ನಿನ್ನೆ ಮೈಸೂರಿನ ಅರಿವು ಶಾಲೆಯಲ್ಲಿ ನಡೆದ ಉತ್ಕೃಷ್ಟ ತಾಳಮದ್ದಳೆ. ಯಕ್ಷ ರಂಗದ 'ಎ' ಗ್ರೇಡ್ ಕಲಾವಿದರರಾದ ಡಾ.ಎಂ.ಪ್ರಭಾಕರ ಜೋಶಿ, ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗ ಭಟ್, ಎಂ.ಕೆ.ರಮೇಶ್ ಆಚಾರ್ ಮುಮ್ಮೇಳದಲ್ಲಿ. ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕೃಷ್ಣ ಪ್ರಸಾದ್ ಉಳಿತ್ತಾಯ, ಮುರಾರಿ ಕಡಂಬಳಿತ್ತಾಯ ಹಿಮ್ಮೇಳದಲ್ಲಿ, ಮಾಯಾ ವಿಲಾಸ ಪ್ರಸಂಗ. ಸಂಯೋಜನೆ ನನ್ನದು. ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಮೆನೇಜಿಂಗ್ ಟ್ರಸ್ಟಿ ಡಾ.ಎಂ.ಸಿ.ಮನೋಹರರವರ ಒತ್ತಾಸೆ. ಟ್ರಸ್ಟ್ ಸದಸ್ಯರ, ಶಿಕ್ಷಕರ, ಪೋಷಕರ ಸಹಕಾರ. ಮಳೆಯ ಮಧ್ಯೆಯೂ ರಾತ್ರಿ ಹೆಚ್ಚುಕಡಿಮೆ ಹತ್ತೂಕಾಲ ಗಂಟೆಯವರೆಗೆ ಇನ್ನೂರು ಇನ್ನೂರೈವತ್ತು ಕೇಳುಗರು.
14-07-2019



Comments
Post a Comment