಸರಿನಲ್ಲಿ
ಪ್ರಶಸ್ತಿಯೊಂದನ್ನು ನೀಡಬೇಕು, ಅದು ಯಕ್ಷಗಾನದ ಉನ್ನತ
ಪ್ರಶಸ್ತಿಯಾಗಬೇಕು ಮತ್ತು ದೊಡ್ಡ ಮೊತ್ತವನ್ನೂ
ನೀಡಬೇಕೆಂದು ಆಕಾಡೆಮಿ ಸ್ಥಾಪನೆಯಾದ ಆರಂಭ
ಕಾಲದಲ್ಲಿ ಪ್ರತಿದಿನ ಮಾತನಾಡುತ್ತಿದ್ದವರು ಯಕ್ಷಗಾನ ಅಕಾಡೆಮಿಯ ಪ್ರಥಮ
ಅಧ್ಯಕ್ಷರಾಗಿದ್ದ ಕುಂಬಳೆ ಸುಂದರ ರಾಯರು.
ಅದೇ ರೀತಿ ಅಕಾಡೆಮಿಯ ಒಂದು
ಸಾಮಾನ್ಯ ಸಭೆಯಲ್ಲಿ ಈ ಪ್ರಶಸ್ತಿಯ ನಿಯಮಗಳ
ಬಗ್ಗೆ ಚರ್ಚೆಯೂ ನಡೆದಿತ್ತು. ಆ
ಚರ್ಚೆಯ ಪ್ರಕಾರ ಈ ಪ್ರಶಸ್ತಿಗೆ
ತೆಂಕು ಮತ್ತು ಬಡಗು ಯಕ್ಷಗಾನದಲ್ಲಿ
ಉನ್ನತ ಸಾಧನೆ ಮಾಡಿದವರನ್ನು ಮಾತ್ರ
ಪರಿಗಣಿಸಬೇಕು, ಇದು ರಾಜ್ಯ ಸರಕಾರದ
ಹಂತದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಡ
ಮಾಡುವ ಇತರ(ಪಂಪ ಪ್ರಶಸ್ತಿ,
ಜಾನಪದ ಶ್ರೀ, ಗುಬ್ಬಿ ವೀರಣ್ಣ,
ಕನಕ ಪ್ರಶಸ್ತಿ, ಅತ್ತಿಮಬ್ಬೆ, ಶಾಂತಲಾ, ಸಂತ ಶಿಶುನಾಳ,
ಪುರಂದರ, ಜಕ್ಕಣಾಚಾರಿ, ವೆಂಕಟಪ್ಪ ಪ್ರಶಸ್ತಿ ಇತ್ಯಾದಿ) ಪ್ರಶಸ್ತಿಗಳಂತೆ ಕೊಡಲ್ಪಡಬೇಕು. ಆ ಪ್ರಶಸ್ತಿಗಳಿಗೆ ನೀಡುವ
ಮೊತ್ತವನ್ನೇ ಇದಕ್ಕೂ ನೀಡಬೇಕು ಎಂದೆಲ್ಲ
ಚರ್ಚೆಯಾಗಿತ್ತು. ಅಕಾಡೆಮಿಯ ಈ ತೀರ್ಮಾನಕ್ಕೆ ಆಗಿನ
ಮುಖ್ಯಮಂತ್ರಿಗಳು ಒಪ್ಪಿಗೆಯನ್ನೂ ನೀಡಿದ್ದರು. ಆದರೆ ಆ ಕಾಲದಲ್ಲಿದ್ದ
ಕನ್ನಡ ಮತ್ತು ಸಂಸ್ಕøತಿ
ಇಲಾಖೆಯ ನಿರ್ದೇಶಕರೊಬ್ಬರಿಗೆ ಯಕ್ಷಗಾನ ಅಕಾಡೆಮಿಯ ಬಗ್ಗೆ
ಸದಾಭಿಮಾನವಿರಲಿಲ್ಲ. ಆದ್ದರಿಂದ ಈ ತೀರ್ಮಾನ ಸದ್ದಿಲ್ಲದೆ
ಬಿದ್ದು ಹೋಗಿ ಕೇವಲ ಅಕಾಡೆಮಿ
ಪ್ರಶಸ್ತಿಯಾಗಿ, ಒಂದು ಲಕ್ಷ ರೂಗೆ
ಮಾತ್ರ ಸೀಮಿತವಾಗಿ ಉಳಿಯಿತು.(ಇದೇ ನಿರ್ದೇಶಕರ ಪ್ರಭಾವದಿಂದ
ಆರಂಭದಲ್ಲಿ ತೆಂಕು ಮತ್ತು ಬಡಗಿಗೆ
ಸೀಮಿತವಾಗಿದ್ದ ಯಕ್ಷಗಾನ ಅಕಾಡೆಮಿಗೆ ಬಯಲಾಟವೂ
ಸೇರಿಕೊಂಡದ್ದು)
ಕಳೆದ
ಏಪ್ರೀಲ್ ತಿಂಗಳು ಕನ್ನಡ ಮತ್ತು
ಸಂಸ್ಕøತಿ ಇಲಾಖೆಗೆ ಕಾರ್ಯ
ನಿಮಿತ್ತ ಹೋಗಿದ್ದಾಗ ಅಲ್ಲಿಯ ಹಿರಿಯ ಅಧಿಕಾರಿಯೊಬ್ಬರು
ಅಕಾಡೆಮಿ ಆರಂಭದಲ್ಲಿ ‘ಪಾರ್ತಿಸುಬ್ಬ ಪ್ರಶಸ್ತಿ’
ಬಗ್ಗೆ ಮಾಡಿದ ಚರ್ಚೆಯನ್ನು ನೆನಪಿಸಿ,
ಕರಾವಳಿ ಭಾಗದಿಂದ ಈ ಬಗ್ಗೆ
ಮತ್ತೆ ಹಕ್ಕೊತ್ತಾಯ ಬಂದರೆ ಉತ್ತಮವೆಂದು ತಿಳಿಸಿದರು.
ಅದರಂತೆ, ಕನ್ನಡ ಸಂಸ್ಕøತಿ
ಇಲಾಖೆಗೆ ಈಗಾಗಲೇ ನನ್ನ ವೈಯಕ್ತಿಕ
ನೆಲೆಯ ಪತ್ರವೊಂದನ್ನು ಬರೆದಿದ್ದೇನೆ.(ಅಕಾಡೆಮಿ ಈ ಬಗ್ಗೆ
ಕಾರ್ಯಪ್ರವೃತ್ತವಾಗುತ್ತಿದೆ ಎನ್ನುವ ಮಾಹಿತಿ ಇದೆ)
ಇದೇ ರೀತಿ ಕರಾವಳಿಯ ಯಕ್ಷಗಾನ
ಸಂಘಟನೆಗಳು, ಅಭಿಮಾನಿಗಳು, ಜನಪ್ರತಿನಿಧಿಗಳು, ಮಾಧ್ಯಮಗಳು ಉನ್ನತ ಮಟ್ಟದಲ್ಲಿ ಒತ್ತಾಯಿಸಿದ್ದೇ
ಆದಲ್ಲಿ ‘ಪಾರ್ತಿಸುಬ್ಬ ಪ್ರಶಸ್ತಿ’
ಅಕಾಡೆಮಿಯ ಬದಲು ಯಕ್ಷಗಾನಕ್ಕೆ ಸರಕಾರ
ನೀಡುವ ಉನ್ನತ ಪ್ರಶಸ್ತಿಯಾಗುತ್ತದೆ. ಅದರ
ಮೊತ್ತ ಒಂದು ಲಕ್ಷದಿಂದ ಐದು
ಲಕ್ಷಕ್ಕೆ ಏರುತ್ತದೆ.(ಮುಂದಿನ ವರ್ಷದಿಂದ ಸರಕಾರ
ನೀಡುವ ಪ್ರಶಸ್ತಿಗಳ ಮೊತ್ತ ಮೂರು ಲಕ್ಷದಿಂದ
ಐದಕ್ಕೆ ಏರಿಸುವ ಬಜೆಟ್ ಘೋಷಣೆಯಂತೆ)
ಅಲ್ಲದೇ ಪ್ರಶಸ್ತಿಯ ಘನತೆಯೂ ಹೆಚ್ಚುತ್ತದೆ. ಜೊತೆಗೆ
ತೆಂಕು-ಬಡಗಿನ (ಪ್ರತ್ಯೇಕ ಅಕಾಡೆಮಿ
ಸ್ಥಾಪನೆಯಾದಲ್ಲಿ) ಯೋಗ್ಯ ಕಲಾವಿದನಿಗೆ ಸಿಕ್ಕರೆ
ಅದೊಂದು ಒಳ್ಳೆಯ ಕೊಡುಗೆಯೂ ಆಗುತ್ತದೆ.
ಈ ಬಗ್ಗೆ ಆಸಕ್ತರು
ಇಲಾಖೆಗೆ ಮತ್ತು ಸರಕಾರಕ್ಕೆ ಒತ್ತಡ
ಹಾಕುವುದು ಹಾಗೂ ಪ್ರಭಾವ ಬೀರುವುದು
ಉತ್ತಮವೆಂದು ನನ್ನ ಅಭಿಪ್ರಾಯ.
ಡಾ.ಸುಂದರ
ಕೇನಾಜೆ
Comments
Post a Comment