ಗ್ರಾಮೀಣ ಗೋಷ್ಠಿ
ಪೆರ್ಲಂಪ್ಪಾಡಿಯ ಒಂದಷ್ಟು ಸ್ನೇಹಿತರು ಮೊನ್ನೆ ಒಂದು ಚಿಕ್ಕ ಚೊಕ್ಕ ಗೋಷ್ಠಿ ಏರ್ಪಡಿಸಿದ್ದರು. ಗ್ರಾಮೀಣ ಬದುಕಿಗೆ ಆಧುನಿಕ ಸವಾಲುಗಳು ಎನ್ನುವ ವಿಷಯವನ್ನು ಕೊಟ್ಟು ಮಾತನಾಡಲು ಹೇಳಿದ್ದರು. ನಾನು ಸುಮಾರು ನಲವತ್ತೈದು ನಿಮಿಷ ಮಾತನಾಡಿದೆ. ನಂತರ ಕೆಲಹೊತ್ತು ಈ ವಿಚಾರದಲ್ಲಿ ಪ್ರಾಮಾಣಿಕ ಚರ್ಚೆಯೂ ನಡೆಯಿತು. ನಿಜ ಕಾಳಜಿಯ ಐವತ್ತರವತ್ತು ಆಸಕ್ತರೂ ಭಾಗವಹಿಸಿದ್ದರು. ಸಂತೃಪ್ತಿಯ ಚರ್ಚೆ, ಮಾತುಕತೆ, ಆತ್ಮೀಯತೆ ಖುಷಿಕೊಟ್ಟಿತು. ಸಂಘಟಿಸಿದ ಎಲ್ಲರಿಗೂ ಧನ್ಯವಾದಗಳು. ಈ ರೀತಿಯ ಪ್ರಾಮಾಣಿಕ ಚಿಂತನೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುಹೆಚ್ಚು ಸಂಘಟಿತಗೊಳ್ಳಬೇಕಿದೆ.
Comments
Post a Comment