ಯಕ್ಷ ಶಿಕ್ಷಣ ಸಚಿವರ ಮಾತು
ಮಡಿಕೇರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿರುವ ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸುಳ್ಯದಲ್ಲಿ ಬೆಳಿಗಿನ ತಿಂಡಿಗಾಗಿ ಒಂದಷ್ಟು ಹೊತ್ತು ನಿಂತರು. ಆ ಹೊತ್ತು ಇತ್ತೀಚೆಗೆ ಬಿಡುಗಡೆಗೊಂಡ ಯಕ್ಷಗಾನ ಪಠ್ಯಪುಸ್ತಕ (ಜೂನಿಯರ್)ವನ್ನು ಅವರಿಗೆ ನೀಡಿದೆವು. ಕರಾವಳಿಯಲ್ಲಿ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿರುವ ಮತ್ತು ಮುಂದೆ ಕಲಿಸಬೇಕಾದ ರೀತಿ ನೀತಿಗಳ ಬಗ್ಗೆ ವಿವರಿಸಿದೆವು. ಬಹಳ ಆಸಕ್ತಿಯಿಂದ ಆಲಿಸಿದ ಸಚಿವರು, ಹೊಟೇಲ್ ನಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಈ ರೀತಿಯ ವಾಟ್ಸ್ ಆಪ್ ಸಂದೇಶವೊಂದನ್ನು ಕಳುಹಿಸಿದರು. ಸಚಿವರಿಗೆ ಧನ್ಯವಾದ ಸಲ್ಲಿಸುತ್ತಾ ಅದನ್ನಿಲ್ಲಿ ಯಥಾವತ್ತು ದಾಖಲಿಸುತ್ತಿದ್ದೇನೆ.
*******
ಪುತ್ತೂರಿನಿಂದ ಮಡಿಕೇರಿಗೆ ಹೋಗುವ ದಾರಿಯಲ್ಲಿ ಸುಳ್ಯದ ಬಳಿ ಈ ಇಬ್ಬರು ಶಿಕ್ಷಕರು ಸಿಕ್ಕಿದರು.
ಪುತ್ತೂರು ತಾಲ್ಲೂಕಿನ ಪಾವೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾದ ಪ್ರಕಾಶ ಮುಡಿತ್ತಾಯ
ಮತ್ತು
ಸುಳ್ಯ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ECO ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸುಂದರ ಕೇನಾಜೆ.
ಇವರಿಬ್ಬರ ಆಸಕ್ತಿ ಮತ್ತು ಪರಿಶ್ರಮದಿಂದ ರಚನೆಯಾಗಿರುವ ಯಕ್ಷಗಾನ ಕುರಿತ ಪಠ್ಯಪುಸ್ತಕವನ್ನು ನೀಡಿದರು.
ಉಡುಪಿಯಲ್ಲಿ ಸುಮಾರಷ್ಟು ಶಾಲೆಗಳಲ್ಲಿ ಮಕ್ಕಳು ಆಸಕ್ತಿಯಿಂದ ಯಕ್ಷಗಾನ ಕಲಿಯುತ್ತಿರುವ ಮಾಹಿತಿ ನೀಡಿದರು.
ಗಣಿತ ಕಲಿಸಲಿಕ್ಕೂ ಯಕ್ಷಗಾನ ವನ್ನು ಹೇಗೆ ಬಳಸಿಕೊಳ್ಳಬಹುದೆಂಬ ವಿಚಾರ ತಿಳಿಸಿದರು.
ಇಂತಹ ಸೃಜನಶೀಲ ಶಿಕ್ಷಕರ ಭೇಟಿ ಆದಾಗ ನನ್ನ ಉತ್ಸಾಹ ನೂರ್ಪಾಲು ಹೆಚ್ಚುತ್ತದೆ.
Comments
Post a Comment