ದೇವಕಾನರ ಯಕ್ಷ-ಕಾನ
ಕಾನ
ಅಂದರೆ ಕಾಡು. ದೇವಕಾನ ಅಂದರೆ
ದೇವರ ಕಾಡು. ನಮ್ಮ ಅನೇಕ
ಕಾಡುಗಳನ್ನು ದೇವರಕಾಡು ಎಂದು ಕರೆಯುವ ಹೆಸರು
ಮತ್ತು ಪ್ರತೀತಿ ಇದೆ. ಎಲ್ಲಿ
ಸಂಮೃದ್ಧ ಕಾಡುಗಳು ಇರುತ್ತವೆಯೋ ಅಲ್ಲಿ
ದೇವರಿರುತ್ತಾರೆ ಎನ್ನುವುದು ಆ ಕಾಡಿನ ಬಗ್ಗೆ
ಇರುವ ಜನಪದ ನಂಬಿಕೆ. ಹಾಗೇ
ಯಕ್ಷಗಾನವನ್ನು ಒಂದು ಸಂಮೃದ್ಧ ಕಾಡಿನಂತೆ
ಪೋಷಿಸುತ್ತಾ ಬರುತ್ತಿರುವವರಲ್ಲಿ ದೇವಕಾನದ ಕೃಷ್ಣ ಭಟ್ಟರು
ಅಗ್ರಮಾನ್ಯರು. ದೇವಕಾನರವರಲ್ಲಿ ಯಕ್ಷ ಕಾನವಾಗಿ ಬೆಳೆದಿರುವುದು
ಕೃಷ್ಣ ಭಟ್ಟರ ಆರೈಕೆಯ ಫಲ.
ಯಕ್ಷ ಪರಂಪರೆಯಲ್ಲಿ ಮೇಳಗಳನ್ನು ಹೊರತು ಪಡಿಸಿ ಯಕ್ಷಗಾನ
ವೇಷಭೂಷಣಗಳು ದೊರಕುವುದು ಮತ್ತು ಅದನ್ನು ನಿರ್ವಹಿಸುವುದು
ಎಂದರೆ ಒಂದು ಮೇಳ ನಡೆಸಿದಷ್ಟೇ
ಪ್ರಾಯಾಸದ ಕಾರ್ಯ. ಈ ಪ್ರಾಯಾಸದ
ಕಾರ್ಯಕ್ಕೆ ಕಳೆದ40 ವರ್ಷಗಳಿಂದ ಕೈಹಾಕಿ,
ಹಾಕಿದ ಆ ಕೈ ಪರಿಶುದ್ಧವಾಗಿದ್ದರೆ
ಅದರಲ್ಲಿ ಯಶಸ್ಸು ಇದೆ ಎನ್ನುವುದನ್ನು
ತೋರಿಸಿಕೊಟ್ಟವರಲ್ಲಿ ದೇವಕಾನರು ಪ್ರಮುಖರು.
ಹಾಗೆಂದು ಕೃಷ್ಣ ಭಟ್ಟರು ಕೇವಲ
ಯಕ್ಷ ಸಾಮಗ್ರಿಗಳ ನಿರ್ವಾಹಕ ಮಾತ್ರನಲ್ಲ. ಸಾಮಾಗ್ರಿಗಳ ಬಗ್ಗೆ ತೀವೃ ಅಧ್ಯಯನ
ನಡೆಸಿ ಅದಕ್ಕೊಂದು ನಿಖರ ಮುಖವನ್ನೂ ನೀಡಿದವರು.
ಸ್ವತಾ ಕಲಾವಿದರಾದುದಲ್ಲದೇ ಯಕ್ಷ ಸಂಪ್ರದಾಯವನ್ನು ವಿಭಿನ್ನ
ದೃಷ್ಟಿಕೋನಗಳಿಂದ ನೋಡುತ್ತಾ ಬಂದು ವೇಷಭೂಷಣ ಮತ್ತು
ಬಣ್ಣಗಾರಿಕೆಯಲ್ಲೂ ಪರಂಪರೆಯನ್ನು ಎತ್ತಿಹಿಡಿದವರು.
ದೇವಕಾನ
ಕೃಷ್ಣ ಭಟ್ಟರು ಮೂಲತಾಃ ಕಾಸರಗೋಡು
ಜಿಲ್ಲೆಯ ಪೈವಳಿಕೆಯವರು. 1947ರಲ್ಲಿ ಜನಿಸಿದ ಇವರು
ವೃತ್ತಿಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದವರು. ಆದರೆ ಯಕ್ಷಗಾನ ಇವರ
ಅತೀತ ಪ್ರವೃತ್ತಿ. ರಂಗದ ಮೇಲೆ ವೇಷ
ಕಟ್ಟಿ ಕುಣಿಯುತ್ತಿದ್ದ ಇವರು ಮುಂದೆ ಕಟ್ಟುವ
ವೇಷದಲ್ಲೇ ಮೋಹಗೊಂಡು ಅದರ ತಯಾರಕರಾದುದು ವಿಶೇಷ.
1975 ರ ಕಾಲಘಟ್ಟದಲ್ಲಿ ಶಾಲಾ ವಾರ್ಷಿಕೋತ್ಸವಗಳಲ್ಲಿ ಮೇಕಪ್
ಮಾಡುವ ಹವ್ಯಾಸದಲ್ಲಿದ್ದ ಭಟ್ಟರು ಮುಂದೆ ಅದುವೇ
ಯಕ್ಷಗಾನವೆಂಬ ಕಲಾಕಡಲಿಗೆ ಕಾಲಿಡುವಂತೆ ಮಾಡಿತು. ಅಧ್ಯಯನಶೀಲ ಪ್ರವೃತ್ತಿಯ
ಜೊತೆಗೆ ಪರಿಶ್ರಮದ ಪರಿಪಾಠವನ್ನು ಬೆಳಸಿಗೊಂಡ ಕೃಷ್ಣ ಭಟ್ಟರು ಸ್ವಯಂ
ವೇಷ ತಯಾರಿಸುವ, ಪರಂಪರೆಯ ನಾನಾ ಮುಖವರ್ಣಿಕೆಯನ್ನು
ಕಲಿಯುವ ನೆಲೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟರು. ತನ್ನ
ಅಧ್ಯಾಪನದ ನಿವೃತ್ತಿಯ ನಂತರವಂತೂ ಅದರಲ್ಲಿ ಪರಿಪೂರ್ಣವಾಗಿ ತೊಡಗಿಕೊಂಡರು.
ಅವರ ಅದಮ್ಯ ಆಸಕ್ತಿ ಮತ್ತು
ವಿಭಿನ್ನ ಅಭಿರುಚಿ ಕರಾವಳಿ ತೆಂಕುತಿಟ್ಟಿಗೆ
ಓರ್ವ ಪ್ರಬುದ್ಧ ವರ್ಣವಿನ್ಯಾಸಕನ್ನು ಕೊಡುವಂತೆ ಮಾಡಿತು.
ಈಗ
ದೇವಕಾನರಿಗೆ 70ರ ಹರೆಯ. ಅವರ
ಬದುಕಿನ ಸುದೀರ್ಘ ಕಾಲವನ್ನು ಬಣ್ಣ
ಮತ್ತು ಬಣ್ಣಬಣ್ಣದ ವಸ್ತ್ರಗಳ ಮಧ್ಯೆ ಕಳೆದಿದ್ದಾರೆ. ಯಕ್ಷಗಾನದಲ್ಲಿ
ಹೆಚ್ಚು ಯಾರೂ ಪ್ರವೇಶಿಸಲು ಇಷ್ಟ
ಪಡದ, ಪಟ್ಟರೂ ಅಷ್ಟು ಸುಲಭದಲ್ಲಿ
ಸಿದ್ದಿಸಲಾಗದ ಕ್ಷೇತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇವಲ
ವಸ್ತ್ರಾಲಂಕಾರ ಎಂಬ ಚೌಕಟ್ಟನ್ನೂ ಮೀರಿ
ಅದರಲ್ಲಿ ಅನೇಕ ಪ್ರಯೋಗಗಳನ್ನು ಪÀರಂಪರೆ ಮತ್ತು ಯಕ್ಷಗಾನೀಯ
ನೆಲೆಯಲ್ಲಿ ನಡೆಸುತ್ತಾ ಬಂದಿದ್ದಾರೆ. ಅದೆಷ್ಟೋ ಹೊಸ ಪೀಳಿಗೆಗೆ ಬಣ್ಣಗಾರಿಕೆ
ಮತ್ತು ವೇಷಭೂಷಣದ ನಾನಾ ಕಾರ್ಯಾಗಾರ, ಕಮ್ಮಟಗಳನ್ನು
ಅಧಿಕೃತವಾಗಿ ನಡೆಸಿಕೊಟ್ಟಿದ್ದಾರೆ. ವೇದಿಕೆಯ ಕಲಾವಿದರಂತೆ ರಾತ್ರಿ
ಪೂರ್ತಿ ನಿದ್ದೆಗೆಟ್ಟು ಒಂದು ಪ್ರದರ್ಶನದ ಯಶಸ್ಸಿನಲ್ಲಿ
ಸುಖ ಕಂಡಿದ್ದಾರೆ. ಗಣೇಶ ಕಲಾವೃಂದ ಎಂಬ
ಸಂಸ್ಥೆಯನ್ನು ಹುಟ್ಟು ಹಾಕಿ ಲಾಭ,
ನಷ್ಟದ ಲೆಕ್ಕಾಚಾರಕ್ಕಿಂತಲೂ ಯಕ್ಷಗಾನದ ಮೇಲಿನ ತುಡಿತದಿಂದ ಮಹತ್ವದ
ಯಕ್ಷಸಂಪತ್ತನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ
ಹಲವು ಸನ್ಮಾನ, ಪ್ರಶಸ್ತಿ, ಪುರಸ್ಕಾರಗಳಿಗೆ
ಭಾಜನರಾಗಿದ್ದಾರೆ. ಇದೀಗ ಸಹಜವಾಗಿಯೇ ಈ
ಬಾರಿಯ ವನಜ ರಂಗಮನೆ ಪ್ರಶಸ್ತಿಯನ್ನೂ
ಸ್ವಿಕರಿಸುತ್ತಿದ್ದಾರೆ. ಯಕ್ಷಗಾನದ ಸಂಮೃದ್ಧ ಆಸ್ತಿಯನ್ನು ತನ್ನ
ಬಳಿ ಇಟ್ಟುಕೊಂಡಿರುವ ದೇವಕಾನ ಕೃಷ್ಣ ಭಟ್ಟರು
ಯಕ್ಷಲೋಕಕ್ಕೊಂದು ಆಸ್ತಿಯೇ ಸರಿ.
ಡಾ. ಸುಂದರ ಕೇನಾಜೆ
Comments
Post a Comment