ಕೆಲವು ದಶಕಗಳ ಹಿಂದಿನ ವರ್ತಮಾನದಲ್ಲಿ ಬದುಕಿದ ಗಾಂಧಿ ತನ್ನ ಮನುಷ್ಯ ಪರವಾದ ನಿಲುಗಳಿಂದ ಆ ಕಾಲದ ಬಹುಸಂಖ್ಯಾಕರಿಗೆ ಬೇಕಾಗಿದ್ದರು. ಅದೇ ಗಾಂಧಿಯ ಸಾವಿನ ನಂತರ ಆ ಬಹುಸಂಖ್ಯೆಯನ್ನು ವಿರೋಧಾತ್ಮಕ ದೃಷ್ಟಿಯಿಂದ ಕಾಣುವಂತೆ ಪ್ರೇರೇಪಿಸಲಾಯಿತು. ಇದು ಈ ಭೂತ, ವರ್ತಮಾನ, ಮತ್ತು ಭವಿಷ್ಯವನ್ನು ಸುಳ್ಳೆಂಬಂತೆ ರೂಪಿಸುವ ಹಿನ್ನಲೆಯಿಂದ . ಆದರೆ ಈ ಮೂರು ಕಾಲವೂ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕೆನ್ನುವ ನೆಲೆಯಲ್ಲಿ ಈ ನಾಟಕದ ಪ್ರದರ್ಶನಕ್ಕೆ ಮಹತ್ವವಿದೆ. ಗಾಂಧಿಯ ಮಾತಿನಲ್ಲೇ ಹೇಳುವುದಾದರೆ ಇದೂ ಒಂದು ಸತ್ಯದ ಆಗ್ರಹ. ಸಾವಿರದ ಎಂಟು ನೂರಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಾಣುವ ಮೂಲಕ ಈ ನಾಟಕ ಕರ್ನಾಟಕದಾದ್ಯಂತ ಈ ಸತ್ಯದ ಆಗ್ರಹ ನಡೆಸುತ್ತಿದೆ. ಅದಕ್ಕಾಗಿ ರಂಗಾಯಣಕ್ಕೆ ಮತ್ತು ಪರಿಕಲ್ಪನೆಗೆ ನಮನಗಳು. ಪ್ರದರ್ಶನಗೊಳಿಸುತ್ತಿರುವ ಇಲಾಖೆಗಳಿಗೆ, ಹಾಗೇ ಸುಳ್ಯದಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಟ್ಟ ಎಲ್ಲ ಸಂಘಟಕರಿಗೆ, ನಮ್ಮ ಕೇಳಿಕೆಗೆ ಸ್ಪಂದಿಸಿದ ಎಲ್ಲಾ ಶಾಲಾ ಕಾಲೇಜಿಗಳ ಮುಖ್ಯಸ್ಥರಿಗೆ ಮತ್ತು ಕ್ಷಣಕ್ಷಣದ ಕುತೂಹಲವನ್ನೂ ಕಾತರಿಸುತ್ತಾ ನಾಟಕ ವೀಕ್ಷಿಸಿದ ವಿದ್ಯಾರ್ಥಿಗಳಿಗೆ ವಂದನೆಗಳು.
27.02.2020 ಡಾ.ಸುಂದರ ಕೇನಾಜೆ
27.02.2020 ಡಾ.ಸುಂದರ ಕೇನಾಜೆ
Comments
Post a Comment