ಸಿರಿಬಾರಿ ಲೋಕ ತುಳುನಾಡು ಗೋಷ್ಠಿ


                                   ಸಿರಿಬಾರಿ ಲೋಕ ತುಳುನಾಡು 
            ಡಾ.ಇಂದಿರಾ ಹಗ್ಗೆಡೆಯವರ ಸಿರಿಬಾರಿ ಲೋಕ ತುಳುನಾಡು ಕೃತಿಯ ಕುರಿತ ವಿಚಾರಗೋಷ್ಠಿ ಪ್ರೊ.ಬಿ.ಎ.ವಿವೇಕ ರೈಯವರ ಅಧ್ಯಕ್ಷತೆಯಲ್ಲಿ, "ಹೆಣ್ಣಿನ ಫಲವಂತಿಕೆ ಮತ್ತು ಮಣ್ಣಿನ ಫಲವಂತಿಕೆ"ಯ ಹಿನ್ನಲೆಯಲ್ಲಿ ಸಿರಿಬಾರಿ ಲೋಕದ ಬಗ್ಗೆ ನನ್ನದೊಂದು ಪ್ರಬಂಧ. ಜೊತೆಗೆ, ಡಾ.ವಾಸುದೇವ ಬೆಳ್ಳೆ, ಡಾ.ಜ್ಯೋತಿ ಚೇಳ್ಯಾರು, ನಂದಳಿಕೆ ಬಾಲಚಂದ್ರ ರಾವ್ ಇವರಿಂದಲೂ ಒಂದೊಂದು ಪ್ರಬಂಧ ಮಂಡನೆಯಾಯಿತು. ಪ್ರೊ.ರೈಯವರ ಅಧ್ಯಕ್ಷೀಯ ನುಡಿ ಮುಂದಿನ ಅಧ್ಯಯನಗಳಿಗೆ ದಿಕ್ಸೂಚಿಯಂತಿತ್ತು. ವಿದ್ವತ್ಪೂರ್ಣ ಸಭೆ. ನಂದಳಿಕೆ ಅರಮನೆ ಚಾವಡಿಯಿಂದ ಆರಂಭವಾದ ಗೋಷ್ಠಿ ಮಳೆಯ ಕಾರಣದಿಂದ ಪಕ್ಕದ ದೇವಸ್ಥಾನದ ಸಭಾಂಗಣದಲ್ಲಿ ಮುಂದುವರಿಯಿತು. ಸಿರಿ ಮತ್ತು ಇನ್ನೂ ಅನೇಕ ಅಲೌಕಿಕ ಶಕ್ತಿಗಳು, ಮುದ್ದಣ, ಬಿಡಾರ ಕೃಷ್ಣಪ್ಪ ಈ ಮಹನೀಯರು ನಡೆದಾಡಿದ ನಂದಳಿಕೆಯಲ್ಲಿ ನಾನು ಮತ್ತು ಗೆಳೆಯ ದಿನೇಶ್ ಕುಕ್ಕುಜಡ್ಕ ನಡೆದಾಡಿದೆವು. ಸುತ್ತು ಗದ್ದೆ ,ತೆಂಗುಗಳಿಂದ ತುಂಬಿದ ಈ ನಾಡೇ ಸಮೃದ್ಧದ ಸಂಕೇತ.
02.09.2019

Comments