ಬಸವಣ್ಣ
ಬಸವಣ್ಣರ ಬಗ್ಗೆ ಇಂದು ಒಂದು ಕಡೆ ಮಾತನಾಡಿದ ಕೆಲವು ತುಣುಕು, ಹದಿನೆಂಟನೆ ಶತಮಾನದ ನಂತರದ ಭಾರತೀಯ ನಾಯಕರ ಸಮಕಾಲೀನರಾಗಿ ಹನ್ನೆರಡನೇ ಶತಮಾನದ ಬಸವಣ್ಣ ಕಂಡು ಬರುತ್ತಾರೆ. ಅಂದರೆ ಹದಿನೆಂಟನೇ ಶತಮಾನದ ನಂತರದಲ್ಲಿ ಭಾರತೀಯ ನಾಯಕರುಗಳು ತೀವೃತರವಾಗಿ ಯೋಚಿಸಿದ ಮತ್ತು ಕಾರ್ಯೋನ್ಮುಖಗೊಳಿಸಿದ ಕಾರ್ಯಗಳನ್ನು ಎಂಟುನೂರು ವರ್ಷಗಳ ಹಿಂದೆ ಬಸವಣ್ಣರು ಕೈಗೆತ್ತಿಕೊಂಡಿದ್ದರು. ಇದೇ ಬಸವಣ್ಣರ ಸಾರ್ವಕಾಲಿಕ ವ್ಯಕ್ತಿತ್ವ. ಬಹುಶಃ ಈ ಇಸವಿಯಲ್ಲಿದ್ದು(2019) ಇನ್ನೂ ಎಂಟುನೂರು (2819)ವರ್ಷಗಳ ನಂತರ ಏನಾಗಬೇಕೆಂದು ಈಗಲೇ ಜಾಗೃತಗೊಳ್ಳುವುದು ಅಥವ ವಾಸ್ತವ ವಿಧಾನದಲ್ಲಿ ಪ್ರವೃತಗೊಳ್ಳುವುದು ಒಂದು ರೀತಿಯ ಅತಿಮಾನುಷ ನೆಲೆಯ ಕಾರ್ಯ. ಈ ನೆಲೆಯಲ್ಲಿ ಬಸವಣ್ಣರು ಗುರುತಿಸಿಕೊಂಡವರು. ಅಂದರೆ ಕಲ್ಪನೆ ಮತ್ತು ವಾಸ್ತವತೆಯನ್ನು ಸಮನಾಂತರವಾಗಿ ಕಾಣುತ್ತಾ ಸಾಗಿದ ಬಸವಣ್ಣ ಇದರ ತಕ್ಷಣದ ಪ್ರತಿಫಲಕ್ಕಾಗಿ ಬಹಳ ತಲೆಕೆಡಿಸಿಕೊಳ್ಳಲಿಲ್ಲ. ಯಾಕೆಂದರೆ ಆ ಕಾಲದ ಸಮಾಜದಲ್ಲಿ ಕಲ್ಪನೆ ಮತ್ತು ವಾಸ್ತವದಲ್ಲಿ ಬಹಳ ಅಂತರವಿದ್ದದ್ದು ಸಹಜ ಮತ್ತು ಸತ್ಯವಾಗಿತ್ತು. ಇಪ್ಪತ್ತೊಂದನೇ ಶತಮಾನದಲ್ಲೇ ಈ ಅಂತರ ಅಗಾಧವಾಗಿರುವಾಗ ಅಂದು ಇದ್ದುದರಲ್ಲಿ ಅಶ್ಚರ್ಯ ಪಡಬೇಕಾಗಿಲ್ಲ. ಆದ್ದರಿಂದಲೇ ಬಿಜ್ಜಳನ ದುರಂತ ಮತ್ತು ಬಸವಣ್ಣರ ಸಂಗಮದಲ್ಲಿನ ಐಕ್ಯ ನಡೆದು ಹೋಯಿತು. ಆ ಕಾಲದಲ್ಲಿ ಈ ಎರಡೂ ಘಟನೆ ಈ ಇಬ್ಬರೂ ಆಶ್ಚರ್ಯಪಡುವಂತದ್ದೂ ಆಗಿರಲಿಲ್ಲ.( ಇಂದೇ ಇವು ಅನಿವಾರ್ಯವಾಗುವ ಅನೇಕ ಪ್ರಸಂಗಗಳು ನಡೆಯುವ ಈ ಹೊತ್ತಲ್ಲಿ ಅಂದು ಇದು ಅನಿರೀಕ್ಷಿತವೇನೂ ಆಗಿರಲಿಲ್ಲ.)
ಸಾಹಿತ್ಯ (ವಚನ), ಚರಿತ್ರೆ ಮತ್ತು ಜಾನಪದ ಈ ಮೂರು ಬಸವಣ್ಣರನ್ನು ಜೀವಂತವಾಗಿರಿಸಿದ ಸತ್ಯಗಳು. ಇದು ಅವರ ಧಾರ್ಮಿಕ ಪ್ರತಿನಿಧಿತ್ವಕ್ಕಿಂತಲೂ ಶ್ರೇಷ್ಠವಾದುದು. ಕಾಯಕ ನಿಷ್ಠೆ ಎನ್ನುವ ವಾಸ್ತವ ಆಲೋಚನೆಗಳ ಬಸವಣ್ಣನವರ ಧಾರ್ಮಿಕತೆ, ಆ ಕಾಲದ ಭಕ್ತಿ ಚಳವಳಿಗಿಂತ ತೀರ ಭಿನ್ನವಾದುದು. ಪುರಾಣ ಅಥವ ಭಾರತೀಯ ಆಧ್ಯಾತ್ಮದ ಚೌಕಟ್ಟನ್ನು ಮೀರಿದ ಕಾಯಕ ಭಕ್ತಿ ವಾಸ್ತವವಾದರೂ ಇಂದಿಗೂ ಒಪ್ಪಿತವಾದುದಾಗಿಲ್ಲ. ಆದ್ದರಿಂದಲೇ ಇಂದಿಗೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಸಾಧ್ಯವಾಗುತ್ತಿರುವುದು.
ಆದ್ದರಿಂದ ಇಂದು ನಾವು ಬಸವಣ್ಣರನ್ನು ನೆನಪಿಸಬೇಕಾದುದು, ಎಂಟುನೂರು ವರ್ಷಗಳ ಹಿಂದೆ ಜಾತಿ ಇಲ್ಲದ, ಕಾಯಕ ಧರ್ಮದ, ಲಿಂಗ ಸಮಾನತೆಯ ಸಮಾಜ ಕಟ್ಟಿ ಎಂದು ಹೇಳುತ್ತಾ ಬಲಿದಾನ ಮಾಡಿಕೊಂಡ ವಾಸ್ತವ ಚಿಂತನೆಗಳನ್ನು ಮತ್ತು ಇವು ಎಷ್ಟರಮಟ್ಟಿಗೆ ಈಡೇರಿವೆ ಎನ್ನುವ ಹಿನ್ನಲೆಗಳಿಗಾಗಿ. ನಾವು ತಯಾರಿಸಿದ ಸಂವಿಧಾನವನ್ನು ಹೊರತುಪಡಿಸಿ ಸಾರ್ವಜನಿಕವಾಗಿ ಒಪ್ಪಿತವಾಗುವ ಚಿಂತನೆಗಳು ನಮ್ಮಲ್ಲೇನಿವೆ? ಬಸವಣ್ಣರ ವಾಸ್ತವ ಚಿಂತನೆ ಸಂವಿಧಾನಕ್ಕೂ ಮೂಲ ರೂಪ ಮತ್ತು ಆಧಾರ ಸ್ತಂಭ, ಅದರ ಹೊರತಾಗಿನ ವಿರೂಪಗಳು ಅಂದೂ ಇತ್ತು ಇಂದೂ ಇದೆ. ಇದು ಮತ್ತೆ ಹನ್ನೆರಡನೇ ಶತಮಾನದ ಸಾಮಾಜಿಕ ಸ್ಥಿತಿಯ ಪ್ರತಿಬಿಂಬವೂ ಆಗಬಹುದು. ಅದು ಅಂದು ಬಸವಣ್ಣನನ್ನು ಭೌತಿಕವಾಗಿ ಅಳಿಸಿದ್ದರೆ ಇಂದು ಇನ್ನೊಬ್ಬನನ್ನು ಅಳಿಸುತ್ತಿರುತ್ತದೆ. ಆದ್ದರಿಂದ ಈ ಅಳಿಸುವ ಪ್ರಕ್ರಿಯೆಯ ಬಗ್ಗೆ ನಾವು ಎಚ್ಚರಗೊಳ್ಳಬೇಕಾದ ಅನೇಕ ಚಾರಿತ್ರಿಕ ಸತ್ಯಗಳನ್ನು ಈ ಜಯಂತಿಯ ಮೂಲಕ ನಾವು ಕಂಡುಕೊಳ್ಳಬೇಕಾಗಿದೆ. ಈ ಎಚ್ಚರ ನಮ್ಮದಾಗಲಿ ಎಂದು ಆಶಿಸುತ್ತೇನೆ.
07.05.2019 ಡಾ.ಸುಂದರ ಕೇನಾಜೆ

Comments
Post a Comment