ಪಿಪ್ಲಾಂತ್ರಿ








ಪಿಪ್ಲಾಂತ್ರಿ


ಪಿಪ್ಲಾಂತ್ರಿ ರಾಜಸ್ಥಾನದ ರಾಜ್ ಸಮಂಡ್ ಜಿಲ್ಲೆಯ ಒಂದು ಗ್ರಾಮ. ಇಚ್ಛಾಶಕ್ತಿಯ ಗ್ರಾ.ಪಂ ಅಧ್ಯಕ್ಷನಿಂದ ಏನೆಲ್ಲಾ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಗ್ರಾಮ ಅತ್ಯುತ್ತಮ ನಿದರ್ಶನ. ಈ ಗ್ರಾಮದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ನಡೆದ ಕ್ರಾಂತಿಕಾರಿ ಬದಲಾವಣೆಗಳು ಕನ್ನಡದಲ್ಲೊಂದು ಪುಟ್ಟ ಪುಸ್ತಕವಾಗಿ ಹೊರಬಂದಿದೆ. ಹಿರಿಯ ಲೇಖಕ ಡಾ.ಶಿವರಾಮ್ ಪೈಲೂರು ಇದನ್ನು ಹೊರತಂದಿದ್ದಾರೆ. ಭೂಪಟದಲ್ಲಿ ನೋಡುವ ರಾಜಸ್ಥಾನದಂತಹಾ ಬರಡು ನೆಲದಲ್ಲೂ ಹೇಗೆ ಹಸಿರು ಕಾಣಬಹುದು ಎನ್ನುವುದನ್ನು ಇಲ್ಲಿ ಪರಿಚಯಿಸಿದ್ದಾರೆ. ಶ್ಯಾಮ ಸುಂದರ ಪಾಲೀವಾಲ್ ಪಿಪ್ಲಾಂತ್ರಿಯ ಗ್ರಾ.ಪಂ ಸರಪಂಚ್ ಆಗಿ 2005 ರಲ್ಲಿ ಆಯ್ಕೆಯಾಗುತ್ತಾರೆ.ರಾಜಸ್ಥಾನದ ರಾಜ್ ಸಮಂಡ್ ಜಿಲ್ಲೆಯ ಒಂದು ಗ್ರಾಮ. ಇಚ್ಛಾಶಕ್ತಿಯ ಗ್ರಾ.ಪಂ ಅಧ್ಯಕ್ಷನಿಂದ ಏನೆಲ್ಲಾ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಗ್ರಾಮ ಅತ್ಯುತ್ತಮ ನಿದರ್ಶನ. ಈ ಗ್ರಾಮದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ನಡೆದ ಕ್ರಾಂತಿಕಾರಿ ಬದಲಾವಣೆಗಳು ಕನ್ನಡದಲ್ಲೊಂದು ಪುಟ್ಟ ಪುಸ್ತಕವಾಗಿ ಹೊರಬಂದಿದೆ. ಹಿರಿಯ ಲೇಖಕ ಡಾ.ಶಿವರಾಮ್ ಪೈಲೂರು ಇದನ್ನು ಹೊರತಂದಿದ್ದಾರೆ. ಭೂಪಟದಲ್ಲಿ ನೋಡುವ ರಾಜಸ್ಥಾನದಂತಹಾ ಬರಡು ನೆಲದಲ್ಲೂ ಹೇಗೆ ಹಸಿರು ಕಾಣಬಹುದು ಎನ್ನುವುದನ್ನು ಇಲ್ಲಿ ಪರಿಚಯಿಸಿದ್ದಾರೆ.
ಶ್ಯಾಮ ಸುಂದರ ಪಾಲೀವಾಲ್ ಪಿಪ್ಲಾಂತ್ರಿಯ ಗ್ರಾ.ಪಂ ಸರಪಂಚ್ ಆಗಿ 2005 ರಲ್ಲಿ ಆಯ್ಕೆಯಾಗುತ್ತಾರೆ. ಆ ನಂತರ ಆ ಗ್ರಾಮದಲ್ಲಿ ನಿಜವಾದ ಅರ್ಥದ ಅಭಿವೃದ್ಧಿ ನಡೆಯುತ್ತದೆ. "ಮಗಳು,ನೀರು,ಮರ,ಗೋಮಾಳ ಉಳಿಯಬೇಕು, ಪ್ರಕೃತಿಯ ಜೊತೆಯಲ್ಲಿ ಸಾಗಬೇಕು" ಎನ್ನುವ ಘೋಷ ವಾಕ್ಯದೊಂದಿಗೆ ಅದರ ಕಾರ್ಯರೂಪ ನಡೆಯುತ್ತದೆ. ಹೆಣ್ಣುಮಗು ಹುಟ್ಟಿದರೆ 111 ಗಿಡ ನೆಟ್ಟು ಪೋಷಿಸುವ, ಮರುಭೂಮಿಯಲ್ಲೂ ನೀರು ಜಿನುಗುವಂತೆ ಮಾಡುವ, ಬೋಳುಗುಡ್ಡೆಯನ್ನು ಹಸಿರಾಗಿಸುವ ಕಾರ್ಯ ನಿರಂತರ ನಡೆಯುತ್ತದೆ. ಇದೀಗ ಲಕ್ಷಾಂತರ ಗಿಡಮರ, ಹಳ್ಳಕೊಳ್ಳ, ಹಸಿರು ವನದಿಂದ ಈ ಗ್ರಾಮ ತುಂಬಿ ಹೋಗಿದೆ. ದೇಶವಿದೇಶದ ಆಸಕ್ತರನ್ನು ಈ ಗ್ರಾಮ ಸೆಳೆಯುತ್ತಿದೆ. ಇದು ನಿಜವಾದ ಅಭಿವೃದ್ಧಿ ಎನ್ನುವುದನ್ನು ಸಾರಿ ಹೇಳುತ್ತಿದೆ. ಹೀಗೆ ಈ ನಲ್ವತ್ತು ಪುಟಗಳ ಪುಸ್ತಕ ಒಂದೇ ಓದಿಗೆ ಅನೇಕ ಕುತೂಹಲವನ್ನೂ ನಮ್ಮಲ್ಲೂ ಇದನ್ನು ನಡೆಸಬಹುದಲ್ಲಾ ಅಂತ ಕೇಳಿಬಿಡುತ್ತದೆ.
ಜಾಗತಿಕ ತಾಪಮಾನದಲ್ಲಿ ನಮ್ಮ ಕೊಡುಗೆಯೂ ಕಡಿಮೆಯಲ್ಲ. ಅದಕ್ಕೆ ಉತ್ತರ ರೂಪದಲ್ಲಿ ಇಂತಹಾ ಕೆಲಸಗಳನ್ನು ನಡೆಸಲು ಈ ಕೃತಿ ಮುನ್ನುಡಿಯಾಗಬಹುದು. ಜಾಗೃತಿ ಮೂಡಿಸುವ ಕೃತಿ ರಚಿಸಿದ ಪೈಲೂರು ಹಾಗೂ ಮುದ್ರಿಸಿದ ಆಕೃತಿಯ ಕಲ್ಲೂರು ನಾಗೇಶ್ ರವರಿಗೆ ಅಭಿನಂದನೆಗಳು.


21.11.2019                                                                                      ಡಾ.ಸುಂದರ ಕೇನಾಜೆ


Comments